370ನೇ ವಿಧಿ ರದ್ದುಗೊಳಿಸುವ ಮುನ್ನ ಅಮಿತ್ ಶಾ ಜತೆಗೆ ನಡೆದ ಸಭೆ ಹೇಗಿತ್ತು?; ತಮ್ಮ ಪುಸ್ತಕದಲ್ಲಿ ವಿವರಿಸಿದ ಕೆಜೆಎಸ್ ಧಿಲ್ಲೋನ್

ಸೇನೆಯ ಆಯಕಟ್ಟಿನ ಶ್ರೀನಗರ ಮೂಲದ XV ಕಾರ್ಪ್ಸ್‌ನ ಮುಖ್ಯಸ್ಥರಾಗಿದ್ದ ನಿವೃತ್ತ ಲೆಫ್ಟಿನೆಂಟ್ ಜನರಲ್,ಗೃಹ ಸಚಿವರೊಂದಿಗಿನ ಭೇಟಿಯ ಬಗ್ಗೆ ಹೆಚ್ಚು ಬಹಿರಂಗಪಡಿಸಲಿಲ್ಲ. ನಮ್ಮ ಮಾತುಕತೆ ಹೊತ್ತಲ್ಲಿ ಆಲೂ ಪರಾಠ ಮತ್ತು ಪ್ರಸಿದ್ಧ ಗುಜರಾತಿ ಖಾದ್ಯ 'ಧೋಕ್ಲಾ' ಒಳಗೊಂಡಿರುವ ರುಚಿಕರವಾದ ಆಹಾರದ ಹೊರತಾಗಿ ಬಹಳಷ್ಟು ಸೂಕ್ಷ್ಮ ವಿಷಯಗಳು ಮತ್ತು ಪ್ರಮುಖ ಅಂಶಗಳು ಚರ್ಚೆಗೆ ಮೇಜಿನ ಮೇಲಿದ್ದವು".

370ನೇ ವಿಧಿ ರದ್ದುಗೊಳಿಸುವ ಮುನ್ನ ಅಮಿತ್ ಶಾ ಜತೆಗೆ ನಡೆದ ಸಭೆ ಹೇಗಿತ್ತು?; ತಮ್ಮ ಪುಸ್ತಕದಲ್ಲಿ ವಿವರಿಸಿದ ಕೆಜೆಎಸ್ ಧಿಲ್ಲೋನ್
ಅಮಿತ್ ಶಾ
Follow us
ರಶ್ಮಿ ಕಲ್ಲಕಟ್ಟ
|

Updated on: Feb 12, 2023 | 8:29 PM

ದೆಹಲಿ: ಜೂನ್ 2019 ರಲ್ಲಿ ಶ್ರೀನಗರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರ ಭೇಟಿಯು ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) 370 ನೇ ವಿಧಿಯನ್ನು ರದ್ದುಗೊಳಿಸುವ ಸರ್ಕಾರದ ಸಂಕಲ್ಪಕ್ಕೆ ಅಂತಿಮ ತೀರ್ಮಾನ ಕೈಗೊಳ್ಳುವುದಕ್ಕೆ ಆಗಿತ್ತು ಎಂದು ಎಂದು ಲೆಫ್ಟಿನೆಂಟ್ ಜನರಲ್ (ನಿವೃತ್ತ) ಕೆಜೆಎಸ್ ಧಿಲ್ಲೋನ್  (Lt General (retired) KJS Dhillon)ತಮ್ಮ ಬಿಡುಗಡೆಯಾಗಲಿರುವ ಪುಸ್ತಕದಲ್ಲಿ ಹೇಳಿದ್ದಾರೆ. ದಕ್ಷಿಣ ಕಾಶ್ಮೀರದ ಲೆಥ್‌ಪೋರಾ ಬಳಿ 2019 ರಲ್ಲಿ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ಹುತಾತ್ಮರಾದ 40 ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸಿಬ್ಬಂದಿಗೆ ಗೌರವ ಸೂಚಕವಾಗಿ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಧಿಲ್ಲೋನ್ ಅವರು ಬರೆದ ‘ಕಿತ್ನೆ ಘಾಜಿ ಆಯೆ ಕಿತ್ನೆ ಘಾಜಿ ಗಯೇ’ ಫೆಬ್ರವರಿ 14 ರಂದು ಬಿಡುಗಡೆಯಾಗಲಿದೆ. ಜೂನ್ 26, 2019 ರಂದು ಅಮಿತ್ ಶಾ ಅವರ ಭೇಟಿಯು ಘೋಷಣೆಯ ಪೂರ್ವಭಾವಿ ಎಂದು ಈಗಾಗಲೇ ಹೇಳಲಾಗಿದೆ. “ನನಗೆ ಬೆಳಿಗ್ಗೆ 2 ಗಂಟೆಗೆ ಕರೆ ಬಂದಿತು, ಬೆಳಿಗ್ಗೆ 7 ಗಂಟೆಗೆ ಗೃಹ ಸಚಿವರೊಂದಿಗಿನ ಸಭೆಯ ಬಗ್ಗೆ ನನಗೆ ತಿಳಿಸಲಾಯಿತು” ಎಂದು ಲೆಫ್ಟಿನೆಂಟ್ ಜನರಲ್ ( ನಿವೃತ್ತಿ) ಧಿಲ್ಲೋನ್ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.

ಸೇನೆಯ ಆಯಕಟ್ಟಿನ ಶ್ರೀನಗರ ಮೂಲದ XV ಕಾರ್ಪ್ಸ್‌ನ ಮುಖ್ಯಸ್ಥರಾಗಿದ್ದ ನಿವೃತ್ತ ಲೆಫ್ಟಿನೆಂಟ್ ಜನರಲ್,ಗೃಹ ಸಚಿವರೊಂದಿಗಿನ ಭೇಟಿಯ ಬಗ್ಗೆ ಹೆಚ್ಚು ಬಹಿರಂಗಪಡಿಸಲಿಲ್ಲ. ನಮ್ಮ ಮಾತುಕತೆ ಹೊತ್ತಲ್ಲಿ ಆಲೂ ಪರಾಠ ಮತ್ತು ಪ್ರಸಿದ್ಧ ಗುಜರಾತಿ ಖಾದ್ಯ ‘ಧೋಕ್ಲಾ’ ಒಳಗೊಂಡಿರುವ ರುಚಿಕರವಾದ ಆಹಾರದ ಹೊರತಾಗಿ ಬಹಳಷ್ಟು ಸೂಕ್ಷ್ಮ ವಿಷಯಗಳು ಮತ್ತು ಪ್ರಮುಖ ಅಂಶಗಳು ಚರ್ಚೆಗೆ ಮೇಜಿನ ಮೇಲಿದ್ದವು”. ಈ ಚರ್ಚೆಗಳಲ್ಲಿ ಈ ಐಚಿಹಾಸಿಕ ನಿರ್ಣಯಕ್ಕೆ ಪಾಕಿಸ್ತಾನದ ಪ್ರತಿಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದು ಸೇರಿದೆ ಎಂದು ಅವರು ಹೇಳಿದರು. “ಗೃಹ ಸಚಿವರು ಕಾರ್ಯಸೂಚಿಯೊಂದಿಗೆ ಅರಿತಿದ್ದರು.ಅವರು ನಿಸ್ಸಂಶಯವಾಗಿ ವ್ಯಾಪಕವಾದ ಸಂಶೋಧನೆ ಮತ್ತು ಹೋಮ್ ವರ್ಕ್ ಮಾಡಿದ್ದಾರೆ ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಹೇಳಿದರು.

ಸಭೆಯ ಕೊನೆಯಲ್ಲಿ, “ನನ್ನ ಸ್ಪಷ್ಟ ಮತ್ತು ವೈಯಕ್ತಿಕ ದೃಷ್ಟಿಕೋನದ ಬಗ್ಗೆ ನನ್ನನ್ನು ಕೇಳಲಾಯಿತು. ನನ್ನ ತಕ್ಷಣದ ಪ್ರತಿಕ್ರಿಯೆ ಎಂದರೆ ‘ಅಗರ್ ಇತಿಹಾಸ್ ಲಿಖ್ನಾ ಹೈ, ತೊ ಕಿಸಿ ಕೋ ಇತಿಹಾಸ್ ಬನಾನಾ ಪಡೆಗಾ’ (ನಾವು ಇತಿಹಾಸವನ್ನು ರಚಿಸಿದರೆ ಮಾತ್ರ ನಾವು ಇತಿಹಾಸವನ್ನು ಬರೆಯಬಹುದು)” ಎಂದು ಲೆಫ್ಟಿನೆಂಟ್ ಜನರಲ್ (ನಿವೃತ್ತ) ಧಿಲ್ಲೋನ್ ಪುಸ್ತಕದಲ್ಲಿ ಹೇಳಿದ್ದಾರೆ.

ಆಗಸ್ಟ್ 5, 2019 ರಂದು ಸರ್ಕಾರವು ಶ್ರೀನಗರದಲ್ಲಿ ಕೊನೆಯ ಸಭೆಯಾಗಿದ್ದು, ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370 ನೇ ವಿಧಿಯನ್ನು ರದ್ದುಗೊಳಿಸುವುದು ಮತ್ತು ಅದನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುತ್ತದೆ ಎಂದು ಘೋಷಿಸಿತು.

ಯಾವುದೇ ಜೀವ ಮತ್ತು ಆಸ್ತಿಪಾಸ್ತಿಗೆ ಹಾನಿಯಾಗದಂತೆ ನೋಡಿಕೊಳ್ಳುವುದರ ಜೊತೆಗೆ ಗಡಿಯಾಚೆಯಿಂದ ಸುಳ್ಳುಗಳನ್ನು ಪ್ರಚಾರ ಮಾಡುತ್ತಿರುವುದರಿಂದ ಅಧಿಕಾರಿಗಳು ಇಂಟರ್ನೆಟ್ ಅನ್ನು ಮುಚ್ಚಬೇಕಾಯಿತು ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಹೇಳಿದ್ದಾರೆ. “ಇದರ ಕೊನೆಯಲ್ಲಿ, ಉದ್ದೇಶವನ್ನು ಸಾಧಿಸಲಾಗಿದೆ ಎಂದು ನಾನು ನನ್ನ ಹೆಮ್ಮೆಯಿಂದ ಹೇಳುತ್ತೇನೆ” ಎಂದು ಕಾಶ್ಮೀರದ ಸ್ಥಳೀಯ ಸೇನಾ ಕಮಾಂಡ್‌ನ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಧಿಲ್ಲೋನ್ ಹೇಳಿರುವುದು ಈ ಪುಸ್ತಕದಲ್ಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ