ಗಣರಾಜೋತ್ಸವ ಆಚರಣೆಗೆ ರಾಷ್ಟ್ರ ರಾಜಧಾನಿ ದೆಹಲಿ ಸಿದ್ದವಾಗಿದೆ. ಕರ್ತವ್ಯ ಪಥ್ ರಸ್ತೆಯಲ್ಲಿ ಪರೇಡ್ ನಡೆಸಲು ಸಕಲ ಸಿದ್ದತೆಗಳು ಪೂರ್ಣಗೊಂಡಿದೆ. ಇಂದು ಬೆಳಗ್ಗೆ 9.50 ಕ್ಕೆ ವಾರ್ ಮೆಮೋರಿಯಲ್ ನಲ್ಲಿ ಪ್ರಧಾನ ಮಂತ್ರಿ ,ರಕ್ಷಣಾ ಮಂತ್ರಿ ಹಾಗೂ ಮೂರು ಸೇನೆಗಳ ಮುಖ್ಯಸ್ಥರು ನಮನ ಸಲ್ಲಿಸಲಿದ್ದಾರೆ. 10.20ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪರೇಡ್ ಗೆ ಚಾಲನೆ ಸಿಗಲಿದೆ. ಈ ಬಾರಿಯ ಗಣರಾಜೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಭಾಗಿಯಾಗುತ್ತಿದ್ದಾರೆ.
ರಾಜಪಥ್ ನಿಂದ ಕರ್ತವ್ಯ ಪಥ್ ಆಗಿ ಬದಲಾದ ಮೇಲೆ ನಡೆಯುತ್ತಿರುವ ಮೊದಲ ಗಣರಾಜೋತ್ಸವ ಇದಾಗಿದ್ದು ಹಲವು ವಿಶೇಷತೆಗಳಿಂದ ಕೂಡಿದೆ. ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸೇನಾ ಸಾಧನಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆ, ಸಚಿವಾಲಯಗಳು ಸೇರಿದಂತೆ ಈಬಾರಿ 17ರಾಜ್ಯಗಳ ಸ್ತಬ್ಧ ಚಿತ್ರಗಳುಪ್ರದರ್ಶನಗೊಳ್ಳಲಿದೆ. ಇನ್ನು ಕೇಂದ್ರ ಸಂಸ್ಕೃತಿ ಇಲಾಖೆಯಿಂದ ಹಲವು ರಾಜ್ಯಗಳ ಸ್ಥಳೀಯ ಕಲಾ ಪ್ರಕಾರಗಳನ್ನು ಪ್ರದರ್ಶನಮಾಡಲಾಗುತ್ತಿದೆ.