Republic Day 2023 Parade Highlights: ಕರ್ನಾಟಕದ ಸೇನಾಧಿಕಾರಿ ಕ್ಯಾಪ್ಟನ್​ ಟಿ.ಆರ್​.ರಾಕೇಶ್​ಗೆ ಶೌರ್ಯ ಚಕ್ರ ಪ್ರಶಸ್ತಿ

| Updated By: ವಿವೇಕ ಬಿರಾದಾರ

Updated on: Jan 26, 2023 | 12:30 PM

74th Republic Day Live Updates: ಇಂದು (ಜ.26) 74ನೇ ಗಣರಾಜ್ಯೋತ್ಸವ ಸಮಾರಂಭ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಳಗ್ಗೆ 9.30ಕ್ಕೆ ಆರಂಭವಾಗಲಿದೆ.

Republic Day 2023 Parade Highlights: ಕರ್ನಾಟಕದ ಸೇನಾಧಿಕಾರಿ ಕ್ಯಾಪ್ಟನ್​ ಟಿ.ಆರ್​.ರಾಕೇಶ್​ಗೆ ಶೌರ್ಯ ಚಕ್ರ ಪ್ರಶಸ್ತಿ
ಕ್ಯಾಪ್ಟನ್​ ಟಿ.ಆರ್​.ರಾಕೇಶ್

ಭಾರತ ಇಂದು (ಜ.26) 74ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ದೇಶದ ವಿವಿಧಡೆ ಗಣರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಭಾರತ ಗಣತಂತ್ರವಾಗಿ (Republic Day of India) ಇಂದಿಗೆ 74 ವರ್ಷ ಪೂರೈಸಿದೆ. 1950 ಜನವರಿ 26ರಂದು ದೇಶ ಗಣತಂತ್ರವಾಯಿತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಳಗ್ಗೆ 9.30ಕ್ಕೆ ಗಣರಾಜ್ಯೋತ್ಸವ ಸಮಾರಂಭ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮರ್​ ಜವಾನ್​ ಜ್ಯೋತಿಗೆ ಆಗಮಿಸಿ ಗೌರವ ಸಲ್ಲಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಬೆಳಗ್ಗೆ 10.30ಕ್ಕೆ ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಗಣರಾಜ್ಯೋತ್ಸವ ಪರೇಡ್​ನಲ್ಲಿ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್​​​​ ಫತ್ತಾಹ್​ ಅಲ್ ಸಿಸಿ ಆಗಮಿಸಿದ್ದಾರೆ. ಬೆಂಗಳೂರಿನಲ್ಲಿ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದರು.

ಗಣರಾಜ್ಯೋತ್ಸವದ ಮತ್ತಷ್ಟು ಕಾಪಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LIVE NEWS & UPDATES

The liveblog has ended.
  • 26 Jan 2023 12:24 PM (IST)

    Republic Day 2023 Parade Live: ಕರ್ನಾಟಕದ ಸೇನಾಧಿಕಾರಿ ಕ್ಯಾ.​ ಟಿ.ಆರ್​.ರಾಕೇಶ್​ಗೆ ಶೌರ್ಯ ಚಕ್ರ ಪ್ರಶಸ್ತಿ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಜಮ್ಮು-ಕಾಶ್ಮೀರ ಱಲಿಗೂ ಮುನ್ನ ಉಗ್ರರ ದಾಳಿ ತಪ್ಪಿಸಿದ್ದ ಕರುನಾಡಿನ ತುಮಕೂರು ಮೂಲದ ಕ್ಯಾಪ್ಟನ್​ ಟಿ.ಆರ್​.ರಾಕೇಶ್​ಗೆ ಶೌರ್ಯ ಚಕ್ರ ಪ್ರಶಸ್ತಿ ದೊರಕಿದೆ. ಮೋದಿ ಱಲಿಗೂ ಮುನ್ನ ಕನ್ನಡಿಗ ಕ್ಯಾ.ರಾಕೇಶ್​ ನೇತೃತ್ವದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆದಿತ್ತು. ಈ ವೇಳೆ ಮೋದಿ ಱಲಿಯಲ್ಲಿ ಆತ್ಮಾಹುತಿ ದಾಳಿ ಮಾಡಲು ಸಿದ್ಧಗೊಂಡಿದ್ದ ಉಗ್ರರನ್ನು ಕ್ಯಾ.ರಾಕೇಶ್ ದಮನ ಮಾಡಿದ್ದರು. ಈ ಹಿನ್ನೆಲೆ ಶೌರ್ಯ ಚಕ್ರ ದೊರಕಿದೆ.

  • 26 Jan 2023 12:13 PM (IST)

    Republic Day 2023 Parade Live: ವಾಯುಪಡೆ ಶಕ್ತಿ ಪ್ರದರ್ಶನ

    ಸಮಾರೋಪ ಸಮಾರಂಭದಲ್ಲಿ 45 IAF ವಿಮಾನಗಳನ್ನು ಒಳಗೊಂಡಂತೆ ಭಾರತೀಯ ನೌಕಾಪಡೆಯ ಒಂದು ಮತ್ತು ಭಾರತೀಯ ಸೇನೆಯ ನಾಲ್ಕು ಹೆಲಿಕಾಪ್ಟರ್‌ಗಳು ಹಾರಾಟ ನಡೆಸಿದವು.

  • 26 Jan 2023 12:10 PM (IST)

    Republic Day 2023 Parade Live: ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಶಕ್ತಿ ಪ್ರದರ್ಶನ

    ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಿಂದ ‘ನಾರಿಶಕ್ತಿ’ ಭಾರತೀಯ ವಾಯುಸೇನೆ, ಯುದ್ಧ ವಿಮಾನ, ಸೇನೆಯಲ್ಲಿ ಮಹಿಳೆಯರ ಕರ್ತವ್ಯ ಕುರಿತ ಸಾಹಸ ಪ್ರದರ್ಶನ.

  • 26 Jan 2023 12:06 PM (IST)

    Republic Day 2023 Parade Live: ನಶಾ ಮುಕ್ತ ಗುರಿ ನಮ್ಮ ಭಾರತ​ ಸ್ತಬ್ಧಚಿತ್ರ

    ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ ಇಲಾಖೆಯಿಂದ ‘ನಶಾ ಮುಕ್ತ ಗುರಿ ನಮ್ಮ ಭಾರತ’ ಎಂಬ ಸಂದೇಶ ಸಾರುವ ಸ್ತಬ್ಧಚಿತ್ರ ಪ್ರದರ್ಶನವಾಗಿದೆ.

  • 26 Jan 2023 12:01 PM (IST)

    Republic Day 2023 Parade Live: ಹರಿಯಾಣ ರಾಜ್ಯದ​ ಸ್ತಬ್ಧಚಿತ್ರ

    ಹರಿಯಾಣ ರಾಜ್ಯದಿಂದ ‘ಅಂತಾರಾಷ್ಟ್ರೀಯ ಗೀತ ಮಹೋತ್ಸವ’ ಹೆಸರಿನ ವಿಶೇಷ ಸ್ತಬ್ಧಚಿತ್ರ ಪ್ರದರ್ಶನವಾಗಿದೆ.

  • 26 Jan 2023 11:56 AM (IST)

    Republic Day 2023 Parade Live: ಉತ್ತರ ಪ್ರದೇಶ ರಾಜ್ಯದ​ ಸ್ತಬ್ಧಚಿತ್ರ

    ಉತ್ತರ ಪ್ರದೇಶದಿಂದ ಅಯೋಧ್ಯೆ ಕುರಿತ ‘ಅಯೋಧ್ಯೆ ದೀಪೋತ್ಸವ’ ಹೆಸರಿನ ವಿಶೇಷ ಸ್ತಬ್ಧಚಿತ್ರ ಪ್ರದರ್ಶನವಾಗಿದೆ.

  • 26 Jan 2023 11:53 AM (IST)

    Republic Day 2023 Parade Live: ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳ​ ಸ್ತಬ್ಧಚಿತ್ರ

    ಪಶ್ಚಿಮ ಬಂಗಾಳ ರಾಜ್ಯದಿಂದ ‘ದುರ್ಗಾ ಪೂಜೆಯ ವಿಶೇಷತೆ’ ಸ್ತಬ್ಧಚಿತ್ರ, ಮಹಾರಾಷ್ಟ್ರದಿಂದ ಶಕ್ತಿಪೀಠಗಳಾದ ‘ಮೂರೂವರೆ ಶಕ್ತಪೀಠಗಳು ಮತ್ತು ಶ್ರೀಶಕ್ತಿ ಜಾಗರ್’ ಥೀಮ್​, ತಮಿಳುನಾಡಿನಿಂದ ‘ಮಹಿಳಾ ಸಬಲೀಕರಣ ಮತ್ತು ಸಂಸ್ಕೃತಿ’ ಹೆಸರಿನ ಟ್ಯಾಬ್ಲೋ ಸ್ತಬ್ಧಚಿತ್ರಗಳು ಪ್ರದರ್ಶನವಾಗಿವೆ.

  • 26 Jan 2023 11:49 AM (IST)

    Republic Day 2023 Parade Live: ಕೇರಳ ರಾಜ್ಯದ​ ಸ್ತಬ್ಧಚಿತ್ರ

    ಕೇರಳ ರಾಜ್ಯದಿಂದಲೂ ‘ನಾರಿ ಶಕ್ತಿ’ ಥೀಮ್ ಸ್ತಬ್ಧಚಿತ್ರ ಪ್ರದರ್ಶನವಾಗಿದೆ.

  • 26 Jan 2023 11:45 AM (IST)

    Republic Day 2023 Parade Live: ಕರ್ನಾಟಕ​ ರಾಜ್ಯದ​ ಸ್ತಬ್ಧಚಿತ್ರ

    ಕರ್ನಾಟಕ ರಾಜ್ಯದಿಂದ ‘ನಾರಿ ಶಕ್ತಿ’ ಥೀಮ್ ಸ್ತಬ್ಧಚಿತ್ರ ಪ್ರದರ್ಶನವಾಗಿದೆ. ಕರ್ನಾಟಕದ ಸ್ತಬ್ಧಚಿತ್ರ ಸತತ 14 ವರ್ಷಗಳಿಂದ ಪಥಸಂಚಲನದಲ್ಲಿ ಭಾಗಿಯಾಗಿದೆ. 14 ವರ್ಷಗಳಿಂದ ಪಾಲ್ಗೊಂಡ ದೇಶದ ಏಕೈಕ ರಾಜ್ಯ ಕರ್ನಾಟಕ. ಈ ಬಾರಿ ಆದರ್ಶ ಮಹಿಳೆಯರ ಸಾಧನೆ ಅನಾವರಣವಾಗಿದೆ. ಮೂವರು ಮಹಿಳೆಯರಿಗೆ ಸ್ತಬ್ಧಚಿತ್ರ ಸಮರ್ಪಣೆ ಮಾಡಲಾಗಿದೆ. ಸ್ತಬ್ಧಚಿತ್ರದಲ್ಲಿ ಸೂಲಗಿತ್ತಿ ನರಸಮ್ಮ, ತುಳಸಿ ಗೌಡ ಹಾಲಕ್ಕಿ, ಸಾಲುಮರದ ತಿಮ್ಮಕ್ಕ ಅವರ ಸಾಧನೆಗಳ ಪ್ರದರ್ಶನ ಮಾಡಲಾಗಿದೆ. ಹಾಗೇ ಗಿಡ-ಮರ ,ಬೆಟ್ಟ-ಗುಡ್ಡಗಳಿಂದ ಸ್ತಬ್ಧಚಿತ್ರ ಶೃಂಗಾರಗೊಂಡಿದೆ. ಮುಂಭಾಗದಲ್ಲಿ ಹೆರಿಗೆ ತಜ್ಞೆ ಸೂಲಗಿತ್ತಿ ನರಸಮ್ಮ ಚಿತ್ರ, ಚನ್ನಪಟ್ಟಣದ ಗೊಂಬೆ ಮಾದರಿಯ ತೊಟ್ಟಿಲು ಚಿತ್ರ ಮತ್ತು ನರಸಮ್ಮನವರು ಮಗುವನ್ನು ಎತ್ತಿಕೊಂಡಿರುವಂತೆ ಚಿತ್ರ ಪ್ರದರ್ಶನಗೊಂಡಿದೆ.

  • 26 Jan 2023 11:41 AM (IST)

    Republic Day 2023 Parade Live: ಜಮ್ಮು-ಕಾಶ್ಮೀರ​ ರಾಜ್ಯದ​ ಸ್ತಬ್ಧ ಚಿತ್ರ

    ಜಮ್ಮು-ಕಾಶ್ಮೀರ ರಾಜ್ಯದಿಂದ ‘ನಯಾ ಜಮ್ಮು ಮತ್ತು ಕಾಶ್ಮೀರ’ ಥೀಮ್ ಸ್ತಬ್ಧಚಿತ್ರ ಪ್ರದರ್ಶನವಾಗಿದೆ.

  • 26 Jan 2023 11:39 AM (IST)

    Republic Day 2023 Parade Live: ಜಾರ್ಖಂಡ್​ ರಾಜ್ಯದ​ ಸ್ತಬ್ಧ ಚಿತ್ರ

    ಜಾರ್ಖಂಡ್​ ರಾಜ್ಯದಿಂದ ದಿಯೋಘರ್​ನಲ್ಲಿರುವ ಪ್ರಖ್ಯಾತ ದೇಗುಲ ಬಾಬಾಧಾಮ್​ ದೇವಾಲಯದ ಸ್ತಬ್ಧಚಿತ್ರ ಪ್ರದರ್ಶನವಾಗಿದೆ.

  • 26 Jan 2023 11:37 AM (IST)

    Republic Day 2023 Parade Live: ಅರುಣಾಚಲ ಪ್ರದೇಶ​ ರಾಜ್ಯದ​ ಸ್ತಬ್ಧಚಿತ್ರ

    ಅರುಣಾಚಲ ಪ್ರದೇಶ​ ರಾಜ್ಯದಿಂದ ‘ಪ್ರವಾಸೋದ್ಯಮದ ನಿರೀಕ್ಷೆಗಳು’ ಥೀಮ್ ಸ್ತಬ್ಧಚಿತ್ರ ಪ್ರದರ್ಶನವಾಗಿದೆ.

  • 26 Jan 2023 11:34 AM (IST)

    Republic Day 2023 Parade Live: ಗುಜರಾತ್​ ರಾಜ್ಯದ​ ಸ್ತಬ್ಧಚಿತ್ರ

    ಗುಜರಾತ್​ ರಾಜ್ಯದಿಂದ ‘ಕ್ಲೀನ್​ ಗ್ರೀನ್​ ಎನರ್ಜಿ ಸಮರ್ಥ ಗುಜರಾತ್’​ ಥೀಮ್ ಸ್ತಬ್ಧಚಿತ್ರ ಪ್ರದರ್ಶನವಾಗಿದೆ.

  • 26 Jan 2023 11:29 AM (IST)

    Republic Day 2023 Parade Live: ಲಡಾಖ್​ ಸ್ತಬ್ಧ ಚಿತ್ರ

    ಲಡಾಕ್​ನ ಪ್ರವಾಸೋದ್ಯಮ ಮತ್ತು ಸಂಯೋಜಿತ ಸಂಸ್ಕೃತಿ ಸ್ತಬ್ಧ ಚಿತ್ರ ಪ್ರದರ್ಶನವಾಗಿದೆ. ಲಡಾಕ್​ನ ಪ್ರವಾಸೋದ್ಯಮದ ಕುರಿತಾದ ವಿಶೇಷ ಸ್ತಬ್ಧ ಚಿತ್ರ.

  • 26 Jan 2023 11:25 AM (IST)

    Republic Day 2023 Parade Live: ಉತ್ತರಾಖಂಡ್ ರಾಜ್ಯದ ಸ್ತಬ್ಧ ಚಿತ್ರ

    ಉತ್ತರಾಖಂಡ್ ರಾಜ್ಯದ ‘ಮಾನಸಖಂಡ’ ಸಂದೇಶದ ಸ್ತಬ್ಧ ಚಿತ್ರ ಪ್ರದರ್ಶನವಾಗಿದೆ.

  • 26 Jan 2023 11:23 AM (IST)

    Republic Day 2023 Parade Live: ಅಸ್ಸಾಂ ರಾಜ್ಯದ ಸ್ತಬ್ಧ ಚಿತ್ರ

    ಅಸ್ಸಾಂ ರಾಜ್ಯದ ವೀರರ ಭೂಮಿ, ಆಧ್ಯಾತ್ಮಿಕತೆ ಸಂದೇಶದ  ಸ್ತಬ್ಧ ಚಿತ್ರ ಪ್ರದರ್ಶನವಾಗಿದೆ

  • 26 Jan 2023 11:17 AM (IST)

    Republic Day 2023 Parade Live: ಕರ್ತವ್ಯಪಥ್​​ದಲ್ಲಿ 23 ಸ್ತಬ್ಧ ಚಿತ್ರಗಳ ಪ್ರದರ್ಶನ

    ದೆಹಲಿ: ಗಣರಾಜ್ಯೋತ್ಸವ ಪಥಸಂಚಲನದಲ್ಲಿ ರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಕೇಂದ್ರ ಸಚಿವಾಲಯದ 23 ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.  ರಾಜ್ಯ, ಕೇಂದ್ರಾಡಳಿತ ಪ್ರದೇಶದ 17, ಕೇಂದ್ರದ ವಿವಿಧ ಸಚಿವಾಲಯಗಳ 6 ಟ್ಯಾಬ್ಲೋಗಳು ಪ್ರದರ್ಶನವಾಗುತ್ತಿವೆ. ಒಟ್ಟು ಬರೋಬ್ಬರಿ 23 ಟ್ಯಾಬ್ಲೋಗಳು ಭಾಗಿಯಾಗಿವೆ. ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರಾ, ಪಶ್ಚಿಮ ಬಂಗಾಳ, ಜಮ್ಮು,ಕಾಶ್ಮೀರ, ಲಡಾಖ್, ದಾದರ್ ನಗರ್ ಹವೇಲಿ, ದಮನ್ ಮತ್ತು ದಿಯು, ಗುಜರಾತ್, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ್, ಜಾರ್ಖಂಡ್, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ 17 ರಾಜ್ಯಗಳು ಭಾಗಿಯಾಗಿವೆ.

    ಆಂಧ್ರಪ್ರದೇಶದ ವಿಶೇಷ  ಸ್ತಬ್ಧ ಚಿತ್ರ ಪ್ರಬಲ ತೀರ್ಥಂ ಧ್ಯೇಯದೊಂದಿಗೆ ಪ್ರದರ್ಶನ

  • 26 Jan 2023 11:07 AM (IST)

    Republic Day 2023 Parade Live: ಭಾರತೀಯ ಭೂಸೇನೆಯ ಹೆಮ್ಮೆಯ ರೆಜಿಮೆಂಟ್​ಗಳಿಂದ ಪರೇಡ್​​

    ನವದೆಹಲಿ: ಗೂರ್ಖಾ ಬ್ರಿಗೇಡ್​ ತಂಡ, ಬಿಹಾರ ರೆಜಿಮೆಂಟ್​, ಜಮ್ಮು-ಕಾಶ್ಮೀರ ರೈಫಲ್ಸ್​​​​​ ರೆಜಿಮೆಂಟ್, ರಾಜಪೂತ್​​​ ರೆಜಿಮೆಂಟ್, ಡೋಗ್ರಾ ರೆಜಿಮೆಂಟ್​​​​​​​​​​​​​​​​ ತಂಡ,  ಮರಾಠ ಲೈಟ್ ಇನ್​ಫೆಂಟ್ರಿ, ಪಂಜಾಬ್​​​ ರೆಜಿಮೆಂಟ್, ಮರಾಠ, ಪಂಜಾಬ್​​​ ರೆಜಿಮೆಂಟ್​​​​​​​​​​​​​​​​  ಮತ್ತು ಮೆಕನೈಸ್ ಇನ್​​​ಫೆಂಟ್ರಿ​​​​​​​​​​​​​ ತಂಡದಿಂದ ಪರೇಡ್​​​​ ನಡೆಯಿತು.

  • 26 Jan 2023 10:56 AM (IST)

    Republic Day 2023 Parade Live: ಕರ್ತವ್ಯಪಥದಲ್ಲಿ ಮೂರು ಪಡೆಗಳಿಂದ ಮೈ ನವಿರೇಳಿಸುವ ಪರೇಡ್​​

    ದೆಹಲಿ: ಕರ್ತವ್ಯಪಥದಲ್ಲಿ ಮೂರು ಪಡೆಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗೌರವ ವಂದನೆ ಸಲ್ಲಿಸುತ್ತಿವೆ.  ವಾಯುಪಡೆ​​​​​​​​​​​ ತಂಡದಿಂದ ಆಕಾಶ್ ಮಿಸೈಲ್, ಏರ್​​​​ ಡಿಫೆನ್ಸ್​​​​​​​​​​​​​​​ ತಂಡ,  ಬ್ರಿಡ್ಜ್​​ ಎಂಜಿನಿಯರಿಂಗ್​​​​​​ ತಂಡ, ​​​​ಬ್ರಹ್ಮೋಸ್​-861 ಮಿಸೈಲ್​​​​ ತಂಡ,  K9 ವಜ್ರಾ ಟ್ಯಾಂಕ್ ಗ್ರೂಪ್​​ ತಂಡ, ಕ್ವಿಕ್​​ ರೆಸ್ಪಾನ್ಸ್​ ಲಡಾಖ್​ ಸ್ಕೌಟ್​​​ ತಂಡ, ಬಿಎಂಪಿ ಸಾರಥ್​ ಇನ್​ಫೆಂಟ್ರಿ ತಂಡ, ನಾಗಾ ಮಿಸೈಲ್ ಸಿಸ್ಟಂ, ವಾಯುಸೇನೆಯ​ ಬ್ಯಾಂಡ್​​​ ​ನೌಕಪಡೆಯ ಮಹಿಳಾ ತಂಡದಿಂದ  ಪರೇಡ್ ನಡೆಯಿತು.

  • 26 Jan 2023 10:42 AM (IST)

    Republic Day 2023 Live: ಗಣರಾಜ್ಯೋತ್ಸವ ಪರೇಡ್​ಗೆ ಮೊದಲು ಕುಶಾಲು ತೋಪು

    ದೆಹಲಿಯಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ಪರೇಡ್​ನಲ್ಲಿ ಆಕರ್ಷಕ ಕುಶಾಲು ತೋಪು ಹಾರಿಸಲಾಯಿತು.

     

  • 26 Jan 2023 10:31 AM (IST)

    Republic Day 2023 Parade Live: ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 74ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ವಜಾರೋಹಣ ನೆರವೇರಿಸಿದರು.  74ನೇ ಗಣರಾಜ್ಯೋತ್ಸವಕ್ಕೆ  ಮುಖ್ಯ ಅತಿಥಿಗಳಾಗಿ ಅಗಮಿಸಿದ ಈಜಿಪ್ಟ್ ಅಧ್ಯಕ್ಷ ಅಬ್ದೆಲ್​​​​ ಫತ್ತಾಹ್​ ಅಲ್ ಸಿಸಿ ಇದ್ದರು.

  • 26 Jan 2023 10:20 AM (IST)

    Republic Day 2023 Parade Live: ಅಮರ್​ ಜವಾನ್​ ಜ್ಯೋತಿ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದ ಪ್ರಧಾನಿ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 74ನೇ ಗಣರಾಜ್ಯೋತ್ಸವ ಸಮಾರಂಭ ಪ್ರಾರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅಮರ್​ ಜವಾನ್​ ಜ್ಯೋತಿ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು.  ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​, 3 ಸೇನಾ ಮುಖ್ಯಸ್ಥರು ಗೌರವ ನಮನ ಸಲ್ಲಿಸಿದರು.

  • 26 Jan 2023 10:16 AM (IST)

    Republic Day 2023 Parade Live: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವರು

    ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 74ನೇ ಗಣರಾಜ್ಯೋತ್ಸವ ಆಚರಣೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಸರ್ಕಾರದ ವತಿಯಿಂದ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸಿದ್ದಾರೆ. ಬಳ್ಳಾರಿಯ ವಿಮ್ಸ್ ಮೈದಾನದಲ್ಲಿ ಸಚಿವ ಶ್ರೀರಾಮುಲು, ಮಡಿಕೇರಿಯ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬಿ.ಸಿ.ನಾಗೇಶ್​, ದೇವನಹಳ್ಳಿಯಲ್ಲಿ ಸಚಿವ ಡಾ.ಕೆ.ಸುಧಾಕರ್, ಚಾಮರಾಜನಗರದಲ್ಲಿ ಸಚಿವ ವಿ.ಸೋಮಣ್ಣ, ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಪ್ರಭು ಚೌಹಾಣ್, ಕೋಲಾರ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಮುನಿರತ್ನರಿಂದ ಧ್ವಜಾರೋಹಣ ನೆರವೇರಿದೆ.

    ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಪ್ರಭು ಚೌಹಾಣ್​, ವಿಜಯಪುರದಲ್ಲಿ ಡಿಸಿ ವಿಜಯಮಹಾಂತೇಶ ದಾನಮ್ಮನವರ್​, ಕಾರವಾರದಲ್ಲಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಕಲಬುರಗಿಯಲ್ಲಿ ಸಚಿವ ಮುರುಗೇಶ್​​ ನಿರಾಣಿ, ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಗೋಪಾಲಯ್ಯ, ಗದಗ ನಗರದಲ್ಲಿ ಸಚಿವ ಸಿ.ಸಿ.ಪಾಟೀಲ್​​, ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಆನಂದ್​ ಸಿಂಗ್​,  ಹಾವೇರಿಯಲ್ಲಿ  ಸಚಿವ ಶಿವರಾಮ್ ಹೆಬ್ಬಾರ್, ದಾವಣಗೆರೆಯಲ್ಲಿ ಸಚಿವ ಭೈರತಿ ಬಸವರಾಜ್, ಶಿವಮೊಗ್ಗದಲ್ಲಿ ಉಸ್ತುವಾರಿ ಸಚಿವ ನಾರಾಯಣಗೌಡ, ತುಮಕೂರಿನಲ್ಲಿ ಸಚಿವ ಆರಗ ಜ್ಞಾನೇಂದ್ರ ಧ್ವಜಾರೋಹಣ ನೆರವೇರಿಸಿದ್ದಾರೆ.

  • 26 Jan 2023 09:55 AM (IST)

    Republic Day 2023 Parade Live: ಕರುನಾಡಿನ ಮೂವರು ಬಾಲಕರಿಗೆ ಶೌರ್ಯ ಪ್ರಶಸ್ತಿ

    ದೆಹಲಿ: ಧೈರ್ಯಂ ಸರ್ವತ್ರ ಸಾಧನಂ’ ಎನ್ನುವಂತೆ ಆಪತ್ಕಾಲದಲ್ಲಿ ಯುಕ್ತಿ ಬಳಸಿ ಶೌರ್ಯ ಮೆರೆದ ಕರುನಾಡಿ ಮೂವರು ಕುವರರಿಗೆ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಹುಬ್ಬಳ್ಳಿಯ ಆದಿತ್ಯ. ಎಂ. ಶಿವಳ್ಳಿ , ದಾವಣಗೆರೆಯ ಕೀರ್ತಿ ವಿವೇಕ್ ಎಂ ಸಾಹುಕಾರ್, ಕೊಡಗು ಮೂಲದ ದೀಕ್ಷಿತ್ ಕೆ.ಆರ್ ಅವರಿಗೆ ಮೂರು ಸೇನೆಗಳ ಮುಖ್ಯಸ್ಥರು ದೆಹಲಿಯ ಇಂಡಿಯಾ ಹೆಬಿಟೆಟ್ ಸೆಂಟರ್​ನಲ್ಲಿ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

  • 26 Jan 2023 09:44 AM (IST)

    Republic Day Live 2023: ವಿಶೇಷ ವಿಡಿಯೊ ಮೂಲಕ ಗಣರಾಜ್ಯೋತ್ಸವಕ್ಕೆ ಶುಭ ಕೋರಿದ ಇಸ್ರೇಲ್

    ಭಾರತದಲ್ಲಿರುವ ಇಸ್ರೇಲ್ ರಾಜತಾಂತ್ರಿಕ ಕಚೇರಿ ಸಿಬ್ಬಂದಿ ಭಾರತದ ವೈವಿಧ್ಯವನ್ನು ಎತ್ತಿತೋರಿಸುವ ವಿಡಿಯೊ ಹಂಚಿಕೊಂಡು ಗಣರಾಜ್ಯೋತ್ಸವಕ್ಕೆ ಶುಭ ಕೋರಿದ್ದಾರೆ. ಈ ಅಪರೂಪದ ಪ್ರಯತ್ನವನ್ನು ಭಾರತೀಯರು ಶ್ಲಾಘಿಸಿದ್ದಾರೆ. ‘ಭಾರತದ ನಮ್ಮ ಸೋದರ, ಸೋದರಿಯರಿಗೆ ಶುಭ ಕೋರಲೆಂದು ಸಣ್ಣದೊಂದು ಉಡುಗೊರೆ ಸಿದ್ಧಪಡಿಸಿದ್ದೇವೆ’ ಎಂದು ಇಸ್ರೇಲ್ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

  • 26 Jan 2023 09:41 AM (IST)

    Republic Day 2023 Live: ನಾಗಪುರ ಆರ್​ಎಸ್​ಎಸ್​ ಮುಖ್ಯ ಕಾರ್ಯಾಲಯದಲ್ಲಿ ರಾಷ್ಟ್ರಧ್ವಜಾರೋಹಣ

    ನಾಗಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್​ಎಸ್​) ಮುಖ್ಯ ಕಾರ್ಯಾಲಯದಲ್ಲಿ ರಾಷ್ಟ್ರಧ್ವಜಾರೋಹಣ ನಡೆಯಿತು. ಮಹಾನಗರ ಸಹಸಂಘಚಾಲಕ ಶ್ರೀಧರ್ ಗಡ್​ಗೆ ಧ್ವಜಾರೋಹಣ ನೆರವೇರಿಸಿದರು.

  • 26 Jan 2023 09:39 AM (IST)

    Republic Day 2023 Parade Live: ತುಮಕೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರರಿಂದ ಧ್ವಜಾರೋಹಣ

    ತುಮಕೂರು:  74 ನೇ ಗಣರಾಜ್ಯೋತ್ಸವ ಹಿನ್ನೆಲೆ ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಧ್ವಜಾರೋಹಣ ನೇರವೇರಿಸಿದರು. ಜಿಲ್ಲಾಧಿಕಾರಿ ವೈಎಸ್ ಪಾಟೀಲ್, ಎಸ್ ಪಿ ರಾಹುಲ್ ಕುಮಾರ್. ಜಿಪಂ ಸಿಇಒ ವಿದ್ಯಾಕುಮಾರಿ, ಸಂಸದ ಜಿಎಸ್ ಬಸವರಾಜ್, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದಾರೆ.

  • 26 Jan 2023 09:36 AM (IST)

    Republic Day 2023 Live: ಅಮೆರಿಕ ರಾಯಭಾರ ಕಚೇರಿಯಲ್ಲಿ ಅನುರಣಿಸಿದ ವಂದೇ ಮಾತರಂ

    ಗಣರಾಜ್ಯೋತ್ಸವ ಪ್ರಯುಕ್ತ ಅಮೆರಿಕ ರಾಯಭಾರ ಕಚೇರಿಯಲ್ಲಿ ನಡೆದ ವಂದೇ ಮಾತರಂ ಗಾಯನ ಗಮನ ಸೆಳೆಯಿತು. ಪವಿತ್ರಾ ಚಾರಿ ಅವರ ಗಾಯನಕ್ಕೆ ರಾಯಭಾರ ಕಚೇರಿ ಅಧಿಕಾರಿಗಳಾದ ರಾಘವನ್ (ಕೊಳಲು), ಸ್ಟಿಫಾನಿ (ಗಿಟಾರ್) ಸಹಕರಿಸಿದರು.

  • 26 Jan 2023 09:26 AM (IST)

    Republic Day 2023 Parade Live: ದೆಹಲಿ ಗಣರಾಜ್ಯೋತ್ಸವ ಪರೇಡ್​ನ ಲೈವ್ ಇಲ್ಲಿ ವೀಕ್ಷಿಸಿ

    ಈ ಬಾರಿಯ ಗಣರಾಜ್ಯೋತ್ಸವವು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಬಾರಿ ಸೇನಾ ಸಾಧನಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಗಣರಾಜ್ಯೋತ್ಸವ ಪರೇಡ್​ನ ಲೈವ್ ವೀಕ್ಷಿಸಲು ಇಲ್ಲಿದೆ ಲಿಂಕ್

     

  • 26 Jan 2023 09:26 AM (IST)

    Republic Day 2023 Parade Live: ನವಭಾರತಕ್ಕಾಗಿ ನವ ಕರ್ನಾಟಕ ಧ್ಯೇಯದೊಂದಿಗೆ ಗಣರಾಜ್ಯೋತ್ಸವ ಆಚರಣೆ: ಥಾವರ್ ​ಚಂದ್​ ಗೆಹ್ಲೋಟ್

    ಬೆಂಗಳೂರು: ರಾಜ್ಯ ಸರ್ಕಾರ ಎಲ್ಲ ವರ್ಗಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಬಡವರು, ದಲಿತರು, ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಶ್ರಮವಹಿಸಲಾಗುತ್ತಿದೆ. ನವಭಾರತಕ್ಕಾಗಿ ನವ ಕರ್ನಾಟಕ ಧ್ಯೇಯದೊಂದಿಗೆ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ದೇಶದ ಸ್ವಾತಂತ್ರ್ಯ ಅಮೃತಮಹೋತ್ಸದಡಿ ಶಾಲೆಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಅಮೃತ ಶಾಲೆ ಯೋಜ‌ನೆ ಸೇರಿ 14 ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. 20-21 ನೇ ಸಾಲಿನ SDG ಸೂಚ್ಯಂಕ ವರದಿಯಲ್ಲಿ 4 ನೇ ಸ್ಥಾನದಲ್ಲಿದೆ. ಎಂದು ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್ ಹೇಳಿದ್ದಾರೆ.

    ಬೆಂಗಳೂರಿನ ಮಾಣಿಕ್​ ಷಾ ಪರೇಡ್​​ನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಕನ್ನಡದಲ್ಲಿ ರಾಜ್ಯದ ಜನತೆಗೆ ಗಣರಾಜ್ಯೋತ್ಸವ ಶುಭಾಶಯಗಳು ತಿಳಿಸಿದರು. ರಾಜ್ಯಾದ್ಯಂತ 11 ನೇ‌ ಕೃಷಿ ಗಣತಿ ಆರಂಭಿಸಲಾಗಿದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 6,478.76 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದರಲ್ಲಿ 28 ಲಕ್ಷ ಕುಟುಂಬಗಳ 52.71 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದೆ. ಈ ಯೋಜನೆಯಡಿ 13.47 ಕೋಟಿ ದಿನಗೂಲಿ ಉದ್ಯೋಗ ಸೃಷ್ಟಿಸಲಾಗಿದೆ. ಕಾರ್ಮಿಕರ ಖಾತೆಗೆ 4,110 ಕೋಟಿ ನೇರವಾಗಿ ಜಮೆ ಮಾಡಲಾಗಿದೆ. 2022ರಲ್ಲಿ 13.35 ಲಕ್ಷ ಮನೆಗಳಿಗೆ ಮೂಲಸೌಕರ್ಯ ಕಲ್ಪಿಸಲಾಗಿದೆ. ಇದಕ್ಕಾಗಿ 2314.34 ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

    ಕಂದಾಯ ಗ್ರಾಮಗಳ ಘೋಷಣೆಯಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನ ಪಡೆದಿದೆ. 2020-23ರ ಸಾಲಿನಲ್ಲಿ 20.19 ಲಕ್ಷ ರೈತರಿಗೆ ಬೆಳೆ ಸಾಲ ವಿತರಣೆ ಮಾಡಲಾಗಿದೆ. ರೈತರಿಗೆ 15,066 ಕೋಟಿ ಬೆಳೆ ಸಾಲ ನೀಡಲಾಗಿದೆ. ರೈತರ ಸಮುದಾಯಕ್ಕೆ 60 ಲಕ್ಷ ಮೊಳಕೆ ಸಸಿ, 40 ಟನ್ ಜೈವಿಕ ಗೊಬ್ಬರ, 23 ಸಾವಿರ ಲೀಟರ್ ಅರ್ಕಾ ಮೈಕ್ರೋಬಿಯಲ್ ಕನ್ಸಾರ್ಷಿಯಂ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

    ಮಹಿಳಾ ಸ್ವಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷ ಸಾಲ ನೀಡಲಾಗುವುದು. ಯಶಸ್ವಿನಿ ಸಹಕಾರ ಸದಸ್ಯರ ಆರೋಗ್ಯ ಟ್ರಸ್ಟ್​​ನಡಿ 32.32 ಲಕ್ಷ ನೋಂದಣಿಗಳಾಗಿವೆ. 2098.85 ಕೋಟಿ ರೂ. ವೆಚ್ಚದಲ್ಲಿ 1 ಲಕ್ಷ 57 ಸಾವಿರ ಮನೆಗಳ ನಿರ್ಮಾಣ ಮಾಡಲಾಗಿದೆ. ಸ್ಲಂನಲ್ಲಿ ವಾಸಿಸುವ 3.36 ಲಕ್ಷ ಕುಟುಂಬಗಳಿಗೆ ಭೂಮಾಲೀಕತ್ವ ಹಕ್ಕುಪತ್ರ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಕರ್ನಾಟಕ ಸರ್ಕಾರ ಐತಿಹಾಸಿಕ ನಿರ್ಣಯ ಕೈಗೊಂಡಿದೆ. ರಾಜ್ಯ ಸೇವೆಗಳ ನೇಮಕಾತಿ ಮತ್ತು ಪದೋನ್ನತಿಗಾಗಿ ಇದ್ದ ಮೀಸಲಾತಿಯನ್ನು ಪರಿಶಿಷ್ಟ ಜಾತಿಗೆ ಶೇಕಡಾ 15 ರಿಂದ 17 ಕ್ಕೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇಕಡ 3 ರಿಂದ 7 ಕ್ಕೆ ಹೆಚ್ಚಿಸಲಾಗಿದೆ. ಬಡ ಎಸ್​ಸಿ ಎಸ್​ಟಿ ಕುಟುಂಬಗಳಿಗೆ ಭೂಮಿ ಒದಗಿಸುವ ಭೂ ಒಡೆತನ ಯೋಜನೆಯ ಘಟಕ ವೆಚ್ಚವನ್ನು ಪ್ರತಿ ಎಕರೆಗೆ 15- ಲಕ್ಷ ರೂಪಾಯಿ ಗಳಿಂದ 20 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಎಂದರು.

    2022ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಕರ್ನಾಟಕ ರತ್ನವನ್ನು ದಿವಂಗತ ಪುನಿತ್ ರಾಜ್‌ಕುಮಾರ್ ಮರಣೋತ್ತರವಾಗಿ ಪ್ರಧಾನ ಮಾಡಲಾಗಿದೆ ಎಂದು ಹೇಳಿದರು.

  • 26 Jan 2023 09:23 AM (IST)

    ಒಗ್ಗಟ್ಟಿನಿಂದ ಮುನ್ನಡೆಯೋಣ: ಮೋದಿ ಗಣರಾಜ್ಯೋತ್ಸವ ಸಂದೇಶ

    ಪ್ರಧಾನಿ ನರೇಂದ್ರ ಮೋದಿ ಅವರು ಗಣರಾಜ್ಯೋತ್ಸವ ಪ್ರಯುಕ್ತ ದೇಶದ ಜನರಿಗೆ ಸಂದೇಶ ನೀಡಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಗಣರಾಜ್ಯೋತ್ಸವ ಆಚರಿಸುತ್ತಿರುವುದು ಈ ಬಾರಿಯ ವಿಶೇಷವಾಗಿದೆ. ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಲು ನಾವು ಒಗ್ಗಟ್ಟಿನಿಂದ ಮುನ್ನಡೆಯಲು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.

  • 26 Jan 2023 09:15 AM (IST)

    Republic Day 2023 Parade Live: ಧಾರವಾಡದ ಆರ್ ಎನ್ ಶೆಟ್ಟಿ ಮೈದಾನದಲ್ಲಿ ಸಚಿವ ಆಚಾರ ಹಾಲಪ್ಪರಿಂದ ಧ್ವಜಾರೋಹಣ

    ಧಾರವಾಡ: 74 ನೇ ಗಣರಾಜ್ಯೋತ್ಸವ ಹಿನ್ನೆಲೆ ಧಾರವಾಡದ ಆರ್ ಎನ್ ಶೆಟ್ಟಿ ಮೈದಾನದಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆಚಾರ ಹಾಲಪ್ಪ ಧ್ವಜಾರೋಹಣ ನೆರವೇರಿಸಿದರು. ಸಚಿವರಿಗೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಹು-ಧಾ ನಗರ ಪೊಲೀಸ್ ಕಮಿಷನರ್ ರಮಣ ಗುಪ್ತ, ಎಸ್ಪಿ ಲೋಕೇಶ್ ಜಗಲಾಸರ್ ಸಾಥ್ ನೀಡಿದ್ದಾರೆ.

  • 26 Jan 2023 09:09 AM (IST)

    Republic Day 2023 Parade Live: ಬಳ್ಳಾರಿಯಲ್ಲಿ150 ಅಡಿ ಎತ್ತರದ ಧ್ವಜ ಸ್ಥಂಬದ ಮೇಲೆ ರಾಷ್ಟ್ರಧ್ವಜ ಹಾರಾಟ

    ಬಳ್ಳಾರಿ: 74ನೇ ಗಣರಾಜ್ಯೋತ್ಸವದ ಸಂಭ್ರಮಾಚರಣೆಯ ಹಿನ್ನೆಲೆ ಬಳ್ಳಾರಿಯ ಎಚ್ಆರ್ ಗವಿಯಪ್ಪ ವೃತ್ತದಲ್ಲಿರುವ 150 ಅಡಿ ಎತ್ತರದ ಧ್ವಜ ಸ್ಥಂಬದ ಮೇಲೆ ರಾಷ್ಟಧ್ವಜ  ಹಾರಿದೆ. ಬಳ್ಳಾರಿ ಉಸ್ತುವಾರಿ ಸಚಿವ ಶ್ರೀರಾಮುಲು ಧ್ವಜಾರೋಹಣ ನೆರವೇರಿಸಿದ್ದಾರೆ.

  • 26 Jan 2023 09:00 AM (IST)

    Republic Day 2023 Parade Live: ಮಾಣೆಕ್​ ಷಾ ಪರೇಡ್​ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ರಿಂದ ಧ್ವಜಾರೋಹಣ​​

    ಬೆಂಗಳೂರು: ರಾಜ್ಯದ ವಿವಿಧಡೆ 74 ನೇ ಗಣರಾಜ್ಯೋತ್ಸವ ಸಂಭ್ರಮ ವಿಜೃಂಭಣೆಯಿಂದ ಜರಗುತ್ತಿದ್ದು, ಬೆಂಗಳೂರಿನ ಮಾಣಿಕ್ ಷಾ ಪರೇಡ್​ನಲ್ಲಿ ಬೆಳಗ್ಗೆ 9 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ‌ ನೇರವೇರಿಸಿದ್ದಾರೆ. ಗಣರಾಜ್ಯೋತ್ಸವ ಸಾರ್ವಜನಿಕರಿಗೆ ಪರೇಡ್ ವೀಕ್ಷಣೆಗೆ ಒಟ್ಟು38 ಕಲಾ ತಂಡ,  7 ಸಾವಿರ ಜನರಿಗೆ ಅವಕಾಶ ನೀಡಲಾಗಿದೆ. ಈ ಬಾರಿ ಪರೇಡ್​ನಲ್ಲಿ ಕೇರಳ ಪೊಲೀಸ್ ತಂಡವನ್ನು ಆಹ್ವಾನಿಸಲಾಗಿದೆ. ಪರೇಡ್ ಕಮಾಂಡರ್ ಲೆಫ್ಟಿನೆಂಟ್ ಕರ್ನಲ್ ವಿಕ್ರಮಾದಿತ್ಯ, ಸೆಕೆಂಡ್​  ಇನ್ ಕಮಾಂಡರ್ ಮೇಜರ್ ಯೋಗ್ವಿರ್ ಪರೇಡ್ ಮುಂದಾಳತ್ವ ವಹಿಸಿದ್ದಾರೆ.

  • 26 Jan 2023 08:39 AM (IST)

    Republic Day 2023 Parade Live: ಚಾಮರಾಜಪೇಟೆ ಮೈದಾನದಲ್ಲಿ ಮೊದಲ ಬಾರಿಗೆ ಗಣರಾಜ್ಯೋತ್ಸವ ಆಚರಣೆ

    ಚಾಮರಾಜಪೇಟೆ ಮೈದಾನದಲ್ಲಿ ಮೊದಲ ಬಾರಿಗೆ ಗಣರಾಜ್ಯೋತ್ಸವ ಆಚರಣೆ ಮಾಡಲಾಗಿದೆ. ಬೆಂಗಳೂರು ಉತ್ತರ ಉಪ ಆಯುಕ್ತ ಡಾ.ಶಿವಣ್ಣರಿಂದ ಧ್ವಜಾರೋಹಣ ನೆರವೇರಿಸಲಾಗಿದೆ. ಸಂಸದ ಪಿ.ಸಿ.ಮೋಹನ್, ಶಾಸಕ ಜಮೀರ್, ಅಧಿಕಾರಿಗಳು ಭಾಗಿಯಾಗಿದ್ದಾರೆ.

  • 26 Jan 2023 08:36 AM (IST)

    Republic Day 2023 Parade Live: ಬೆಳಗ್ಗೆ 10.30ಕ್ಕೆ ಕರ್ತವ್ಯಪಥದಲ್ಲಿ ಗಣರಾಜ್ಯೋತ್ಸವ ಪರೇಡ್​​ ಆರಂಭ

    ದೇಶದ ರಾಜಧಾನಿ ದೆಹಲಿಯಲ್ಲಿ ಬೆಳಗ್ಗೆ 9.30ಕ್ಕೆ ಗಣರಾಜ್ಯೋತ್ಸವ ಸಮಾರಂಭ ಆರಂಭವಾಗಲಿದೆ. ಅಮರ್​ ಜವಾನ್​ ಜ್ಯೋತಿಗೆ ಆಗಮಿಸಿ ಪ್ರಧಾನಿ ಮೋದಿ ಗೌರವ ಸಲ್ಲಿಸಲಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಕರ್ತವ್ಯಪಥದಲ್ಲಿ ಗಣರಾಜ್ಯೋತ್ಸವ ಪರೇಡ್​​ ಆರಂಭವಾಗುತ್ತೆ. ಗಣರಾಜ್ಯೋತ್ಸವ ಪರೇಡ್​ನಲ್ಲಿ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್​​​​ ಫತ್ತಾಹ್​ ಅಲ್ ಸಿಸಿ ಭಾಗಿಯಾಗಲಿದ್ದಾರೆ.

  • 26 Jan 2023 08:33 AM (IST)

    Republic Day 2023 Parade Live: ಜಿಲ್ಲಾ ಕೇಂದ್ರಗಳಲ್ಲಿ ಸಚಿವರಿಂದ ಧ್ವಜಾರೋಹಣ

    ರಾಜ್ಯಾದ್ಯಂತ ಇಂದು 74ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದ್ದು ಜಿಲ್ಲಾ ಕೇಂದ್ರಗಳಲ್ಲಿ ಸಚಿವರು ಧ್ವಜಾರೋಹಣ ಮಾಡಲಿದ್ದಾರೆ. ಜಿಲ್ಲಾವರು ಧ್ವಜಾರೋಹಣ ಮಾಡುವ ಸಚಿವರ ಪಟ್ಟಿ.

    ಗೋವಿಂದ ಕಾರಜೋಳ-ಬೆಳಗಾವಿ, ಬಿ.ಶ್ರೀರಾಮುಲು-ಬಳ್ಳಾರಿ, ವಿ.ಸೋಮಣ್ಣ-ಚಾಮರಾಜನಗರ, ಎಸ್.ಅಂಗಾರ-ಉಡುಪಿ, ಆರಗ ಜ್ಞಾನೇಂದ್ರ-ತುಮಕೂರು, ಸಿ.ಸಿ.ಪಾಟೀಲ್-ಗದಗ, ಆನಂದ್ ಸಿಂಗ್-ಕೊಪ್ಪಳ, ಕೋಟ ಶ್ರೀನಿವಾಸ ಪೂಜಾರಿ-ಉತ್ತರ ಕನ್ನಡ, ಪ್ರಭು ಚೌಹಾಣ್-ಯಾದಗಿರಿ, ಮುರುಗೇಶ್ ನಿರಾಣಿ-ಕಲಬುರಗಿ, ಶಿವರಾಂ ಹೆಬ್ಬಾರ್-ಹಾವೇರಿ, ಎಸ್.ಟಿ.ಸೋಮಶೇಖರ್-ಮೈಸೂರು, ಬಿ.ಸಿ.ಪಾಟೀಲ್-ಚಿತ್ರದುರ್ಗ, ಭೈರತಿ ಬಸವರಾಜ್-ದಾವಣಗೆರೆ, ಕೆ.ಸುಧಾಕರ್-ಬೆಂಗಳೂರು ಗ್ರಾಮಾಂತರ, ಕೆ.ಗೋಪಾಲಯ್ಯ-ಹಾಸನ, ಶಶಿಕಲಾ ಜೊಲ್ಲೆ-ವಿಜಯನಗರ, ಎಂಟಿಬಿ ನಾಗರಾಜ್-ಚಿಕ್ಕಬಳ್ಳಾಪುರ, ಕೆ.ಸಿ.ನಾರಾಯಣಗೌಡ-ಶಿವಮೊಗ್ಗ, ಬಿ.ಸಿ.ನಾಗೇಶ್-ಕೊಡಗು, ವಿ.ಸುನೀಲ್ ಕುಮಾರ್-ದಕ್ಷಿಣ ಕನ್ನಡ, ಹಾಲಪ್ಪ ಆಚಾರ್-ಧಾರವಾಡ, ಶಂಕರ್ ಪಾಟೀಲ್ ಮುನೇನಕೊಪ್ಪ-ರಾಯಚೂರು, ಮುನಿರತ್ನ-ಕೋಲಾರ, ಆರ್.ಅಶೋಕ್-ಮಂಡ್ಯ, ವಿಜಯಪುರ-ಡಿಸಿಯಿಂದ ಧ್ವಜಾರೋಹಣ
    ಬೀದರ್, ಚಿಕ್ಕಮಗಳೂರು, ಬಾಗಲಕೋಟೆಯಲ್ಲಿ ಡಿಸಿ ಧ್ವಜಾರೋಹಣ.

  • 26 Jan 2023 08:29 AM (IST)

    Republic Day 2023 Parade Live: ಕರ್ನಾಟಕದ ನಾರಿಶಕ್ತಿ ಸ್ತಬ್ಧಚಿತ್ರ ಸೇರಿ 17 ಸ್ತಬ್ಧಚಿತ್ರ ಭಾಗಿ

    ದೇಶದ ರಾಜಧಾನಿ ದೆಹಲಿಯಲ್ಲಿ ಇಂದು 74ನೇ ಗಣರಾಜ್ಯೋತ್ಸವ ಆಚರಣೆ ನಡೆಯುತ್ತಿದ್ದು ಕರ್ನಾಟಕದ ನಾರಿಶಕ್ತಿ ಸ್ತಬ್ಧಚಿತ್ರ ಸೇರಿ 17 ಸ್ತಬ್ಧಚಿತ್ರ ಭಾಗಿಯಾಗುತ್ತಿವೆ. ಕೇಂದ್ರಾಡಳಿತ ಪ್ರದೇಶಗಳ ಸ್ತಬ್ಧಚಿತ್ರಗಳು ಭಾಗಿಯಾಗುತ್ತಿವೆ. ಕೇಂದ್ರದ ವಿವಿಧ ಸಚಿವಾಲಯದ 6 ಸ್ತಬ್ಧಚಿತ್ರ ಭಾಗಿಯಾಗುತ್ತಿವೆ. ಸತತ 14ನೇ ಬಾರಿಗೆ ಕರ್ನಾಟಕದ ಸ್ತಬ್ಧಚಿತ್ರ ಭಾಗಿಯಾಗುತ್ತಿದ್ದು ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ, ಹಾಲಕ್ಕಿ ತುಳಿಸಿಗೌಡ, ಸೂಲಗಿತ್ತಿ ನರಸಮ್ಮ ಸಾಧನೆ ದೇಶಕ್ಕೆ ಪರಿಚಯಿಸುತ್ತಿದ್ದಾರೆ.

  • 26 Jan 2023 08:27 AM (IST)

    Republic Day 2023 Parade Live: ಮೊದಲ ಬಾರಿಗೆ ಬಿಎಸ್​ಎಫ್​ ಮಹಿಳಾ ಪ್ರಹರಿ ಭಾಗಿ

    ಪ್ರಥಮ ಬಾರಿಗೆ ಪರೇಡ್​ನಲ್ಲಿ ಬಿಎಸ್​ಎಫ್​ ಮಹಿಳಾ ಪ್ರಹರಿ ಭಾಗಿಯಾಗಲಿದೆ. ಹಾಗೇ ಒಂಟೆ ದಳದ ಮಹಿಳಾ ಸಿಬ್ಬಂದಿ, ಸ್ಕ್ವಾಡ್ರನ್ ಲೀಡರ್​ ಸಿಂಧೂ ರೆಡ್ಡಿ ನೇತೃತ್ವದಲ್ಲಿ ವಾಯುಪಡೆ ಭಾಗಿಯಾಗಲಿದ್ದಾರೆ. 105 ಎಂಎಂ ಇಂಡಿಯನ್​ ಫೀಲ್ಡ್​ಗನ್​ಗಳಿಂದ 21 ಗನ್ ಸೆಲ್ಯೂಟ್​, ಕಾರ್ಪ್ಸ್ ಆಫ್ ಸಿಗ್ನಲ್​ನ ‘ಡೇರ್ ಡೆವಿಲ್ಸ್’ ಮೋಟಾರ್ ಸೈಕಲ್ ರೈಡರ್ಸ್​ ಪ್ರದರ್ಶನವಾಗಲಿದೆ.

Published On - 8:17 am, Thu, 26 January 23

Follow us on