ಬಜೆಟ್​ ಅಧಿವೇಶನ ಶುರುವಾಗ್ತಿದ್ದಂತೆ 3 ಬಿಜೆಪಿ ಶಾಸಕರು ಅಮಾನತು: ಪ್ರತಿಭಟಿಸಿ ಹೊರನಡೆದ ಕಾಂಗ್ರೆಸ್ ಶಾಸಕರು !

| Updated By: Lakshmi Hegde

Updated on: Mar 07, 2022 | 4:47 PM

ಈ ಬಾರಿ ಬಜೆಟ್​ ಅಧಿವೇಶನದ ಪ್ರಾರಂಭದಲ್ಲಿ ರಾಜ್ಯಪಾಲರ ಭಾಷಣ ಅವಶ್ಯಕತೆ ಇಲ್ಲ ಎಂದು ಹಿಂದೆಯೇ ಟಿಆರ್​ಎಸ್​ ಹೇಳಿದೆ. ಇದನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ವಿರೋಧಿಸುತ್ತಿವೆ.

ಬಜೆಟ್​ ಅಧಿವೇಶನ ಶುರುವಾಗ್ತಿದ್ದಂತೆ 3 ಬಿಜೆಪಿ ಶಾಸಕರು ಅಮಾನತು: ಪ್ರತಿಭಟಿಸಿ ಹೊರನಡೆದ ಕಾಂಗ್ರೆಸ್ ಶಾಸಕರು !
ಅಮಾನತುಗೊಂಡ ಬಿಜೆಪಿ ಶಾಸಕರು
Follow us on

ತೆಲಂಗಾಣ ಬಿಜೆಪಿ ಶಾಸಕರಾದ (BJP MLAs) ಟಿ.ರಾಜಾ ಸಿಂಗ್​, ಎಂ.ರಘುನಂದನ್​ ರಾವ್​ ಮತ್ತು ಎಟೆಲಾ ರಾಜೇಂದರ್​ ಅವರನ್ನು ತೆಲಂಗಾಣ ವಿಧಾನಸಭೆಯಿಂದ ಇಂದು ಅಮಾನತು ಮಾಡಲಾಗಿದೆ. ತಮ್ಮ ಅಮಾನತನ್ನು ವಿರೋಧಿಸಿ ಈ ಮೂರು ಶಾಸಕರು ವಿಧಾನಸಭೆಯ ಹೊರಗೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ.  ಬಿಜೆಪಿ ಶಾಸಕರನ್ನು ಅಮಾನತು ಮಾಡುವ  ಪ್ರಸ್ತಾವನೆಯನ್ನು ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪಕ್ಷದ ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಮಂಡಿಸಿದ್ದರು.

ತೆಲಂಗಾಣ ವಿಧಾನಸಭೆಯಲ್ಲಿ ಇಂದಿನಿಂದ ಬಜೆಟ್​ ಅಧಿವೇಶನ ಪ್ರಾರಂಭವಾಗಿದೆ. ಇಂದು ಮುಂಜಾನೆ ಅಧಿವೇಶನ ಪ್ರಾರಂಭವಾದ ಕೆಲವೇ ಹೊತ್ತಲ್ಲಿ, ಈ ಮೂವರೂ ಬಿಜೆಪಿ ಶಾಸಕರನ್ನು ಅಮಾನತು ಮಾಡುವ ಪ್ರಸ್ತಾಪವನ್ನು ಸಚಿವ ತಲಸಾನಿ ಶ್ರೀನಿವಾಸ್​ ಯಾದವ್ ಮಂಡಿಸಿದರು. ಅದರಂತೆ ಬಜೆಟ್ ಅಧಿವೇಶನ ಮುಗಿಯುವವರೆಗೂ ಇವರು ಅಮಾನತಿನಲ್ಲಿಯೇ ಇರುತ್ತಾರೆ. ಬಜೆಟ್​ ಅಧಿವೇಶನದ ಪ್ರಾರಂಭದಲ್ಲಿ ರಾಜ್ಯಪಾಲರ ಭಾಷಣ ನಿಗದಿ ಪಡಿಸಿಲ್ಲ ಎಂಬ ಕಾರಣಕ್ಕೆ, ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಈ ಮೂವರೂ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸುವ ಯೋಜನೆ ಹಾಕಿಕೊಂಡಿದ್ದರು. ಪ್ರತಿಭಟನೆ ಮೂಲಕ ಅಧಿವೇಶನ ಹಾಳು ಮಾಡುತ್ತಾರೆ ಎಂಬ ಕಾರಣಕ್ಕೆ ಅವರನ್ನು ಅಮಾನತು ಮಾಡಲಾಗಿದೆ.

ಹೊರನಡೆದ ಕಾಂಗ್ರೆಸ್ ಶಾಸಕರು

ಈ ಬಜೆಟ್ ಅಧಿವೇಶನದ ವೇಳೆ ಕಾಂಗ್ರೆಸ್ ಶಾಸಕರೂ ಕೂಡ ಹೊರನಡೆದಿದ್ದಾರೆ. ವಿಧಾನಸಭೆ ಸ್ಪೀಕರ್​ ಪೋಚಾರಂ ಶ್ರೀನಿವಾಸ್ ಅವರು ಏಕಪಕ್ಷೀಯವಾಗಿ ಸದನ ನಡೆಸುತ್ತಿದ್ದಾರೆ. ಎಲ್ಲ ನಿಯಮಗಳನ್ನೂ ಉಲ್ಲಂಘಿಸುತ್ತಿದ್ದಾರೆ. ಪ್ರತಿಪಕ್ಷಗಳಿಗೆ ಮಾತನಾಡಲು ಅವಕಾಶವನ್ನೇ ಕೊಡುತ್ತಿಲ್ಲ. ಹೀಗಾಗಿ ನಾವು ಸದನದಿಂದ ಹೊರನಡೆಯುತ್ತೇವೆ ಎಂದು ಹೇಳಿದ್ದಾರೆ.

ಈ ಬಾರಿ ಬಜೆಟ್​ ಅಧಿವೇಶನದ ಪ್ರಾರಂಭದಲ್ಲಿ ರಾಜ್ಯಪಾಲರ ಭಾಷಣ ಅವಶ್ಯಕತೆ ಇಲ್ಲ ಎಂದು ಹಿಂದೆಯೇ ಟಿಆರ್​ಎಸ್​ ಹೇಳಿದೆ.  ಬಜೆಟ್​ ಅಧಿವೇಶನವೆಂದು ಹೊಸದಾಗಿ ಶುರು ಮಾಡುತ್ತಿಲ್ಲ. ಅದಕ್ಕೂ ಪೂರ್ವ ನಡೆಯುತ್ತಿದ್ದ ಅಧಿವೇಶನವನ್ನೇ ಮುಂದುವರಿಸಲಾಗಿದೆ. ಹಾಗಾಗಿ ರಾಜ್ಯಪಾಲರ ಭಾಷಣ ಬೇಡ ಎಂಬ ಸ್ಪಷ್ಟನೆ ನೀಡಿತ್ತು. ಆದರೆ ಟಿಆರ್​ಎಸ್​ನ ಈ ನಿರ್ಧಾರವನ್ನು ಬಿಜೆಪಿ-ಕಾಂಗ್ರೆಸ್​ಗಳು ಖಂಡಿಸಿವೆ. ಇದು ರಾಜ್ಯಪಾಲರಿಗೆ ಅಗೌರವ ನೀಡಿದಂತೆ ಎಂದು ಹೇಳಿವೆ.

ಇದನ್ನೂ ಓದಿ: ‘ವೇದ’ ಸಿನಿಮಾ ಮಾಡುವಾಗ ನನ್ನಲ್ಲಿ ಅಪ್ಪುನ ಹುಡಕೋ ಪ್ರಯತ್ನ ಮಾಡಿದ್ದೇನೆ; ಶಿವರಾಜ್​ಕುಮಾರ್