Tamil Nadu: ಬ್ಲೂಟೂತ್ ಸಾಧನಗಳನ್ನು ಬಳಸಿ ಪರೀಕ್ಷೆಯಲ್ಲಿ ನಕಲು ಮಾಡಿದ 28 ಸೇನಾ ಆಕಾಂಕ್ಷಿಗಳ ಬಂಧನ

|

Updated on: Oct 10, 2022 | 11:12 AM

ಭಾರತೀಯ ಸೇನೆಗೆ ಸೇರಲು ಪರೀಕ್ಷೆ ಬರೆಯುತ್ತಿದ್ದ ಒಟ್ಟು 28 ಮಂದಿಯನ್ನು ಬ್ಲೂಟೂತ್ ಸಾಧನಗಳನ್ನು ಬಳಸಿ ವಂಚಿಸಲು ಯತ್ನಿಸಿದ ಆರೋಪದಲ್ಲಿ ಬಂಧಿಸಲಾಗಿದೆ.

Tamil Nadu: ಬ್ಲೂಟೂತ್ ಸಾಧನಗಳನ್ನು ಬಳಸಿ ಪರೀಕ್ಷೆಯಲ್ಲಿ ನಕಲು ಮಾಡಿದ 28 ಸೇನಾ ಆಕಾಂಕ್ಷಿಗಳ ಬಂಧನ
Follow us on

ಚೆನ್ನೈ: ಭಾರತೀಯ ಸೇನೆಗೆ ಸೇರಲು ಪರೀಕ್ಷೆ ಬರೆಯುತ್ತಿದ್ದ ಒಟ್ಟು 28 ಮಂದಿಯನ್ನು ಬ್ಲೂಟೂತ್ ಸಾಧನಗಳನ್ನು ಬಳಸಿ ವಂಚಿಸಲು ಯತ್ನಿಸಿದ ಆರೋಪದಲ್ಲಿ ಬಂಧಿಸಲಾಗಿದೆ. ಚೆನ್ನೈನ ನಂದಂಬಾಕ್ಕಂ ಪ್ರದೇಶದಲ್ಲಿ ಭಾನುವಾರ ಈ ಘಟನೆ ನಡೆದಿದೆ.

ನಂದಂಬಾಕ್ಕಂನ ಶಾಲೆಯೊಂದರಲ್ಲಿ ಸುಮಾರು ಸಾವಿರಾರೂ ಅಭ್ಯರ್ಥಿಗಳು ಗ್ರೂಪ್ ಸಿ ಆರ್ಮಿ ಸಿವಿಲಿಯನ್ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಯ ಮೇಲ್ವಿಚಾರಕರು ಕೆಲವು ಪುರುಷರ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಪರೀಕ್ಷೆಯಲ್ಲಿ ನಕಲು ಮಾಡಲು ಬ್ಲೂಟೂತ್ ತಂತ್ರಜ್ಞಾನವನ್ನು ಬಳಸುತ್ತಿರುವುದನ್ನು ಕಂಡು ಅಧಿಕಾರಿಗಳು ಬೆಚ್ಚಿಬಿದ್ದರು.

ವಂಚನೆ ಮಾಡುತ್ತಿದ್ದ 28 ಮಂದಿಯನ್ನು ಬಂಧಿಸಿ ನಂದಂಬಾಕ್ಕಂ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಅವರು ತನಿಖೆ ಆರಂಭಿಸಿದ್ದಾರೆ. ಪ್ರಕರಣ ದಾಖಲಾಗಿರುವುದರಿಂದ 28 ಮಂದಿ ಸೇನೆಯಲ್ಲಿ ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವುದನ್ನು ನಿರ್ಬಂಧಿಸಲಾಗಿದೆ. ಇದೀಗ ಹೆಚ್ಚಿನ ತನಿಖೆಯನ್ನು ನಡೆಸಲಾಗುವತ್ತಿದೆ.

Published On - 11:11 am, Mon, 10 October 22