ಒಂಬತ್ತು ವರ್ಷಗಳಲ್ಲಿ ಬಡತನ ರೇಖೆಯಿಂದ ಹೊರ ಬಂದ 24.8 ಕೋಟಿ ಜನರು: NITI ವರದಿ

NITI ಆಯೋಗ ವರದಿ ಪ್ರಕಾರ, ದೇಶದ ಒಟ್ಟು 24.82 ಕೋಟಿ ಜನರು ಕಳೆದ 9 ವರ್ಷಗಳಲ್ಲಿ ಬಡತನ ರೇಖೆಯಿಂದ ಹೊರ ಬಂದಿದ್ದಾರೆ. ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಬಡತನದಲ್ಲಿ ಗರಿಷ್ಠ ಇಳಿಕೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 2013-14 ರಲ್ಲಿ ದೇಶದಲ್ಲಿ ಬಹುಆಯಾಮದ ಬಡತನವು ಶೇಕಡಾ 29.17 ರಷ್ಟಿತ್ತು. ಇದು 2022-23 ರಲ್ಲಿ ಶೇಕಡಾ 11.28 ಕ್ಕೆ ಇಳಿದಿದೆ.

ಒಂಬತ್ತು ವರ್ಷಗಳಲ್ಲಿ ಬಡತನ ರೇಖೆಯಿಂದ ಹೊರ ಬಂದ 24.8 ಕೋಟಿ ಜನರು: NITI ವರದಿ
ಭಾರತದಲ್ಲಿ ಶಿಕ್ಷಣ, ಆರೋಗ್ಯ, ವಿದ್ಯುತ್, ಆಹಾರ ಸೇರಿದಂತೆ ಬಹುಆಯಾಮದ ಬಡತನದಿಂದ ಹೊರಬಂದ 24.8 ಕೋಟಿ ಜನರು
Image Credit source: getty images
Edited By: Rakesh Nayak Manchi

Updated on: Jan 15, 2024 | 10:23 PM

ನವದೆಹಲಿ, ಜ.15: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಒಂಬತ್ತು ವರ್ಷಗಳ ಆಡಳಿತಾವಧಿಯಲ್ಲಿ ಒಟ್ಟು 24.82 ಕೋಟಿ ಜನರು ಬಡತನ ರೇಖೆಯಿಂದ (Poverty) ಹೊರಬಂದಿದ್ದಾರೆ. NITI ಆಯೋಗ ವರದಿ ಪ್ರಕಾರ, ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಬಡತನದಲ್ಲಿ ಗರಿಷ್ಠ ಇಳಿಕೆಯಾಗಿದೆ. 2013-14 ರಲ್ಲಿ ದೇಶದಲ್ಲಿ ಬಹುಆಯಾಮದ ಬಡತನವು ಶೇಕಡಾ 29.17 ರಷ್ಟಿತ್ತು. ಇದು 2022-23 ರಲ್ಲಿ ಶೇಕಡಾ 11.28 ಕ್ಕೆ ಇಳಿದಿದೆ.

“ಅತ್ಯಂತ ಉತ್ತೇಜಕ, ಅಂತರ್ಗತ ಬೆಳವಣಿಗೆಯನ್ನು ಹೆಚ್ಚಿಸುವ ಕಡೆಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ನಮ್ಮ ಆರ್ಥಿಕತೆಗೆ ಪರಿವರ್ತಕ ಬದಲಾವಣೆಗಳ ಮೇಲೆ ಕೇಂದ್ರೀಕರಿಸುತ್ತದೆ. ನಾವು ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತು ಪ್ರತಿಯೊಬ್ಬ ಭಾರತೀಯನ ಸಮೃದ್ಧ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಟ್ವೀಟ್

ಬಹುಆಯಾಮದ ಬಡತನದಲ್ಲಿ ಜನರ ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟದಲ್ಲಿನ ಸುಧಾರಣೆಗಳು ಒಳಗೊಂಡಿವೆ. 12 ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದ ಸೂಚಕಗಳ ಮೂಲಕ ರಾಷ್ಟ್ರೀಯ ಬಹು ಆಯಾಮವನ್ನು ತೋರಿಸಲಾಗಿದೆ. ಇವುಗಳಲ್ಲಿ ಪೌಷ್ಠಿಕಾಂಶ, ಮಕ್ಕಳ ಮತ್ತು ಹದಿಹರೆಯದವರ ಮರಣ, ತಾಯಿಯ ಆರೋಗ್ಯ, ಶಾಲಾ ಶಿಕ್ಷಣದ ವರ್ಷಗಳು, ಶಾಲಾ ಹಾಜರಾತಿ, ಅಡುಗೆ ಇಂಧನ, ನೈರ್ಮಲ್ಯ, ಕುಡಿಯುವ ನೀರು, ವಿದ್ಯುತ್, ವಸತಿ, ಆಸ್ತಿಗಳು ಮತ್ತು ಬ್ಯಾಂಕ್ ಖಾತೆಗಳು ಸೇರಿವೆ ಎಂದು NITI ತನ್ನ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: Atal Setu inauguration: ಭಾರತದ ಅತಿ ಉದ್ದದ ಸಮುದ್ರ ಸೇತುವೆ ಅಟಲ್ ಸೇತು ಉದ್ಘಾಟಿಸಿದ ಮೋದಿ

ಉತ್ತರ ಪ್ರದೇಶದಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ 5.94 ಕೋಟಿ ಜನರು ಬಹುಆಯಾಮದ ಬಡತನದಿಂದ ಹೊರಬಂದಿದ್ದಾರೆ. ಇದು ಬಡತನ ಸಂಖ್ಯೆಯಲ್ಲಿ ಅತಿದೊಡ್ಡ ಇಳಿತವಾಗಿದೆ. ನಂತರ ಬಿಹಾರ 3.77 ಕೋಟಿ ಜನರು, ಮಧ್ಯಪ್ರದೇಶ 2.30 ಕೋಟಿ ಜನರು ಮತ್ತು ರಾಜಸ್ಥಾನದಲ್ಲಿ 1.87 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ.

ಭಾರತವು 2030 ರ ಮೊದಲು ಬಹುಆಯಾಮದ ಬಡತನವನ್ನು ಅರ್ಧಕ್ಕೆ ಇಳಿಸುವ ತನ್ನ ಎಸ್‌ಡಿಜಿ ಗುರಿಯನ್ನು (ಸುಸ್ಥಿರ ಅಭಿವೃದ್ಧಿ ಗುರಿ) ಸಾಧಿಸುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ. ಇದು ಸರ್ಕಾರದ ನಿರಂತರ ಸಮರ್ಪಣೆ ಮತ್ತು ದೃಢವಾದ ಬದ್ಧತೆಯು ಅತ್ಯಂತ ದುರ್ಬಲ ಹಾಗೂ ವಂಚಿತರ ಜೀವನವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us