ವಿಷಾಹಾರ ಸೇವನೆ ಶಂಕೆ: ಒಂದೇ ಕುಟುಂಬದ ನಾಲ್ವರು ಅಸ್ವಸ್ಥ, ಓರ್ವ ಸಾವು
ಕೊಡಗು: ರಾತ್ರಿ ಊಟ ಸೇವಿಸದ ನಂತರ ಅಸ್ವಸ್ಥರಾಗಿದ್ದ ಒಂದೇ ಕುಟುಂಬದ ಐವರ ಪೈಕಿ ಓರ್ವ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಸೋಮವಾರಪೇಟೆ ತಾಲೂಕಿನ ಕಂಡಕೆರೆ ಗ್ರಾಮದ ಸಂತೋಷ್(30) ಮೃತ ಯುವಕ. ಫೆ.2ರ ಭಾನುವಾರ ರಾತ್ರಿ ಮನೆಯಲ್ಲಿ ಕೋಳಿ ಮಾಂಸದ ಸಾಂಬಾರ್, ಇಡ್ಲಿ ಸೇವಿಸಿದ್ದರು. ನಂತರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ಅಸ್ವಸ್ಥಗೊಂಡಿದ್ದ ಮಣಿ, ಶಶಿಧರ್, ಸಾವಿತ್ರಿ, ವಿನೋದ್, ಸಂತೋಷ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇದರಲ್ಲಿ ಸಾವಿತ್ರಿ ಹೊರತುಪಡಿಸಿ ಉಳಿದವರೆಲ್ಲರೂ ದಿವ್ಯಾಂಗರು. ವಿಷಾಹಾರ ಸೇವನೆಯಿಂದ ಅಸ್ವಸ್ಥರಾಗಿರುವ ಶಂಕೆ ವ್ಯಕ್ತವಾಗಿದೆ. ಉಳಿದ […]
ಕೊಡಗು: ರಾತ್ರಿ ಊಟ ಸೇವಿಸದ ನಂತರ ಅಸ್ವಸ್ಥರಾಗಿದ್ದ ಒಂದೇ ಕುಟುಂಬದ ಐವರ ಪೈಕಿ ಓರ್ವ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಸೋಮವಾರಪೇಟೆ ತಾಲೂಕಿನ ಕಂಡಕೆರೆ ಗ್ರಾಮದ ಸಂತೋಷ್(30) ಮೃತ ಯುವಕ.
ಫೆ.2ರ ಭಾನುವಾರ ರಾತ್ರಿ ಮನೆಯಲ್ಲಿ ಕೋಳಿ ಮಾಂಸದ ಸಾಂಬಾರ್, ಇಡ್ಲಿ ಸೇವಿಸಿದ್ದರು. ನಂತರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ಅಸ್ವಸ್ಥಗೊಂಡಿದ್ದ ಮಣಿ, ಶಶಿಧರ್, ಸಾವಿತ್ರಿ, ವಿನೋದ್, ಸಂತೋಷ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇದರಲ್ಲಿ ಸಾವಿತ್ರಿ ಹೊರತುಪಡಿಸಿ ಉಳಿದವರೆಲ್ಲರೂ ದಿವ್ಯಾಂಗರು. ವಿಷಾಹಾರ ಸೇವನೆಯಿಂದ ಅಸ್ವಸ್ಥರಾಗಿರುವ ಶಂಕೆ ವ್ಯಕ್ತವಾಗಿದೆ. ಉಳಿದ ನಾಲ್ವರು ಅಸ್ವಸ್ಥರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.