ಶ್ರೀರಾಮನ ದೇಗುಲಕ್ಕೆ ಭೇಟಿ ನೀಡಿದ್ದ ಕುಟುಂಬದ ಮೇಲೆ 20 ಜನರಿಂದ ಹಲ್ಲೆ, ಬೆಳೆ ನಾಶ

| Updated By: Lakshmi Hegde

Updated on: Oct 30, 2021 | 11:31 AM

ಹಲ್ಲೆಗೊಳಗಾದ ಗೋವಿಂದ್​ ವಾಘೇಲಾ ಮತ್ತು ಅವರ ತಂದೆ ಜಗಭಾಯ್​ ಎಂಬುವರಿಂದ ಪ್ರತ್ಯೇಕ ದೂರು ದಾಖಲಾಗಿದೆ. ಇವರಿಬ್ಬರೂ ಒಂದೇ ತರಹದಲ್ಲಿ ದೂರು ನೀಡಿದ್ದಾರೆ. ಸುಮಾರು 20 ಜನರು ಬಂದು ನಮ್ಮ ಮೇಲೆ ದಾಳಿ ನಡೆಸಿದರು ಎಂದು ಹೇಳಿದ್ದಾರೆ.

ಶ್ರೀರಾಮನ ದೇಗುಲಕ್ಕೆ ಭೇಟಿ ನೀಡಿದ್ದ ಕುಟುಂಬದ ಮೇಲೆ 20 ಜನರಿಂದ ಹಲ್ಲೆ, ಬೆಳೆ ನಾಶ
ಸಾಂಕೇತಿಕ ಚಿತ್ರ
Follow us on

ದೇವಸ್ಥಾನಕ್ಕೆ ಭೇಟಿ ನೀಡಿದ ದಲಿತರ ಮೇಲೆ ಹಲ್ಲೆ ಸುಮಾರು 20 ಜನರು ಸೇರಿ ಹಲ್ಲೆ ನಡೆಸಿದ್ದಾರೆ. ಈ ದುರ್ಘಟನೆ ನಡೆದಿದ್ದು ಗುಜರಾತ್​​ನ ಕಚ್​ ಜಿಲ್ಲೆಯಲ್ಲಿ. ಗಾಂಧಿಧಾಮ ಎಂಬ ಪಟ್ಟಣದ ಬಳಿ ಇರುವ ಹಳ್ಳಿಯ ದೇಗುಲಕ್ಕೆ ದಲಿತ ಕುಟುಂಬದ ಆರು ಮಂದಿ ಭೇಟಿ ನೀಡಿದ್ದರು.  ಆದರೆ ಅವರು ದಲಿತರು ಎಂಬ ಕಾರಣಕ್ಕೆ ಸುಮಾರು 20 ಮಂದಿ ಅವರ ಮೇಲೆ ದಾಳಿ ನಡೆಸಿದ್ದಾರೆ. 20 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್​ ಅಧಿಕಾರಿ ಕಿಶೋರಸಿಂಹ ಝಲಾ ಹೇಳಿದ್ದಾರೆ. 

ಹಲ್ಲೆಗೊಳಗಾದ ಗೋವಿಂದ್​ ವಾಘೇಲಾ ಮತ್ತು ಅವರ ತಂದೆ ಜಗಭಾಯ್​ ಎಂಬುವರಿಂದ ಪ್ರತ್ಯೇಕ ದೂರು ದಾಖಲಾಗಿದೆ. ಇವರಿಬ್ಬರೂ ಒಂದೇ ತರಹದಲ್ಲಿ ದೂರು ನೀಡಿದ್ದಾರೆ. ಸುಮಾರು 20 ಜನರು ಬಂದು ನಮ್ಮ ಮೇಲೆ ದಾಳಿ ನಡೆಸಿದರು ಎಂದು ಹೇಳಿದ್ದಾರೆ. ಆ 20 ಮಂದಿಯನ್ನು ಹಿಡಿಯಲು ನಾವು ಎಂಟು ತಂಡಗಳನ್ನು ರಚಿಸಿದ್ದೇವೆ ಎಂದು ಝಲಾ ಮಾಹಿತಿ ನೀಡಿದ್ದಾರೆ.  ಗೋವಿಂದ್​ ವಾಘೇಲಾ ಮತ್ತು ಅವರ ಕುಟುಂಬದವರು ನೆರ್​ ಎಂಬ ಗ್ರಾಮದ ಶ್ರೀರಾಮನ ದೇವ್ಥಾನಕ್ಕೆ ಭೇಟಿ ನೀಡಿ, ಅಲ್ಲಿ ಪ್ರಾಣ ಪ್ರತಿಷ್ಠಾ ಆಚರಣೆ ನಡೆಸಿದ್ದರು. ಅಕ್ಟೋಬರ್​ 20ರಂದು ಇವರೆಲ್ಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅದಾದ ನಂತರ ಅಕ್ಟೋಬರ್​ 26ರಂದು ವಾಘೇಲಾ ಅವರ ಅಂಗಡಿಯಲ್ಲಿ ಇದ್ದಾಗ, ಸುಮಾರು 20 ಜನರು ಅವರ ಹೊಲಕ್ಕೆ ಹೋಗಿ ಬೆಳೆ ನಾಶ ಮಾಡಿದ್ದಾರೆ. ಅಲ್ಲಿಗೆ ಜಾನುವಾರುಗಳನ್ನು ಬಿಟ್ಟಿದ್ದಾರೆ ಎಂದೂ ಕೂಡ ಸಂತ್ರಸ್ತ ಕುಟುಂಬ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.  ಗೋವಿಂದ್​ ವಾಘೇಲಾ ತಾಯಿಯ ಮೇಲೆ ಕೂಡ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ: Sindagi By Election: ಮತಗಟ್ಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಬಿಜೆಪಿ ಆಕ್ಷೇಪ!

Puneeth: ಅಲ್ಪ ಜೀವಿತಾವಧಿಯಲ್ಲಿ ಅಪಾರ ಸಾಮಾಜಿಕ ಜವಾಬ್ದಾರಿ ಮೆರೆದಿದ್ದ ಚಂದನವನದ ಚಂದದ ನಟ ಪುನೀತ್​