ಪಶ್ಚಿಮ ಬಂಗಾಳ ಬಿಜೆಪಿ ಸಂಸದನ ಮನೆ ಹೊರಗೆ ಮೂರು ಬಾಂಬ್​ ಸ್ಫೋಟ; ಟಿಎಂಸಿ ಮೇಲೆ ಆರೋಪ

| Updated By: Lakshmi Hegde

Updated on: Sep 08, 2021 | 11:04 AM

ಈ ವರ್ಷದ ಏಪ್ರಿಲ್​​ ತಿಂಗಳಲ್ಲಿ, ಅರ್ಜುನ್​ ಸಿಂಗ್​ ತಮ್ಮ ಮೇಲೆ ಗುಂಪೊಂದು ದಾಳಿ ಮಾಡಿದೆ ಎಂದು ಆರೋಪ ಮಾಡಿದ್ದರು. ಉತ್ತರ ಕೋಲ್ಕತ್ತದ ಬೆಲ್ಗಾಚಿಯಾದಲ್ಲಿ ನನ್ನ ಮೇಲೆ ಗುಂಡಿನ ದಾಳಿ ಮಾಡಲು ಪ್ರಯತ್ನ ನಡೆದಿತ್ತು.

ಪಶ್ಚಿಮ ಬಂಗಾಳ ಬಿಜೆಪಿ ಸಂಸದನ ಮನೆ ಹೊರಗೆ ಮೂರು ಬಾಂಬ್​ ಸ್ಫೋಟ; ಟಿಎಂಸಿ ಮೇಲೆ ಆರೋಪ
ಬಿಜೆಪಿ ಸಂಸದ ಅರ್ಜುನ್ ಸಿಂಗ್​
Follow us on

ಕೋಲ್ಕತ್ತ: ಪಶ್ಚಿಮ ಬಂಗಾಳ (West Bengal) ಬಿಜೆಪಿ ಸಂಸದ ಅರ್ಜುನ್​ ಸಿಂಗ್​​ (BJP MP Arjun Singh)ಅವರ ಕೋಲ್ಕತ್ತದಲ್ಲಿರುವ ಮನೆಯ ಬಳಿ ಇಂದು ಮುಂಜಾನೆ ಮೂರು ಬಾಂಬ್​ಗಳನ್ನು ಎಸೆಯಲಾಗಿದೆ. ಈ ಬಗ್ಗೆ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್​ ಧನಕರ್​ ಟ್ವೀಟ್ ಮಾಡಿದ್ದಾರೆ. ಬಿಜೆಪಿ ಎಂಪಿ ಅರ್ಜುನ್​ ಸಿಂಗ್​ ಮನೆ ಬಳಿ ನಡೆದ ಬಾಂಬ್​ ದಾಳಿ ತುಂಬ ಆತಂಕ ಹುಟ್ಟಿಸಿದೆ. ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಿಲ್ಲುವಂತೆ ಕಾಣುತ್ತಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯೇ ಅಪಾಯದಲ್ಲಿದೆ ಎನ್ನಿಸುತ್ತಿದೆ ಎಂದು ಹೇಳಿದ್ದಾರೆ. ಈ ಬಾಂಬ್​ ದಾಳಿಗೆ ತೃಣಮೂಲ ಕಾಂಗ್ರೆಸ್​ ಪಕ್ಷವೇ ಕಾರಣವೆಂದು ಬಿಜೆಪಿ ಆರೋಪ ಮಾಡಿದೆ.

ಈ ಮಧ್ಯೆ ಟಿಎಂಸಿ ತಮಗೂ, ಬಾಂಬ್​ ದಾಳಿಗೂ ಸಂಬಂಧವಿಲ್ಲ ಎಂದು ಹೇಳಿದೆ. ಬಿಜೆಪಿಯಲ್ಲಿ ಆಂತರಿಕ ಕಚ್ಚಾಟವಿದೆ. ಅವರೇ ಯಾರೋ ಸಂಸದನ ಮನೆಯನ್ನು ಗುರಿಯಾಗಿಸಿಕೊಂಡು ಬಾಂಬ್​ ದಾಳಿ ನಡೆಸಿದ್ದಾರೆ ಎಂದು ಹೇಳಿದೆ. ಪೊಲೀಸರು ತನಿಖೆ ಶುರು ಮಾಡಿದ್ದು, ಸಿಸಿಟಿವಿ ಫೂಟೇಜ್​ಗಳನ್ನೂ ಸ್ಕ್ಯಾನ್ ಮಾಡುತ್ತಿದ್ದಾರೆ. ಅರ್ಜುನ್​ ಸಿಂಗ್​ ಮನೆಯೆದುರು ಭದ್ರತೆಯನ್ನು ಹೆಚ್ಚಿಸಲಾಗಿದೆ. ಹಾಗೇ, ದಾಳಿಯ ಹಿಂದೆ ಯಾರ ಕೈವಾಡವಿದೆ ಎಂದು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.

ಈ ವರ್ಷದ ಏಪ್ರಿಲ್​​ ತಿಂಗಳಲ್ಲಿ, ಅರ್ಜುನ್​ ಸಿಂಗ್​ ತಮ್ಮ ಮೇಲೆ ಗುಂಪೊಂದು ದಾಳಿ ಮಾಡಿದೆ ಎಂದು ಆರೋಪ ಮಾಡಿದ್ದರು. ಉತ್ತರ ಕೋಲ್ಕತ್ತದ ಬೆಲ್ಗಾಚಿಯಾದಲ್ಲಿ ನನ್ನ ಮೇಲೆ ಗುಂಡಿನ ದಾಳಿ ಮಾಡಲು ಪ್ರಯತ್ನ ನಡೆದಿತ್ತು. ನನ್ನ ರಕ್ಷಣಾ ಸಿಬ್ಬಂದಿ ಕಾಪಾಡಿದರು ಎಂದು ಆಗ ಹೇಳಿದ್ದರು. ಅರ್ಜುನ್​ ಸಿಂಗ್​ ಮೊದಲು ತೃಣಮೂಲ ಕಾಂಗ್ರೆಸ್ ಶಾಸಕರೇ ಆಗಿದ್ದರು. 2019ರ ಲೋಕಸಭಾ ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ಸೇರಿ, ಬಾರಕ್​ಪುರ ಕ್ಷೇತ್ರದಲ್ಲಿ ಗೆದ್ದು ಸಂಸದರಾಗಿದ್ದಾರೆ.

ಇದನ್ನೂ ಓದಿ: ಆ್ಯಂಕರ್ ಅನುಶ್ರೀ ಡ್ರಗ್ಸ್ ಕೇಸ್ ವಿಚಾರ; ಪ್ರಕರಣದಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದ ಗೃಹ ಸಚಿವ

ಇಲ್ಲಿ ಕೇವಲ ನಾಲ್ಕು ಗಂಟೆಗಳ ಅವಧಿಯಲ್ಲಿ ಜಾತ್ರೆ ಮುಗಿಯುತ್ತೆ, ಚರ್ಮ ಸಮಸ್ಯೆ ಇರುವವರು ದರ್ಶನ ಮಾಡದೆ ಹೋಗಲ್ಲ

Published On - 11:04 am, Wed, 8 September 21