AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Greta Thunberg toolkit Case: ಮಾರ್ಚ್ 8ರವರೆಗೆ ಶಾಂತನು ಮುಲುಕ್​ರನ್ನು ಬಂಧಿಸದಂತೆ ದೆಹಲಿ ಕೋರ್ಟ್ ಸೂಚನೆ

Shantanu Muluk: ಗ್ರೇಟಾ ಥನ್​ಬರ್ಗ್​ ಹಂಚಿಕೊಂಡ ಟೂಲ್​ಕಿಟ್​ನ್ನು ಶಾಂತನು ಎಂಬ ವ್ಯಕ್ತಿ ರಚಿಸಿದ್ದು, ದಿಶಾ ರವಿ, ನಿಖಿತಾ ಜಾಕೋಬ್ ಸೇರಿ ಇನ್ನಿತರರು ಸಂಪಾದನೆ ಮಾಡುವ ಆಪ್ಶನ್ ಹೊಂದಿದ್ದರು ಎಂದು ಪೊಲೀಸರು ಆರೋಪಿಸಿದ್ದರು. 

Greta Thunberg toolkit Case: ಮಾರ್ಚ್ 8ರವರೆಗೆ ಶಾಂತನು ಮುಲುಕ್​ರನ್ನು ಬಂಧಿಸದಂತೆ ದೆಹಲಿ ಕೋರ್ಟ್ ಸೂಚನೆ
ನಿಕಿತಾ ಜಾಕೋಬ್ ಮತ್ತು ಶಾಂತನು ಮುಲುಕ್
Follow us
guruganesh bhat
| Updated By: ಸಾಧು ಶ್ರೀನಾಥ್​

Updated on: Feb 25, 2021 | 2:16 PM

ದೆಹಲಿ: ಗ್ರೇಟಾ ಥನ್​ಬರ್ಗ್ ಟೂಲ್​ಕಿಟ್ ತಯಾರಿಕೆ (Greta Thunberg toolkit Case) ಆರೋಪ ಎದುರಿಸುತ್ತಿರುವ ಶಾಂತನು ಮುಲುಕ್​ರನ್ನು ಮಾರ್ಚ್ 8ರವರೆಗೆ ಬಂಧಿಸದಂತೆ​ ದೆಹಲಿ ನ್ಯಾಯಾಲಯ ಆದೇಶ ನೀಡಿದೆ. ಶಾಂತನು ಮುಲುಕ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸುವುದಕ್ಕೂ ಮುನ್ನ ಈ ಪ್ರಕರಣದ ಕುರಿತು ಅವರ ವಿಚಾರಣೆ/ತನಿಖೆ ನಡೆಸಲು ಹೆಚ್ಚಿನ ಕಾಲಾವಕಾಶ ಅಗತ್ಯವಿದೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ದೆಹಲಿ ಪೊಲೀಸರ ಮನವಿ ಪುರಸ್ಕರಿಸದ ನ್ಯಾಯಾಲಯ ಮಾರ್ಚ್ 8ರವರೆಗೂ ಶಾಂತನು ಮುಲುಕ್​ರನ್ನು ಬಂಧನ ಮಾಡದಂತೆ ಆದೇಶ ನೀಡಿದೆ. ಮಾರ್ಚ್ 9 ರಂದು ಈ ಪ್ರಕರಣದ ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ಸಹ ಆದೇಶ ನೀಡಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದ್ರ ರಾಣಾ ದೆಹಲಿ ಪೊಲೀಸರಿಗೆ ತಿಳಿಸಿದ್ದಾರೆ

ಯಾರು ಈ ಶಾಂತನು ಮುಲುಕ್?

ಗ್ರೇಟಾ ಥನ್​ಬರ್ಗ್​ ಹಂಚಿಕೊಂಡ ಟೂಲ್​ಕಿಟ್​ನ್ನು ಶಾಂತನು ಎಂಬ ವ್ಯಕ್ತಿ ರಚಿಸಿದ್ದು, ದಿಶಾ ರವಿ, ನಿಖಿತಾ ಜಾಕೋಬ್ ಸೇರಿ ಇನ್ನಿತರರು ಸಂಪಾದನೆ ಮಾಡುವ ಆಪ್ಶನ್ ಹೊಂದಿದ್ದರು ಎಂದು ಪೊಲೀಸರು ಆರೋಪಿಸಿದ್ದರು.

ಪ್ರೋ ಖಲಿಸ್ತಾನಿ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್​ನ ಸ್ಥಾಪಕ ಮೊ ಧಲಿವಾಲ್ ಬೆಂಗಳೂರು ಮೂಲದ 21ರ ಹರೆಯದ ದಿಶಾ ರವಿ ಮತ್ತು ನಿಖಿತಾ ಜಾಕೋಬ್​ರನ್ನು ಝೂಮ್ ಮೂಲಕ ಸಂಪರ್ಕಿಸಿದ್ದರು. ಗಣರಾಜ್ಯೋತ್ಸವದ ದಿನವೇ ಸಾಮಾಜಿಕ ಜಾಲತಾಣಗಳ ಮೂಲದ ವಿಶ್ವದಾದ್ಯಂತ ಭಾರತದ ಆಡಳಿತ ವಿರೋಧಿ ಅಲೆ ಮೂಡಿಸುವಂತೆ ಸಂಚಲನ ಸೃಷ್ಟಿಸಲು ಯೋಜನೆ ರೂಪಿಸಿದ್ದರು. ಈ ಕುರಿತು ಹಲವು ಸ್ಕ್ರೀನ್​ಶಾಟ್​ಗಳು ಮತ್ತು ಆಧಾರಗಳನ್ನು ಸಂಗ್ರಹಿಸಿದ ನಂತರವೇ ದೆಹಲಿ ಕೋರ್ಟ್ ಮೂಲಕ ಸರ್ಚ್ ವಾರಂಟ್ ಸಲ್ಲಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ಮುಖ್ಯ ಅಂಶವಾದ ಟೂಲ್​ಕಿಟ್​ ಅನ್ನು ಶಾಂತನು ಮುಲುಕ್ ರಚಿಸಿದ್ದ ಎಮದು ಪೊಲೀಸರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

ಈ ಮೊದಲೇ ದೊರಕಿತ್ತು ಪ್ರಯಾಣ ಕಾಲದ ನಿರೀಕ್ಷಣಾ ಜಾಮೀನು 

ಗ್ರೇಟಾ ಥನ್​ಬರ್ಗ್​ ಟೂಲ್​ಕಿಟ್ ಸಿದ್ಧಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಶಂತನು ಮುಲುಕ್​ಗೆ 10 ದಿನದವರೆಗೆ ಬಾಂಬೆ ಹೈಕೋರ್ಟ್​ನ ಔರಂಗಾಬಾದ್​ ಪೀಠ ಪ್ರಯಾಣ ಕಾಲದ ನಿರೀಕ್ಷಣಾ ಜಾಮೀನು (Transit Anticipatory Bail) ನೀಡಿದೆ. ಆದರೆ, ಇನ್ನೋರ್ವ ಆರೋಪಿ​ ನಿಕಿತಾ ಜಾಕೋಬ್ ಅರ್ಜಿ ವಿಚಾರಣೆಯನ್ನು ನಾಳೆ ಆಲಿಸುವುದಾಗಿ ಕೋರ್ಟ್ ತಿಳಿಸಿದೆ.

ಗ್ರೇಟಾ ಥನ್​ಬರ್ಗ್ ಜತೆ ವಾಟ್ಸ್​ಆ್ಯಪ್ ಚಾಟ್ ಮಾಡಿದ್ದ ದಿಶಾ ರವಿ ಫೆಬ್ರವರಿ 4ರಂದು ಗಲಭೆ ಕುರಿತು ಟೂಲ್ ಕಿಟ್ ತಯಾರಿಸಿದ್ದು, ಮೊಬೈಲ್​ನಲ್ಲಿದ್ದ ಡಾಟಾ ಡಿಲೀಟ್ ಮಾಡಿದ್ದಾರೆ. ಆದರೂ, ದಿಶಾ ರವಿಯಿಂದ ವಶಕ್ಕೆ ಪಡೆದ 1 ಫೋನ್, 2 ಲ್ಯಾಪ್​ಟಾಪ್​ಗಳಲ್ಲಿ ಭಾರತದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಕೆಡಿಸಲು ಸಂಚು ರೂಪಿಸಿದ್ದರ ಕುರಿತು ಸಾಕ್ಷ್ಯ ದೊರೆತಿದ್ದಾಗಿ ಎಂದು ಅವರು ತಿಳಿಸಿದ್ದರು.

“ಕೆಲಕಾಲ ನಾವು ಏನನ್ನೂ ಹೇಳದೇ ಸುಮ್ಮನೇ ಇರೋಣ.‌ನಾನು ವಕೀಲರ ಜೊತೆಗೆ ಚರ್ಚೆ ಮಾಡುತ್ತೇನೆ. ನಮ್ಮ ವಿರುದ್ಧ UAPA ಕಾಯ್ದೆಯಡಿ ಪ್ರಕರಣ ದಾಖಲಿಸಬಹುದು” ಎಂದು ಗ್ರೇಟಾ ಥನ್​ಬರ್ಗ್​ಗೆ ದಿಶಾ ರವಿ ವಾಟ್ಸ್​ಆ್ಯಪ್​ ಸಂದೇಶ ಕಳುಹಿಸಿದ್ದರು. ನಂತರ ಹಳೆಯ ಟೂಲ್​​ಕಿಟ್​ನ್ನು ಗ್ರೇಟಾ ಥನ್​ಬರ್ಗ್ ಡಿಲೀಟ್ ಮಾಡಿದ್ದರು ಎಂದು ಪೊಲೀಸರು ಹೇಳಿದ್ದರು.

ಹೋರಾಟಗಾರರ ಬಂಧನ ಖಂಡಿಸಿದ್ದ ವಿರೋದ ಪಕ್ಷಗಳು

21 ವರ್ಷದ ಬೆಂಗಳೂರು ಮೂಲದ ಪರಿಸರ ಕಾರ್ಯಕರ್ತೆ ದಿಶಾ ರವಿ (Disha Ravi) ಬಿಡುಗಡೆಗೆ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಆಗ್ರಹಿಸಿದ್ದಾರೆ. ಭಾರತವನ್ನು ಇನ್ನೂ ಮೌನದಿಂದಿರುವಂತೆ ಮಾಡಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರ ಸ್ವತಃ ಭಯಗೊಂಡು, ಹೋರಾಟಗಾರರನ್ನು ಬಂಧಿಸುತ್ತಿದೆಯೇ ಹೊರತು, ದೇಶ ಭಯಗೊಂಡಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. (Greta Thunberg toolkit)

ಸಾಕ್ಷ್ಯಗಳ ಕೊರತೆ

ಗೃಹ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ್ ಶರ್ಮಾ, ಸ್ಥಾಯಿ ಸಮಿತಿಯ ಕಾರ್ಯದರ್ಶಿಗೆ ದಿಶಾ ರವಿ ವಿರುದ್ಧದ ದೇಶದ್ರೋಹದ ಆರೋಪ ಹೇಗೆ ಸಾಬೀತು ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದರು. ದಿಶಾ ರವಿ ಬಂಧನದಿಂದ ಭಾರತದ ಬಗ್ಗೆ ಅಂತರಾಷ್ಟ್ರೀಯ ಮಟ್ಟದ ಗ್ರಹಿಕೆಗೆ ಹೊಡೆತ ಬೀಳುವುದಿಲ್ಲವೇ ಎಂದು ಪ್ರಶ್ನಿಸಿರುವ ಅವರು, ಪರಿಸರ ಕಾರ್ಯಕರ್ತೆಯ ವಿರುದ್ಧದ ಆರೋಪವನ್ನು ಸಾಬೀತುಪಡಿಸಲು ಯಾವ ಸಾಕ್ಷ್ಯಗಳಿವೆ ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ: Greta Thunberg Toolkit Case: ದಿಶಾ ರವಿ ಬಂಧನ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ; ಪೊಲೀಸರಿಗೆ ಗಂಭೀರ ಪತ್ರ ಬರೆದ ಮಹಿಳಾ ಆಯೋಗ

Disha Ravi: ಯುವ ಪರಿಸರ ಹೋರಾಟಗಾರ್ತಿ ದಿಶಾ ರವಿಗೆ ಜಾಮೀನು ಮಂಜೂರು

VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್