ಸಮಾನತೆಯ ತತ್ವ ಸಾರುವ ಸಂವಿಧಾನವನ್ನು ಸ್ಮರಿಸುವ ದಿನವಿದು

|

Updated on: Nov 26, 2020 | 6:27 PM

ದೇಶದ ಪ್ರತಿ ಪ್ರಜೆಗೂ ಸಕಲ ರೀತಿಯ ಹಕ್ಕುಗಳನ್ನೂ ನೀಡಿ ಸಮಾನತೆಯ ತತ್ವ ಸಾರುವ ಸಂವಿಧಾನವನ್ನು ಭಾರತದ ಸರ್ವಶ್ರೇಷ್ಠ ಗ್ರಂಥವೆಂದೂ ಪರಿಗಣಿಸಲಾಗಿದೆ.

ಸಮಾನತೆಯ ತತ್ವ ಸಾರುವ ಸಂವಿಧಾನವನ್ನು ಸ್ಮರಿಸುವ ದಿನವಿದು
ಸಂವಿಧಾನ ದಿನದ ಶುಭಾಶಯಗಳು
Follow us on

ಭಾರತದ ಸಂವಿಧಾನ ವಿಶ್ವದಲ್ಲೇ ಅತಿ ದೊಡ್ಡ ಲಿಖಿತ ರೂಪದ ಸಂವಿಧಾನ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಭಾರತ ನೆಲದಲ್ಲಿ ಬದುಕುವ ಪ್ರತಿಯೊಂದು ಪ್ರಜೆಗೂ ಅನ್ವಯವಾಗುವ ಈ ಸಂವಿಧಾನವನ್ನು ಸ್ಮರಿಸಿಕೊಳ್ಳುವ ದಿನ ಇಂದು (ನ.26).

ಸಂವಿಧಾನ ದಿನದ ಪ್ರಯುಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ,  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸ್ಮೃತಿ ಇರಾನಿ, ದೇವೇಂದ್ರ ಫಡಣವೀಸ್, ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದು. ಟ್ವೀಟ್ ಮಾಡುವ ಮೂಲಕ ಸಂವಿಧಾನದ ಮಹತ್ವವನ್ನು ಸಾರಿದ್ದಾರೆ.

ಸಂವಿಧಾನ ದಿನ ಶುರುವಾಗಿದ್ದು ಯಾವಾಗ?

Constitution Day ಸುಮಾರು ಏಳು ದಶಕಗಳ ಹಿಂದೆ, 26 ನವೆಂಬರ್ 1949ರಂದು ಅಂಗೀಕೃತಗೊಂಡ ಭಾರತದ ಸಂವಿಧಾನ ಎರಡು ತಿಂಗಳ ನಂತರ ಅಂದರೆ 1950ರ ಜನವರಿ 26ರಂದು ಜಾರಿಗೆ ಬಂತು. ಸಂವಿಧಾನವನ್ನು ಅಂಗೀಕರಿಸಿದ ದಿನದ ಸ್ಮರಣಾರ್ಥ 2015ರಿಂದ ಪ್ರತಿವರ್ಷ ನವೆಂಬರ್ 26ರಂದು ಸಂವಿಧಾನ ದಿನವೆಂದು ಆಚರಿಸಲಾಗುತ್ತಿದೆ.

Published On - 6:22 pm, Thu, 26 November 20