ಜಾರ್ಖಂಡ್​ನಲ್ಲಿ ಕಲ್ಲಿದ್ದಲು ಗಣಿ ಬಳಿ ಸ್ಪೋಟ, ಭಾರಿ ಭೂಕುಸಿತ, ಶೌಚಕ್ಕೆಂದು ತೆರಳಿದ್ದ 3 ಮಹಿಳೆಯರು ಜೀವಂತ ಸಮಾಧಿ

|

Updated on: Sep 18, 2023 | 12:50 PM

ಜಾರ್ಖಂಡ್​ನಲ್ಲಿ ಭಾರಿ ಭೂಕುಸಿತ ಸಂಭವಿಸಿದೆ, ಶೌಚಕ್ಕೆಂದು ಬಯಲಿಗೆ ಹೋಗಿದ್ದ ಮೂವರು ಮಹಿಳೆಯರು ಜೀವಂತ ಸಮಾಧಿಯಾಗಿದ್ದಾರೆ. ರಕ್ಷಣಾ ತಂಡ ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿದೆ. ಮಹಿಳೆಯರು ಛೋಟ್ಕಿಬೌವಾ ಗ್ರಾಮದ ನಿವಾಸಿಗಳಾಗಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾಡಳಿತ ಮತ್ತು ಸಿಐಎಸ್‌ಎಫ್ ತಂಡ ಆಗಮಿಸಿದೆ. ಈ ಮಹಿಳೆಯರನ್ನು ಪರ್ಲಾ ದೇವಿ, ತಾಂಡಿ ದೇವಿ ಮತ್ತು ಮಾಂಡ್ವಾ ದೇವಿ ಎಂದು ಗುರುತಿಸಲಾಗಿದೆ.

ಜಾರ್ಖಂಡ್​ನಲ್ಲಿ ಕಲ್ಲಿದ್ದಲು ಗಣಿ ಬಳಿ ಸ್ಪೋಟ, ಭಾರಿ ಭೂಕುಸಿತ, ಶೌಚಕ್ಕೆಂದು ತೆರಳಿದ್ದ 3 ಮಹಿಳೆಯರು ಜೀವಂತ ಸಮಾಧಿ
ಜಾರ್ಖಂಡ್
Follow us on

ಜಾರ್ಖಂಡ್​ನಲ್ಲಿ ಭಾರಿ ಭೂಕುಸಿತ ಸಂಭವಿಸಿದೆ, ಶೌಚಕ್ಕೆಂದು ಬಯಲಿಗೆ ಹೋಗಿದ್ದ ಮೂವರು ಮಹಿಳೆಯರು ಜೀವಂತ ಸಮಾಧಿಯಾಗಿದ್ದಾರೆ. ರಕ್ಷಣಾ ತಂಡ ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿದೆ. ಮಹಿಳೆಯರು ಛೋಟ್ಕಿಬೌವಾ ಗ್ರಾಮದ ನಿವಾಸಿಗಳಾಗಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾಡಳಿತ ಮತ್ತು ಸಿಐಎಸ್‌ಎಫ್ ತಂಡ ಆಗಮಿಸಿದೆ. ಈ ಮಹಿಳೆಯರನ್ನು ಪರ್ಲಾ ದೇವಿ, ತಾಂಡಿ ದೇವಿ ಮತ್ತು ಮಾಂಡ್ವಾ ದೇವಿ ಎಂದು ಗುರುತಿಸಲಾಗಿದೆ.

ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದಾರೆ. ಪೊಲೀಸರು ಹಾಗೂ ಸಿಐಎಸ್‌ಎಫ್ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಕಲ್ಲಿದ್ದಲು ತೆಗೆಯುವಾಗ ಈ ಅವಘಡ ಸಂಭವಿಸಿದೆ, ಅಪಘಾತದಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಮಧ್ಯಾಹ್ನ ಮೂವರು ಮಹಿಳೆಯರು ಮಲವಿಸರ್ಜನೆ ಮಾಡಲು ಗಣಿ ಕಡೆಗೆ ಹೋಗಿದ್ದರು.

40 ವರ್ಷದ ಧಂಡಿಯಾ ದೇವಿ ಭೂಕುಸಿತದಲ್ಲಿ ಸಿಲುಕಿಕೊಂಡರು, ಅವರನ್ನು ರಕ್ಷಿಸಲು ತೆರಳಿದ ಇನ್ನಿಬ್ಬರೂ ಕೂಡ ಮೃತಪಟ್ಟಿದ್ದಾರೆ.

ಮತ್ತಷ್ಟು ಓದಿ: ಚಿನ್ನದಂತಹ ಬದುಕು ನಡೆಸಬೇಕಿದ್ದ ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಜೀವನ ಮೂರಾಬಟ್ಟೆಯಾಗಿದೆ! ಲಾಭವೇ ತಂದುಕೊಟ್ಟರೂ ಸರ್ಕಾರದ ನಿರ್ಲಕ್ಷ್ಯ

ಕುಟುಂಬಸ್ಥರಿಗೆ ವಿಷಯ ತಿಳಿಯುವಷ್ಟರಲ್ಲಿ ಮೂವರೂ ಒಳಗೆ ಸಿಲುಕಿಕೊಂಡಿದ್ದರು. ಕೂಡಲೇ ಗ್ರಾಮಸ್ಥರು ಬಿಸಿಸಿಎಲ್ ಆಡಳಿತ ಮಂಡಳಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ