ಅಕ್ರಮ ಹಣ ವರ್ಗಾವಣೆ ಪ್ರಕರಣ: ಕಾಂಗ್ರೆಸ್ ನಾಯಕ ಸಾಧು ಸಿಂಗ್ ಧರಮ್‌ಸೋತ್ ಬಂಧಿಸಿದ ಇಡಿ

|

Updated on: Jan 15, 2024 | 9:02 PM

ಈ ಹಿಂದೆ ಪಂಜಾಬ್ ವಿಜಿಲೆನ್ಸ್ ಬ್ಯೂರೋ ಕಾಂಗ್ರೆಸ್ ನಾಯಕ ಮತ್ತು ಪಂಜಾಬ್ ಮಾಜಿ ಅರಣ್ಯ ಸಚಿವ ಸಾಧು ಸಿಂಗ್ ಧರಮ್‌ಸೋತ್ ಅವರನ್ನು ಎರಡು ಬಾರಿ ಬಂಧಿಸಿತ್ತು. ಅರಣ್ಯ ಹಗರಣದಲ್ಲಿ ಮೊದಲು ವಿಜಿಲೆನ್ಸ್‌ನಿಂದ ಬಂಧಿಸಲ್ಪಟ್ಟು ಜೈಲಿನಲ್ಲಿಯೇ ಇದ್ದರು. ಆ ಬಳಿಕ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಮತ್ತೆ ಬಂಧಿತರಾಗಿದ್ದರು.

ಅಕ್ರಮ ಹಣ ವರ್ಗಾವಣೆ ಪ್ರಕರಣ: ಕಾಂಗ್ರೆಸ್ ನಾಯಕ ಸಾಧು ಸಿಂಗ್ ಧರಮ್‌ಸೋತ್ ಬಂಧಿಸಿದ ಇಡಿ
ಸಾಧು ಸಿಂಗ್ ಧರಮ್‌ಸೋತ್
Follow us on

ದೆಹಲಿ ಜನವರಿ 15: ಕಾಂಗ್ರೆಸ್ (Congress) ನಾಯಕ ಮತ್ತು ಪಂಜಾಬ್ (Punjab) ಮಾಜಿ ಅರಣ್ಯ ಸಚಿವ ಸಾಧು ಸಿಂಗ್ ಧರಮ್‌ಸೋತ್ (sadhu Singh Dharamsot) ಅವರನ್ನು ಸೋಮವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಧರಮ್‌ಸೋತ್ ಅವರನ್ನು ಬಂಧಿಸಲಾಗಿದೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ. ಈ ಹಿಂದೆ ಪಂಜಾಬ್ ವಿಜಿಲೆನ್ಸ್ ಬ್ಯೂರೋ ಅವರನ್ನು ಎರಡು ಬಾರಿ ಬಂಧಿಸಿತ್ತು. ಅರಣ್ಯ ಹಗರಣದಲ್ಲಿ ಮೊದಲು ವಿಜಿಲೆನ್ಸ್‌ನಿಂದ ಬಂಧಿಸಲ್ಪಟ್ಟು ಜೈಲಿನಲ್ಲಿಯೇ ಇದ್ದರು. ಆ ಬಳಿಕ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಮತ್ತೆ ಬಂಧಿತರಾಗಿದ್ದರು.

64 ವರ್ಷದ ರಾಜಕಾರಣಿಯನ್ನು ಇಡಿ, ಜಲಂಧರ್‌ನಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ಕಸ್ಟಡಿಗೆ ತೆಗೆದುಕೊಂಡಿತು. ಕಳೆದ ವರ್ಷ ನವೆಂಬರ್‌ನಲ್ಲಿ ರಾಜ್ಯದ ಮತ್ತೊಬ್ಬ ಅರಣ್ಯ ಸಚಿವ ಸಂಗತ್ ಸಿಂಗ್ ಗಿಲ್ಜಿಯಾನ್, ಕೆಲವು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಇತರರ ಮೇಲೆ ಇಡಿ ದಾಳಿ ನಡೆಸಿತ್ತು.

ತನಿಖೆಯು ರಾಜ್ಯ ಅರಣ್ಯ ಇಲಾಖೆಯಲ್ಲಿ ಮರ ಕಡಿಯಲು ಪರವಾನಿಗೆಗಳನ್ನು ನೀಡುವುದರ ವಿರುದ್ಧ ಮತ್ತು ಇಲಾಖೆಯಲ್ಲಿ ವರ್ಗಾವಣೆ/ಪೋಸ್ಟಿಂಗ್, ಇತರ ಆರೋಪಗಳ ಜೊತೆಗೆ “ಲಂಚ” ಆರೋಪಗಳಿಗೆ ಸಂಬಂಧಿಸಿದೆ.

ಧರಮ್‌ಸೋತ್ ಅವರು ಐದು ಬಾರಿ ಶಾಸಕರಾಗಿದ್ದಾರೆ ಮತ್ತು ಕಳೆದ ವರ್ಷ ಪಂಜಾಬ್ ವಿಜಿಲೆನ್ಸ್ ಬ್ಯೂರೋ ಅವರು ಅಕ್ರಮ ಆಸ್ತಿ ಹೊಂದಿರುವ ಆರೋಪದ ಪ್ರಕರಣದಲ್ಲಿ ಬಂಧಿಸಿದ್ದರು.ಅವರು ನಭಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದರೆ, ಗಿಲ್ಜಿಯಾನ್ ಹೋಶಿಯಾರ್‌ಪುರ ಜಿಲ್ಲೆಯ ಉರ್ಮಾರ್ ಕ್ಷೇತ್ರದಿಂದ ಶಾಸಕರಾಗಿದ್ದರು.

ಇದನ್ನೂ ಓದಿ:Forex: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ ಕಳೆದ ಐದು ವಾರದಲ್ಲಿ ಮೊದಲ ಬಾರಿಗೆ ಇಳಿಕೆ

ಮನಿ ಲಾಂಡರಿಂಗ್ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ದಾಖಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣವು ಪಂಜಾಬ್ ವಿಜಿಲೆನ್ಸ್ ಬ್ಯೂರೋದ ಎಫ್‌ಐಆರ್‌ನಿಂದ ಅರಣ್ಯ ಇಲಾಖೆಯಲ್ಲಿನ ಆಪಾದಿತ ಅಕ್ರಮಗಳು ಮತ್ತು ಪರವಾನಗಿ ನೀಡಲು ಸಂಬಂಧಿಸಿದ ಮಂತ್ರಿಗಳು ಮತ್ತು ಅಧಿಕಾರಿಗಳು ಲಂಚ ಪಡೆದ ಆರೋಪಗಳನ್ನು ಹೊಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:31 pm, Mon, 15 January 24