ಶಾಲಾ-ಕಾಲೇಜುಗಳ ಮೇಲೆ ಕೊರೊನಾ ಕೆಂಗಣ್ಣು; ಒಡಿಶಾದ ಸರ್ಕಾರಿ ಶಾಲೆಯ 25 ವಿದ್ಯಾರ್ಥಿನಿಯರಿಗೆ ಸೋಂಕು ದೃಢ

ಕರ್ನಾಟಕದಲ್ಲೂ ಕೂಡ ಧಾರವಾಡದ ಎಸ್​ಡಿಎಂ ಕಾಲೇಜಿನಲ್ಲಿ ಕೊರೊನಾ ಭೀಕರತೆ ಎದುರಾಗಿದೆ. ಸದ್ಯ ಒಟ್ಟು 306 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.

ಶಾಲಾ-ಕಾಲೇಜುಗಳ ಮೇಲೆ ಕೊರೊನಾ ಕೆಂಗಣ್ಣು; ಒಡಿಶಾದ ಸರ್ಕಾರಿ ಶಾಲೆಯ 25 ವಿದ್ಯಾರ್ಥಿನಿಯರಿಗೆ ಸೋಂಕು ದೃಢ
ಒಡಿಶಾ ಸರ್ಕಾರಿ ಶಾಲೆ
Updated By: Lakshmi Hegde

Updated on: Nov 28, 2021 | 1:02 PM

ದೆಹಲಿ: ತೆಲಂಗಾಣದ ಮಹೀಂದ್ರಾ ವಿಶ್ವವಿದ್ಯಾಲಯದಲ್ಲಿ 30 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಆ ಯೂನಿವರ್ಸಿಟಿಯನ್ನು ಲಾಕ್​ ಮಾಡಲಾಗಿದೆ. ಅದರ ಬೆನ್ನಲ್ಲೇ ಒಡಿಶಾದ ಸರ್ಕಾರಿ ಶಾಲೆಯೊಂದರಲ್ಲಿ 25 ಬಾಲಕಿಯರಲ್ಲಿ ಕೊವಿಡ್​ 19 ಸೋಂಕು ಕಾಣಿಸಿಕೊಂಡಿದೆ. ಸೋಂಕಿತ ವಿದ್ಯಾರ್ಥಿನಿಯರಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಏನೂ ಕಾಣಿಸಿಕೊಂಡಿಲ್ಲ ಎಂದು ಮುಖ್ಯ ವೈದ್ಯಾಧಿಕಾರಿ ಡಾ. ರೂಪ್​ವಾನೂ ಮಿಶ್ರಾ ತಿಳಿಸಿದ್ದಾರೆ. ಅಂದಹಾಗೆ ಇದು ಬುಡಕಟ್ಟು ಜನಾಂಗದ ಹೆಣ್ಣುಮಕ್ಕಳ ವಸತಿ ಶಾಲೆಯಾಗಿದ್ದು, ಅವರನ್ನೆಲ್ಲ ಸದ್ಯ ಐಸೋಲೇಟ್​ ಮಾಡಲಾಗಿದೆ. 

ಈ ಶಾಲೆಯಲ್ಲಿ ಒಟ್ಟು 256 ವಿದ್ಯಾರ್ಥಿನಿಯರಿದ್ದು, 20 ಸಿಬ್ಬಂದಿಯಿದ್ದಾರೆ. ಜಿಲ್ಲಾ ಪ್ರಧಾನ ಕಚೇರಿಯಿಂದಲೇ ಇಲ್ಲಿ ವೈದ್ಯಕೀಯ ತಂಡವನ್ನು ಕಳಿಸಲಾಗಿದ್ದು, ಪರಿಸ್ಥಿತಿ ಮೇಲೆ ನಿಗಾ ಇಟ್ಟಿದ್ದಾರೆ.  ವಿದ್ಯಾರ್ಥಿಗಳು ಕಳೆದ ಎರಡು ದಿನಗಳಿಂದ ಶೀತ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದರು. ಹಾಗಾಗಿ ಅವರಿಗೆ ಕೊವಿಡ್ 19 ತಪಾಸಣೆ ಮಾಡಿಸಲಾಗಿತ್ತು. ಅವರಲ್ಲೀಗ 25ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ನಮ್ಮ ವೈದ್ಯಕೀಯ ತಂಡ ಮತ್ತು ಆಂಬುಲೆನ್ಸ್​ ಸ್ಥಳದಲ್ಲಿದೆ. ಡಾ. ಅನಿತಾ ಎಂಬುವರು ಮಕ್ಕಳನ್ನು ಪ್ರತಿದಿನವೂ ತಪಾಸಣೆ ಮಾಡುತ್ತಿದ್ದಾರೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದಲ್ಲೂ ಕೂಡ ಧಾರವಾಡದ ಎಸ್​ಡಿಎಂ ಕಾಲೇಜಿನಲ್ಲಿ ಕೊರೊನಾ ಭೀಕರತೆ ಎದುರಾಗಿದೆ. ಸದ್ಯ ಒಟ್ಟು 306 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಸದ್ಯ ಕೊರೊನಾ ಕಡಿಮೆಯಾಗಿದ್ದ ಕಾರಣ ಶಾಲಾ-ಕಾಲೇಜುಗಳೆಲ್ಲ ಶುರುವಾಗಿತ್ತು. ಆದರೆ ಈಗ ಸೋಂಕು ಶಿಕ್ಷಣ ಸಂಸ್ಥೆಗಳಿಗೇ ವ್ಯಾಪಿಸುತ್ತಿದೆ.

ಇದನ್ನೂ ಓದಿ: ಲಸಿಕೆಗೆ ಹೆದರಿ ಮನೆಯ ಮಾಳಿಗೆ ಏರಿದ ವ್ಯಕ್ತಿ; ಅಧಿಕಾರಿಗಳು ಕೊನೆಗೂ ಲಸಿಕೆ ನೀಡಿದ್ದೇಗೆ?