ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ಒಂದೇ ಶಾಲೆಯ 229 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು; 8 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆ

|

Updated on: Feb 25, 2021 | 1:09 PM

ಮಹಾರಾಷ್ಟ್ರದಲ್ಲಿ ಬುಧವಾರ ಒಂದೇದಿನ ಬರೋಬ್ಬರಿ 8,807 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 80 ಸಾವಿನ ವರದಿಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 21,21,119ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 51,937ಕ್ಕೆ ಏರಿದೆ.

ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ಒಂದೇ ಶಾಲೆಯ 229 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು;  8 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆ
ಪ್ರಾತಿನಿಧಿಕ ಚಿತ್ರ
Follow us on

ಮುಂಬೈ: ಭಾರತದ ಕೆಲವು ರಾಜ್ಯಗಳು ಕೊರೊನಾ 2ನೇ ಅಲೆಗೆ ತತ್ತರಿಸುತ್ತಿವೆ. ಅದರಲ್ಲಿ ಮಹಾರಾಷ್ಟ್ರ ಕೂಡ ಒಂದು. ಕೊರೊನಾ ಭಾರತಕ್ಕೆ ಕಾಲಿಟ್ಟಾಗಿನಿಂದ ಅತಿ ಹೆಚ್ಚು ಪ್ರಕರಣ ಬೆಳಕಿಗೆ ಬರುತ್ತಿರುವುದು ಮಹಾರಾಷ್ಟ್ರದಿಂದಲೇ. ಇದೀಗ ಮತ್ತೆ ಅಲ್ಲಿ ಕೊರೊನಾ 2ನೇ ಅಲೆ ತಾಂಡವವಾಡುತ್ತಿದೆ. ಇದೀಗ ವಾಶಿಮ್​ ಜಿಲ್ಲೆಯಲ್ಲಿ ಒಂದೇ ವಸತಿ ಶಾಲೆಯ 229 ವಿದ್ಯಾರ್ಥಿಗಳು ಮತ್ತು ಮೂವರು ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದ್ದು ವರದಿಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಇಡೀ ಶಾಲೆಯ ಸುತ್ತಲಿನ ಪ್ರದೇಶವನ್ನು ಕಂಟೇನ್​ಮೆಂಟ್ ವಲಯವಾಗಿ ಘೋಷಿಸಲಾಗಿದೆ. ಈ ವಸತಿ ಶಾಲೆಯಲ್ಲಿ ಒಟ್ಟು 327 ವಿದ್ಯಾರ್ಥಿಗಳು ಇದ್ದು, ಇವರೆಲ್ಲಿ ಬಹುತೇಕರು ಅಮರಾವತಿ, ಹಿಂಗೋಲಿ, ನಂದೇದ್​, ವಾಶಿಮ್​, ಬುಲ್ಧಾನಾ ಮತ್ತು ಅಕೋಲಾದವರಾಗಿದ್ದಾರೆ.

ಇತ್ತೀಚೆಗೆ ವಾಶಿಮ್​ನ ದೇವಸ್ಥಾನವೊಂದಕ್ಕೆ ಶಿವ್ ಸೇನಾ ಸಚಿವ ಸಂಜಯ್​ ರಾಥೋಡ್​ ಭೇಟಿ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಅವರ ಬೆಂಬಲಿಗರು ಕೊವಿಡ್​ 19 ನಿಯಮಗಳನ್ನೆಲ್ಲ ಉಲ್ಲಂಘಿಸಿ ಗುಂಪುಗೂಡಿದ್ದರು. ಇದೀಗ ಅದೇ ಜಿಲ್ಲೆಯ 229 ವಿದ್ಯಾರ್ಥಿಗಳು ಕೊವಿಡ್​-19 ಸೋಂಕಿಗೆ ಒಳಗಾಗಿದ್ದು ದೊಡ್ಡ ಸುದ್ದಿಯಾಗಿದೆ.ಫೆ.14ರಂದು ಈ ವಿದ್ಯಾರ್ಥಿಗಳೆಲ್ಲ ವಸತಿ ಶಾಲೆಗೆ ಸೇರಿದ್ದರು. ಎಲ್ಲ 327 ವಿದ್ಯಾರ್ಥಿಗಳಿಗೂ ಆರ್​​ಟಿ-ಪಿಸಿಆರ್ ಟೆಸ್ಟ್ ಮಾಡಲಾಗಿತ್ತು. ಮೊದಲ ಹಂತದಲ್ಲಿ ಸುಮಾರು 21 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದ್ದು ದೃಢಪಟ್ಟಿತು ಎಂದು ರಿಸೋದ್​ ತಹಸೀಲ್ದಾರ್ ಅಜಿತ್​ ಶೇಲಾರ್ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಬುಧವಾರ ಒಂದೇದಿನ ಬರೋಬ್ಬರಿ 8,807 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 80 ಸಾವಿನ ವರದಿಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 21,21,119ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 51,937ಕ್ಕೆ ಏರಿದೆ. ಮಹಾರಾಷ್ಟ್ರದಲ್ಲಿ ಫೆ.10ರಿಂದಲೂ ಕೊವಿಡ್​ 19 ಸೋಂಕು ಏರಿಕೆಯಾಗುತ್ತಿದೆ. ಫೆ.19ರಿಂದ ಈಚೆಗೆ ಪ್ರತಿದಿನ 6000ಕ್ಕೂ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದೆ.

ಮತ್ತೆ ಲಾಕ್​ಡೌನ್
ಇನ್ನು ಇತ್ತೀಚೆಗಷ್ಟೇ ಸುದ್ದಿಗೋಷ್ಠಿ ನಡೆಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಕೊರೊನಾದ ಎರಡನೇ ಅಲೆ ನಿಜಕ್ಕೂ ಆತಂಕ ಹುಟ್ಟಿಸುತ್ತಿದೆ. ಕೊವಿಡ್​-19 ನಿಯಂತ್ರಣಕ್ಕೆ ಸಂಬಂಧಪಟ್ಟ ಎಲ್ಲ ನಿಯಮಗಳನ್ನೂ ಪಾಲಿಸಿ, ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಎಂದು ಜನರಲ್ಲಿ ಮನವಿ ಮಾಡಿದ್ದರು.  ಅಷ್ಟೇ ಅಲ್ಲ, ಇನ್ನು ಒಂದುವಾರದಿಂದ 15 ದಿನಗಳವರೆಗೆ ಪರಿಸ್ಥಿತಿಯನ್ನು ನೋಡಿಕೊಂಡು ಮತ್ತೆ ಲಾಕ್​ಡೌನ್ ಜಾರಿಮಾಡಬೇಕೋ, ಬೇಡವೋ ಎಂಬುದನ್ನು ನಿರ್ಧರಿಸುತ್ತೇವೆ ಎಂದೂ ತಿಳಿಸಿದ್ದರು.

ಇದನ್ನೂ ಓದಿ: ದೇಶದಲ್ಲಿ ಕೊರೊನಾ 2ನೇ ಅಲೆಯ ಆತಂಕ.. ಮತ್ತೊಮ್ಮೆ ತತ್ತರಿಸಿದ ಮಹಾರಾಷ್ಟ್ರ, ಕೇರಳ