AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆಗೆ ಭೇಟಿ ನೀಡಿದ ಕಾಂಗ್ರೆಸ್ ನಾಯಕರು; ಹನುಮಾನ್ ಗಢಿ ದೇವಸ್ಥಾನದಲ್ಲಿ ಶ್ರೀರಾಮನ ದರ್ಶನ

ಹರ್ಯಾಣದ ಪ್ರಮುಖ ಕಾಂಗ್ರೆಸ್ ನಾಯಕ ಹೂಡಾ, ಜನರು ಪರಸ್ಪರ 'ರಾಮ್-ರಾಮ್' ಎಂದು ಸ್ವಾಗತಿಸುವ ಸಂಸ್ಕೃತಿಯಿಂದ ಬಂದವರು ಎಂದು ಹೇಳಿದರು. ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಶ್ರೀರಾಮನ ಆಶೀರ್ವಾದ ಪಡೆಯಲು ನಾನು ಇಲ್ಲಿಗೆ ಬಂದಿದ್ದೇನೆ... ಕಳೆದ ವರ್ಷವೂ ಇಲ್ಲಿಗೆ ಬಂದಿದ್ದೆ... ಈ ಪುಣ್ಯಭೂಮಿಯಲ್ಲಿ ನಾನು ಯಾವುದೇ ರಾಜಕೀಯ ಪ್ರಶ್ನೆಗಳನ್ನು ಕೇಳುವುದಿಲ್ಲ ಎಂದಿದ್ದಾರೆ.

ಅಯೋಧ್ಯೆಗೆ ಭೇಟಿ ನೀಡಿದ ಕಾಂಗ್ರೆಸ್ ನಾಯಕರು; ಹನುಮಾನ್ ಗಢಿ ದೇವಸ್ಥಾನದಲ್ಲಿ ಶ್ರೀರಾಮನ ದರ್ಶನ
ಅಯೋಧ್ಯೆಯಲ್ಲಿ ಕಾಂಗ್ರೆಸ್ ನಾಯಕರು
Follow us
ರಶ್ಮಿ ಕಲ್ಲಕಟ್ಟ
|

Updated on: Jan 15, 2024 | 8:55 PM

ಅಯೋಧ್ಯೆ ಜನವರಿ 15: ಕಾಂಗ್ರೆಸ್ (Congress) ಪಕ್ಷದ ಹಿರಿಯ ಸದಸ್ಯರು ಸೋಮವಾರ ಅಯೋಧ್ಯೆಗೆ (Ayodhya) ಭೇಟಿ ನೀಡಿ, ಹನುಮಾನ್ ಗಢಿ ದೇವಸ್ಥಾನದಲ್ಲಿ ಶ್ರೀರಾಮನ (Shri ram) ದರ್ಶನ ಪಡೆದರು. ಜನವರಿ 22ರ ಪ್ರಾಣ ಪ್ರತಿಷ್ಠಾ ಸಮಾರಂಭದ ಆಚರಣೆಗಳು ಪ್ರಾರಂಭವಾಗುವ ಒಂದು ದಿನ ಮೊದಲು ಕಾಂಗ್ರೆಸ್ ನಾಯಕರು ಇಲ್ಲಿಗೆ ಭೇಟಿ ನೀಡಿದ್ದಾರೆ. ಹಿರಿಯ ನಾಯಕರಾದ ದೀಪೇಂದರ್ ಹೂಡಾ, ಸುಪ್ರಿಯಾ ಶ್ರೀನಾಟೆ, ಅವಿನಾಶ್ ಪಾಂಡೆ ಮತ್ತು ಅಜಯ್ ರಾಯ್ ಅವರು ದೇವಾಲಯಕ್ಕೆ ಭೇಟಿ ನೀಡುವ ಮೊದಲು ಸರಯೂ ನದಿಯಲ್ಲಿ ಸ್ನಾನ ಮಾಡಿದರು. ಬಳಿಕ ಮಾತನಾಡಿದ ಅವರು, ‘ರಾಮ ರಾಜ್ಯ’ ಎಂಬ ಕಲ್ಪನೆಯನ್ನು ದೇಶದಲ್ಲಿ ಜಾರಿಗೆ ತರಬೇಕು ಎಂದು ಹೇಳಿದ್ದಾರೆ.

ಕಳೆದ ವಾರ, ಕಾಂಗ್ರೆಸ್ ರಾಮಮಂದಿರ ಉದ್ಘಾಟನೆ ಸಮಾರಂಭವನ್ನು “ರಾಜಕೀಯ ಘಟನೆ” ಎಂದು ಕರೆದಿತ್ತು, ಬಿಜೆಪಿ ಮತ್ತು ಆರೆಸ್ಸೆಸ್ ಧರ್ಮದಿಂದ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿವೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಅದರ ಪ್ರಮುಖ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಅಧೀರ್ ರಂಜನ್ ಚೌಧರಿ ಅವರಿಗೆ ನೀಡಲಾದ ಆಹ್ವಾನವನ್ನು ತಿರಸ್ಕರಿಸಿದ ಕಾಂಗ್ರೆಸ್ ಅಯೋಧ್ಯೆಯಲ್ಲಿರುವ ರಾಮಂದಿರಕ್ಕೆ ಭೇಟಿ ನೀಡಲು ಆಹ್ವಾನದ ಅಗತ್ಯವಿಲ್ಲ ಎಂದು ಅದು ಹೇಳಿದೆ.

ಹರ್ಯಾಣದ ಪ್ರಮುಖ ಕಾಂಗ್ರೆಸ್ ನಾಯಕ ಹೂಡಾ, ಜನರು ಪರಸ್ಪರ ‘ರಾಮ್-ರಾಮ್’ ಎಂದು ಸ್ವಾಗತಿಸುವ ಸಂಸ್ಕೃತಿಯಿಂದ ಬಂದವರು ಎಂದು ಹೇಳಿದರು. ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಶ್ರೀರಾಮನ ಆಶೀರ್ವಾದ ಪಡೆಯಲು ನಾನು ಇಲ್ಲಿಗೆ ಬಂದಿದ್ದೇನೆ… ಕಳೆದ ವರ್ಷವೂ ಇಲ್ಲಿಗೆ ಬಂದಿದ್ದೆ… ಈ ಪುಣ್ಯಭೂಮಿಯಲ್ಲಿ ನಾನು ಯಾವುದೇ ರಾಜಕೀಯ ಪ್ರಶ್ನೆಗಳನ್ನು ಕೇಳುವುದಿಲ್ಲ… ನಾವು ಸಂಸ್ಕೃತಿಯಿಂದ ಬಂದವರು. ನಾವು ಒಬ್ಬರಿಗೊಬ್ಬರು ‘ರಾಮ್ ರಾಮ್’ ಎಂದು ಶುಭಾಶಯ ಕೋರುತ್ತೇವೆ” ಎಂದು ಅವರು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ. ಅಯೋಧ್ಯೆಗೆ ಭೇಟಿ ನೀಡುವುದು ತನ್ನ ಕುಟುಂಬದಲ್ಲಿ ಸಂಪ್ರದಾಯವಾಗಿದೆ ಎಂದು ಶ್ರೀನಾಟೆ ಹೇಳಿದ್ದಾರೆ. ದೇಶವು ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸುವವರೆಗೂ ಭಗವಾನ್ ರಾಮನ ಕನಸು ನನಸಾಗುವುದಿಲ್ಲ ಎಂದು ಅವರು ಹೇಳಿದರು.

“ನಾನು ಪೂರ್ವಾಂಚಲದವನು, ಹಾಗಾಗಿ ನಾನು ಲಕ್ನೋದಿಂದ ಮಹಾರಾಜ್‌ಗಂಜ್‌ಗೆ ಹೋದಾಗಲೆಲ್ಲಾ ನಾನು ಹನುಮಾನ್ ಗಢಿಗೆ ಭೇಟಿ ನೀಡುತ್ತೇನೆ. ಈ ದೇಶದಲ್ಲಿ ರಾಮರಾಜ್ಯ ಬರಲಿ ಎಂದು ನಾವು ಬಯಸುತ್ತೇವೆ. ರಾಮರಾಜ್ಯ ಎಂದರೇನು? ನಿರುದ್ಯೋಗ, ಅನ್ಯಾಯ, ಹಣದುಬ್ಬರ ಮತ್ತು ಆರ್ಥಿಕ ಅಸಮಾನತೆಯ ಪರಿಸ್ಥಿತಿಗಳು ಮುಂದುವರಿದರೆ ದೇಶ, ಭಗವಾನ್ ರಾಮನ ಕನಸು ಅಪೂರ್ಣವಾಗಿದೆ… ಆ ಪ್ರತಿಜ್ಞೆಯನ್ನು ಈಡೇರಿಸಲು ನಾವು ಇಲ್ಲಿಗೆ ಬಂದಿದ್ದೇವೆ. ಭಾರತ್ ಜೋಡೋ ನ್ಯಾಯ್ ಯಾತ್ರೆಯು ಭಗವಾನ್ ರಾಮನಿಂದ ಸ್ಫೂರ್ತಿ ಪಡೆದು ನ್ಯಾಯವನ್ನು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ… ನನ್ನ ಕುಟುಂಬದ ತಲೆಮಾರುಗಳು ಅಯೋಧ್ಯೆಗೆ ಭೇಟಿ ನೀಡುತ್ತಿವೆ, ಮತ್ತು ನನ್ನ ಎಲ್ಲಾ ಮುಂದಿನ ಪೀಳಿಗೆಗಳು ಸಹ ಭೇಟಿ ನೀಡುತ್ತವೆ, ”ಎಂದು ಅವರು ಹೇಳಿದರು.

ಇದನ್ನೂ  ಓದಿ: ಅಯೋಧ್ಯೆ ರಾಮನ ಸಾರ್ವಜನಿಕ ದರ್ಶನ ಭಾಗ್ಯ ಯಾವಾಗಿನಿಂದ? ದಿನಾಂಕ ಘೋಷಿಸಿದ ಸಮಿತಿ

ಆಹ್ವಾನವನ್ನು ತಿರಸ್ಕರಿಸಿದ ಕಾಂಗ್ರೆಸ್, ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್ ಅಯೋಧ್ಯೆ ಮಂದಿರವನ್ನು ತಮ್ಮ “ರಾಜಕೀಯ ಯೋಜನೆ”ಯನ್ನಾಗಿ ಮಾಡಿದೆ ಎಂದು ಹೇಳಿದೆ. “ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ನಾಯಕರು ಅಪೂರ್ಣ ದೇವಾಲಯದ ಉದ್ಘಾಟನೆಯನ್ನು ಚುನಾವಣಾ ಲಾಭಕ್ಕಾಗಿ ಮಾಡುತ್ತಿರುವುದು ಇಲ್ಲಿ ಸ್ಪಷ್ಟ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ