Disha Ravi: ಯುವ ಪರಿಸರ ಹೋರಾಟಗಾರ್ತಿ ದಿಶಾ ರವಿಗೆ ಜಾಮೀನು ಮಂಜೂರು
Disha Ravi: ಬೆಂಗಳೂರು ಮೂಲದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ಪಟಿಯಾಲ ನ್ಯಾಯಾಲಯ ಜಾಮೀನು ನೀಡಿದೆ.
ದೆಹಲಿ: ‘ಭಾರತಕ್ಕೆ ಅಪಖ್ಯಾತಿ ತರಲು, ರೈತರ ಪ್ರತಿಭಟನೆಯ ನೆರಳಿನಲ್ಲಿ ಶಾಂತಿ ಕದಡುವ ಜಾಗತಿಕ ಸಂಚಿನಲ್ಲಿ ಭಾಗಿಯಾಗಿದ್ದಾರೆ’ ಎಂಬ ಆರೋಪದ ಮೇಲೆ ಬಂಧನಕ್ಕೊಳಗಾದ ಬೆಂಗಳೂರು ಮೂಲದ ಯುವ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರಿಗೆ ದೆಹಲಿಯ ಪಟಿಯಾಲ ನ್ಯಾಯಾಲಯ ಜಾಮೀನು ನೀಡಿದೆ.
ಜಾಮೀನು ಪಡೆಯಲು ದಿಶಾ ರವಿ ನ್ಯಾಯಾಲಯಕ್ಕೆ ₹ 1 ಲಕ್ಷ ಮೊತ್ತದ ಬಾಂಡ್ ಮತ್ತು ಅದೇ ಮೌಲ್ಯದ ಎರಡು ಶ್ಯೂರಿಟಿ ಸಲ್ಲಿಸಬೇಕು ಎಂದು ಕೋರ್ಟ್ ತಿಳಿಸಿದೆ. ದಿಶಾ ರವಿ ವಿರುದ್ಧ ದೇಶದ್ರೋಹ, ಅಪರಾಧ ಒಳಸಂಚು ಸೇರಿದಂತೆ ಐಪಿಸಿಯ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿತ್ತು.
ನ್ಯಾಯಾಧೀಶರು ಉಲ್ಲೇಖಿಸಿದ ಅಂಶಗಳೇನು?
ವಿಫುಲ ಸಾಕ್ಷಿಗಳ ಕೊರತೆ ಮತ್ತು (“scanty and sketchy”) ಜಾಮೀನು ಮಂಜೂರು ಮಾಡದೇ ಇರಲು ಯಾವುದೇ ಕಟು ಸಾಕ್ಷ್ಯಗಳು ಕಾಣಿಸುತ್ತಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಪ್ರಕರಣದ ತನಿಖೆಗೆ ಪೊಲೀಸರಿಗೆ ಸಹಕಾರ ನೀಡಬೇಕು.
ಪೊಲೀಸರು ತಿಳಿಸಿದಾಗ ತನಿಖೆಗೆ ಹಾಜರಾಗಬೇಕು.
ಕೋರ್ಟ್ನ ಅನುಮತಿ ಇಲ್ಲದೇ ಭಾರತವನ್ನು ತೊರೆದು ವಿದೇಶಕ್ಕೆ ತೆರಳಬಾರದು.
22 ವರ್ಷದ ಯುವ ಹೋರಾಟಗಾರ್ತಿಗೆ ಬೇಲ್ ನಿರಾಕರಿಸಲು ತಮಗೆ ಯಾವುದೇ ಘನ ಸಾಕ್ಷ ದೊರೆಯುತ್ತಿಲ್ಲ ಎಂದು ನ್ಯಾಯಾಧೀಶ ಧರ್ಮೇಂದರ್ ರಾಣಾ ತಮ್ಮ ತೀರ್ಪಿನಲ್ಲಿ ಹೇಳಿದರು.
ಖಲಿಸ್ತಾನಿ ಗುಂಪಿನ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ಎಂದು ಕರೆದುಕೊಳ್ಳುವ ಸಂಸ್ಥೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ದೇಶದ ವಿರುದ್ಧ ಅಲೆ ರೂಪಿಸಲು ಟೂಲ್ಕಿಟ್ ರಚಿಸಿದ ಆರೋಪದಡಿ ಅವರನ್ನು ದೆಹಲಿ ಪೊಲೀಸರು ಏಕಾಏಕಿ ಬೆಂಗಳೂರಿನಲ್ಲಿ ಫೆ.13ರಂದು ಬಂಧಿಸಿದ್ದರು.
ಬೆಂಗಳೂರು ಮೂಲದ ಕಾರ್ಯಕರ್ತೆ
ಬೆಂಗಳೂರಿನ ಪ್ರತಿಷ್ಠಿತ ಮಹಿಳಾ ಕಾಲೇಜುಗಳಲ್ಲಿ ಒಂದಾಗಿರುವ ಮೌಂಟ್ ಕಾರ್ಮಲ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ದಿಶಾ ರವಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ವಾಟ್ಸ್ಆ್ಯಪ್ ಚಾಟ್ ಡಿಲೀಟ್ ಮಾಡಿದ್ದಾರೆ. ಆಕೆಗೆ ಕಾನೂನು ಕ್ರಮಗಳ ಬಗ್ಗೆ ಅರಿವು ಇತ್ತು. ಈ ಟೂಲ್ ಕಿಟ್ ವಿನ್ಯಾಸಗೊಳಿಸಿರುವುದರ ಹಿಂದೆ ದುರುದ್ದೇಶವಿದೆ. ಭಾರತಕ್ಕೆ ಅಪಖ್ಯಾತಿ ತರುವುದಕ್ಕೆ ಮತ್ತು ರೈತರ ಪ್ರತಿಭಟನೆಯ ನೆರಳಿನಲ್ಲಿ ಶಾಂತಿ ಕದಡುವ ಜಾಗತಿಕ ಸಂಚಿನಲ್ಲಿ ದಿಶಾ ಭಾಗಿಯಾಗಿದ್ದಾರೆ. ಖಾಲಿಸ್ತಾನದ ಪರ ವಾದಿಸುವರೊಂದಿಗೆ ದಿಶಾ ರವಿ ಸಂಪರ್ಕ ಹೊಂದಿದ್ದು ಆಕೆ ಟೂಲ್ಕಿಟ್ ಸಿದ್ಧಪಡಿಸಿ ಶೇರ್ ಮಾಡಿದ್ದರು. ಆಕೆ ಯಾವುದೇ ತಪ್ಪು ಮಾಡಿಲ್ಲ ಎಂದಾದರೆ ಸಾಕ್ಷ್ಯ ನಾಶ ಮಾಡಿದ್ದು ಯಾಕೆ ಎಂದು ಪೊಲೀಸರು ಪ್ರಶ್ನಿಸಿದ್ದರು.
ದಿಶಾ ರವಿ ವಿಚಾರಣೆ: ದಿಶಾ ರವಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೆಹಲಿ ಕೋರ್ಟ್ ಜನವರಿ 26ಕ್ಕೆ ಸಂಭವಿಸಿದ ಹಿಂಸಾಚಾರಕ್ಕೂ ಟೂಲ್ಕಿಟ್ಗೂ ಏನು ಸಂಬಂಧ ಇದೆ ಎಂಬುದನ್ನು ನೀವು ಪತ್ತೆ ಹಚ್ಚಿದ್ದೀರಿ ಎಂದು ನ್ಯಾಯಾಲಯ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರಲ್ಲಿ ಪ್ರಶ್ನಿಸಿತ್ತು.
ವಾಟ್ಸ್ಆ್ಯಪ್ ಚಾಟ್ ಡಿಲೀಟ್ ಮಾಡಿದ್ದಾರೆ. ಆಕೆಗೆ ಕಾನೂನು ಕ್ರಮಗಳ ಬಗ್ಗೆ ಅರಿವು ಇತ್ತು. ಈ ಟೂಲ್ ಕಿಟ್ ವಿನ್ಯಾಸಗೊಳಿಸಿರುವುದರ ಹಿಂದೆ ದುರುದ್ದೇಶವಿದೆ. ಭಾರತಕ್ಕೆ ಅಪಖ್ಯಾತಿ ತರುವುದಕ್ಕೆ ಮತ್ತು ರೈತರ ಪ್ರತಿಭಟನೆಯ ನೆರಳಿನಲ್ಲಿ ಶಾಂತಿ ಕದಡುವ ಜಾಗತಿಕ ಸಂಚಿನಲ್ಲಿ ದಿಶಾ ಭಾಗಿಯಾಗಿದ್ದಾರೆ. ಖಾಲಿಸ್ತಾನದ ಪರ ವಾದಿಸುವರೊಂದಿಗೆ ದಿಶಾ ರವಿ ಸಂಪರ್ಕ ಹೊಂದಿದ್ದು ಆಕೆ ಟೂಲ್ಕಿಟ್ ಸಿದ್ಧಪಡಿಸಿ ಶೇರ್ ಮಾಡಿದ್ದರು. ಆಕೆ ಯಾವುದೇ ತಪ್ಪು ಮಾಡಿಲ್ಲ ಎಂದಾದರೆ ಸಾಕ್ಷ್ಯ ನಾಶ ಮಾಡಿದ್ದು ಯಾಕೆ ಎಂದು ಪೊಲೀಸರು ಪ್ರಶ್ನಿಸಿದ್ದರು.
ದೇಶದ್ರೋಹದ ಆರೋಪ
ಸಾವಿರಾರು ಮಂದಿಗೆ ದೆಹಲಿ ಪ್ರವೇಶಕ್ಕೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ. ನಾನು 10 ಮಂದಿಯನ್ನು ಆಹ್ವಾನಿಸಿದರೆ ತಪ್ಪೇನು? ಸಂಯುಕ್ತ ಕಿಸಾನ್ ಮೋರ್ಚಾ ಪರೇಡ್ ಆಯೋಜಿಸಿತ್ತು, ಅವರ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲಾಗಿದೆಯೇ? ದೇಶದ್ರೋಹಿಗಳೊಂದಿಗ ಮಾತನಾಡಿದರೆ ನಾವು ದೇಶದ್ರೋಹಿಗಳಾಗುತ್ತೇವೆಯೇ? ಯಾವುದೇ ಒಂದು ವೇದಿಕೆಯಲ್ಲಿ ನಿಮ್ಮ ಅಭಿಪ್ರಾಯಗಳನ್ನು ಹೇಳುವುದು ಅಪರಾಧವಲ್ಲ. ದೆಹಲಿ ಪೊಲೀಸರು ದಿಶಾ ಮೇಲೆ ಮಾಡಿರುವ ಆರೋಪವನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ದಿಶಾ ಅವರ ವಕೀಲರು ಹೇಳಿದ್ದಾರೆ.
ದಿಶಾ ರವಿ ಮನವಿ
ಟೂಲ್ಕಿಟ್ ಸಂಬಂಧ, ಖಾಸಗಿ ಚಾಟ್ (ವಾಟ್ಸಾಪ್ ಸಂದೇಶಗಳು) ಮಾಧ್ಯಮಕ್ಕೆ ಸೋರಿಕೆಯಾಗದಂತೆ ತಡೆಯಬೇಕು ಎಂದು 22 ವರ್ಷ ವಯಸ್ಸಿನ ದಿಶಾ ರವಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ದಿಶಾ ರವಿ ಹಾಗೂ ಮೂರನೇ ವ್ಯಕ್ತಿಯ ಜತೆ ನಡೆಸಿದ ಸಂವಹನ ಸಂದೇಶಗಳನ್ನು ಸಾಮಾಜಿಕವಾಗಿ ಹರಿಯಬಿಡಬಾರದು ಎಂದು ಕೋರಿದ್ದರು.
ದಿಶಾ ರವಿ ತನಿಖೆ ಹಾಗೂ FIR ಕುರಿತಾದ ಯಾವುದೇ ಖಾಸಗಿ ವಿಚಾರಗಳನ್ನು ಮಾಧ್ಯಮ ಸೋರಿಕೆ ಮಾಡಬಾರದು ಎಂದು ದೆಹಲಿ ಹೈಕೋರ್ಟ್ ಇಂದು (ಫೆ.19) ನೋಟೀಸ್ ನೀಡಿದೆ. ಟೂಲ್ಕಿಟ್ ಪ್ರಕರಣದ ಖಾಸಗಿ ಮಾಹಿತಿಗಳು ಮಾಧ್ಯಮಕ್ಕೆ ಸೋರಿಕೆಯಾಗಬಾರದು ಎಂದು ಕೋರ್ಟ್, ನ್ಯೂಸ್ ಬ್ರಾಡ್ಕಾಸ್ಟಿಂಗ್ ಅಥಾರಿಟಿ (NBSA)ಗೆ ತಿಳಿಸಿತ್ತು.
Published On - 4:08 pm, Tue, 23 February 21