ಅಯೋಧ್ಯೆ ರಾಮನ ಸಾರ್ವಜನಿಕ ದರ್ಶನ ಭಾಗ್ಯ ಯಾವಾಗಿನಿಂದ? ದಿನಾಂಕ ಘೋಷಿಸಿದ ಸಮಿತಿ

ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿದ್ದು, ಇದೇ ಜನವರಿ 22ರಂದು ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಇನ್ನು ಸಾರ್ವಜನಿಕರಿಗೆ ಯಾವಾಗಿನಿಂದ ರಾಮನ ದರ್ಶನ ಸಿಗಲಿದೆ ಎನ್ನುವ ದಿನಾಂಕವನ್ನು ಸಹ ಪ್ರಕಟಿಸಲಾಗಿದೆ. ಹಾಗಾದ್ರೆ, ರಾಮನ ದರ್ಶನ ಭಾಗ್ಯ ಯಾವಾಗಿನಿಂದ ಎನ್ನುವ ವಿವರ ಇಲ್ಲಿದೆ.

ಅಯೋಧ್ಯೆ ರಾಮನ ಸಾರ್ವಜನಿಕ ದರ್ಶನ ಭಾಗ್ಯ ಯಾವಾಗಿನಿಂದ? ದಿನಾಂಕ ಘೋಷಿಸಿದ ಸಮಿತಿ
ರಾಮಮಂದಿರ
Follow us
ರಮೇಶ್ ಬಿ. ಜವಳಗೇರಾ
|

Updated on:Jan 15, 2024 | 6:57 PM

ಅಯೋಧ್ಯೆ, (ಜನವರಿ 15): ಇದೇ ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರ (Ayodhya Ram temple) ಉದ್ಘಾಟನೆಗೆ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿದ್ದು, ಎಲ್ಲೆಡೆ ರಾಮಭಜನೆ ಶುರುವಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆಯ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪನೆಗೆ ಆಯ್ಕೆ ಮಾಡಲಾಗಿದೆ. ಇನ್ನು ರಾಮಮಂದಿರವನ್ನು ಸಾರ್ವಜನಿಕರ ದರ್ಶನ ಜನವರಿ 23ರಿಂದ ಶುರುವಾಗಲಿದೆ. ಈ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಇಂದು(ಜನವರಿ 15) ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯು ಜನವರಿ 22 ರಂದು ಮಧ್ಯಾಹ್ನ 12:20 ಕ್ಕೆ ನಡೆಯಲಿದೆ. ಅಂದು ಭಾರತ ಮತ್ತು ವಿದೇಶಗಳಿಂದ 7,000 ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಲಿದ್ದಾರೆ. ಉಳಿದಂತೆ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಈ ಸಮಾರಂಭವನ್ನು ಕಣ್ತುಂಬಿಕೊಳ್ಳಲಿದ್ದು, ಜನವರಿ 23ರಿಂದ ರಾಮಮಂದಿರವನ್ನು ಸಾರ್ವಜನಿಕರಿಗೆ ದರ್ಶನಕ್ಕೆ ಮುಕ್ತಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಆಗಲಿದೆ ಮೈಸೂರಿನ ಅರುಣ್ ಯೋಗಿರಾಜ್ ನಿರ್ಮಿಸಿದ ರಾಮಲಲ್ಲಾ ವಿಗ್ರಹ

ಇನ್ನು ರಾಮಮಂದಿರ ಶಂಕುಸ್ಥಾಪನೆ ಸಮಾರಂಭದ ಪೂರ್ವಭಾವಿ ಧಾರ್ಮಿಕ ವಿಧಿವಿಧಾನಗಳು ಜನವರಿ 16, ಮಂಗಳವಾರದಿಂದಲೇ ಆರಂಭವಾಗಲಿವೆ. ರಾಮಲಲ್ಲಾ ವಿಗ್ರಹವನ್ನು ‘ಗರ್ಭ ಗೃಹ’ದಲ್ಲಿ ಜನವರಿ 18, ಗುರುವಾರದಂದು ಇರಿಸಲಾಗುವುದು. ವಿಗ್ರಹವು 150 ಕೆಜಿ-200 ಕೆಜಿ ತೂಕವಿರುವ ನಿರೀಕ್ಷೆಯಿದೆ. ಜನವರಿ 21, ಭಾನುವಾರದವರೆಗೆ ಆಚರಣೆಗಳು ನಡೆಯಲಿವೆ ಎಂದು ಚಂಪತ್ ರೈ ತಿಳಿಸಿದ್ದಾರೆ.

ರಾಮನ ದರ್ಶನ ಭಾಗ ಯಾವಾಗಿನಿಂದ ಎಂದು ಕಾತರದಿಂದ ಕಾಯುತ್ತಿದ್ದ ಭಕ್ತರ ಸಮಯ ಬಂದೇ ಬಿಟ್ಟಿದೆ. ಈಗಾಗಲೇ ಅಯೋಧ್ಯೆಯನ್ನು ವೀಕ್ಷಣೆ ಮಾಡಲು ಸಹಸ್ರಾರು ಜನರು ವಿವಿಧ ರಾಜ್ಯಗಳಿಂದ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಮಾನಗಳ ದರ ಏರಿಕೆಯಾಗಿದೆ. ಹೀಗಾಗಿ ಹಲವು ರೈಲು ಮೂಲಕ ಅಯೋಧ್ಯೆಗೆ ಹೊರಟ್ಟಿದ್ದಾರೆ. ಇನ್ನು ಸಾರ್ವಜನಿಕರ ದರ್ಶನಕ್ಕೆ ಮುಕ್ತವಾದ ಬಳಿಕ ಭಕ್ತ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:57 pm, Mon, 15 January 24