Food Poison: ತೆಲಂಗಾಣದಲ್ಲಿ ವಿಷಾಹಾರ ಸೇವನೆಯಿಂದ 27 ಮಕ್ಕಳು ಆಸ್ಪತ್ರೆಗೆ ದಾಖಲು

| Updated By: ಸುಷ್ಮಾ ಚಕ್ರೆ

Updated on: Sep 20, 2022 | 3:55 PM

ಶಾಲೆಯಲ್ಲಿ ಸಿಬ್ಬಂದಿಯ ಕೊರತೆಯಿಂದಾಗಿ ಅಡುಗೆ ಮಾಡುವವರು ಅಡುಗೆ ಮಾಡುವ ಮೊದಲು ಧಾನ್ಯಗಳು ಮತ್ತು ಅಕ್ಕಿ ತೊಳೆದಿರಲಿಲ್ಲ. ಇದರಿಂದ ಈ ದುರಂತ ಘಟನೆ ನಡೆದಿದೆ. ಈ ಘಟನೆಯ ಕುರಿತು ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

Food Poison: ತೆಲಂಗಾಣದಲ್ಲಿ ವಿಷಾಹಾರ ಸೇವನೆಯಿಂದ 27 ಮಕ್ಕಳು ಆಸ್ಪತ್ರೆಗೆ ದಾಖಲು
ಸಾಂದರ್ಭಿಕ ಚಿತ್ರ
Follow us on

ಹೈದರಾಬಾದ್: ತೆಲಂಗಾಣದ (Telangana) ಆದಿಲಾಬಾದ್‌ನಲ್ಲಿ ವಿಷಾಹಾರ (Food Poison) ಸೇವನೆಯಿಂದ 27 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಂತಿಯಿಂದ ಬಳಲುತ್ತಿದ್ದ ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಗ ಅವರು ಸೇವಿಸಿದ್ದ ಆಹಾರ ವಿಷಪೂರಿತವಾಗಿತ್ತು ಎಂದು ತಿಳಿದುಬಂದಿದೆ.

“ಸೋಮವಾರ ರಾತ್ರಿ ಕಾಗಾ ನಗರದ ಅಲ್ಪಸಂಖ್ಯಾತ ಬಾಲಕರ ಹಾಸ್ಟೆಲ್ ಗುರುಕುಲದ 27 ಮಕ್ಕಳಲ್ಲಿ ವಾಂತಿ ಕಾಣಿಸಿಕೊಂಡಿದ್ದರಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಕುರಿತು ವಿವರವಾದ ತನಿಖೆಗೆ ಆದೇಶಿಸಲಾಗಿದೆ” ಎಂದು ಆದಿಲಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಭಾಕರ ರೆಡ್ಡಿ ಹೇಳಿದ್ದಾರೆ.

ಶಾಲೆಯಲ್ಲಿ ಸಿಬ್ಬಂದಿಯ ಕೊರತೆಯಿಂದಾಗಿ ಅಡುಗೆ ಮಾಡುವವರು ಅಡುಗೆ ಮಾಡುವ ಮೊದಲು ಧಾನ್ಯಗಳು ಮತ್ತು ಅಕ್ಕಿ ತೊಳೆದಿರಲಿಲ್ಲ. ಇದರಿಂದ ಈ ದುರಂತ ಘಟನೆ ನಡೆದಿದೆ. ಈ ಘಟನೆಯ ಕುರಿತು ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

ಇದನ್ನೂ ಓದಿ: Food Poison: ವಿಷಾಹಾರ ಸೇವಿಸಿ ಬೆಳಗಾವಿಯಲ್ಲಿ ತಾಯಿ, ಮಗ ಸಾವು

ಉತ್ತರ ಪ್ರದೇಶದ ಮತ್ತೊಂದು ಘಟನೆಯಲ್ಲಿ, ಹರ್ದೋಯಿಯಲ್ಲಿರುವ ಕಸ್ತೂರ್ಬಾ ಗಾಂಧಿ ಅವಾಸಿಯಾ ಬಾಲಿಕಾ ವಿದ್ಯಾಲಯದ 38 ವಿದ್ಯಾರ್ಥಿಗಳು ಭಾನುವಾರ ವೈದ್ಯಕೀಯ ಶಿಬಿರಕ್ಕೆ ಭೇಟಿ ನೀಡಿದ ನಂತರ ವಾಕರಿಕೆ ಮತ್ತು ಹೊಟ್ಟೆ ನೋವಿನಿಂದ ನರಳಾಡಿದ್ದಾರೆ. ಬಾಲಕಿಯರು ಪಿಹಾನಿ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ) ಆರೋಗ್ಯ ಶಿಬಿರಕ್ಕೆ ತೆರಳಿದ್ದರು. ಅವರು ಅಲ್ಲಿಂದ ಹಿಂತಿರುಗಿದ ನಂತರ ಅವರಿಗೆ ವಾಂತಿ ಕಾಣಿಸಿಕೊಂಡಿತ್ತು. ಹೊಟ್ಟೆ ನೋವು ಕೂಡ ಉಂಟಾಗಿತ್ತು. ಅವರಲ್ಲಿ 32 ಮಕ್ಕಳು ಚಿಕಿತ್ಸೆಯ ನಂತರ ಆರೋಗ್ಯವಾಗಿದ್ದಾರೆ. ಅವರನ್ನು ವಾಪಸ್ ಮನೆಗೆ ಕಳುಹಿಸಲಾಗಿದೆ. ಉಳಿದ ಆರು ಮಕ್ಕಳನ್ನು ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: Black Anklet: ಹೆಣ್ಣುಮಕ್ಕಳು ಎಡಗಾಲಿನಲ್ಲಿ ಕಪ್ಪು ದಾರವನ್ನು ಧರಿಸುತ್ತಾರೆ ಏಕೆ? ಜ್ಯೋತಿಷ್ಯ ಏನು ಹೇಳುತ್ತೆ?

ಇಡೀ ಪ್ರಕರಣದ ಬಗ್ಗೆ ನಿಗಾ ವಹಿಸಲಾಗಿದೆ. ಈ ಘಟನೆಯ ಹಿಂದಿನ ನಿಖರವಾದ ಕಾರಣವನ್ನು ತನಿಖೆ ಮಾಡಲಾಗುವುದು ಎಂದು ಎಸ್‌ಡಿಎಂ ಶುಕ್ಲಾ ಹೇಳಿದ್ದಾರೆ. ಇದು ಆಹಾರ ವಿಷದ ಕಾರಣದಿಂದ ಸಂಭವಿಸಿದೆಯೇ ಅಥವಾ ಬೇರೆ ಔಷಧವನ್ನು ಸೇವಿಸುವುದರಿಂದ ಸಂಭವಿಸಿದೆಯೇ ಎಂಬುದನ್ನು ನಾವು ತನಿಖೆ ಮಾಡುತ್ತೇವೆ ಎಂದು ಎಸ್‌ಡಿಎಂ ಶುಕ್ಲಾ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ