AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನದಂತಹ ಬದುಕು ನಡೆಸಬೇಕಿದ್ದ ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಜೀವನ ಮೂರಾಬಟ್ಟೆಯಾಗಿದೆ! ಲಾಭವೇ ತಂದುಕೊಟ್ಟರೂ ಸರ್ಕಾರದ ನಿರ್ಲಕ್ಷ್ಯ

ಇಲ್ಲಿ ಕಾರ್ಮಿಕರ ಭತ್ಯೆ, ಮೆಡಿಕಲ್ ಭತ್ಯೆ, ಕಾರ್ಮಿಕರ ಮಕ್ಕಳಿಗೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳಿವೆ. ಈಗಲಾದ್ರೂ ಸರ್ಕಾರವಾಗಲಿ ಇಲ್ಲವೇ ಸಂಬಂಧಪಟ್ಟ ಅಧಿಕಾರಿಗಳಾಗಲಿ ಸರ್ಕಾರಕ್ಕೆ ಕೋಟಿ ಕೋಟಿ ಆದಾಯ ತಂದು ಕೊಡುವ ಈ ಕಾರ್ಮಿಕರ ಶ್ರಮಕ್ಕೆ ತಕ್ಕಂತೆ, ಅವರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕಿದೆ.

ಚಿನ್ನದಂತಹ ಬದುಕು ನಡೆಸಬೇಕಿದ್ದ ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಜೀವನ ಮೂರಾಬಟ್ಟೆಯಾಗಿದೆ! ಲಾಭವೇ ತಂದುಕೊಟ್ಟರೂ ಸರ್ಕಾರದ ನಿರ್ಲಕ್ಷ್ಯ
ಹಟ್ಟಿ ಚಿನ್ನದ ಗಣಿ: ಸರ್ಕಾರಕ್ಕೆ ನೂರಾರು ಕೋಟಿ ಲಾಭ ತಂದುಕೊಡುವ ಕಾರ್ಮಿಕರ ಮನೆ ಸ್ಥಿತಿ ಆ ದೇವರಿಗೇ ಪ್ರೀತಿ!
TV9 Web
| Updated By: ಸಾಧು ಶ್ರೀನಾಥ್​|

Updated on: Dec 09, 2022 | 1:33 PM

Share

ಅದು ಗಟ್ಟಿ ಚಿನ್ನವನ್ನ ತೆಗೆಯುವ ಸಂಸ್ಥೆ.. ಕೊರೊನಾ ಮಾರಿಯೇ ಬರಲೀ, ಅದಕ್ಕಿಂದ ದೊಡ್ಡ ಮಹಾಮಾರಿಯೇ ಬಂದರೂ ಅಲ್ಲಿ ಒಂದು ನಯಾ ಪೈಸೆಯೂ ನಷ್ಟ ಆಗೋದೇ ಇಲ್ಲ.. ಸರ್ಕಾರಕ್ಕೆ ಸಾವಿರಾರು ಕೋಟಿ ಲಾಭ ತಂದು ಕೊಡುವ ಆ ಸಂಸ್ಥೆಯ ಕಾರ್ಮಿಕರ (Labourers) ಸ್ಥಿತಿ ನೋಡಿದ್ರೆ ನೀವೇ ಶಾಕ್ ಆಗ್ತಿರಾ..

ಸರ್ಕಾರಕ್ಕೆ ನೂರಾರು ಕೋಟಿ ಲಾಭ ತಂದುಕೊಡುವ ಕಾರ್ಮಿಕರಿಗಿಲ್ಲ ಸುವ್ಯವಸ್ಥೆ..!

ಹೌದು..ಹಟ್ಟಿ ಚಿನ್ನದ ಗಣಿ ಅಂದ್ರೆ ಅದು ಈಗಲೂ ಆಕ್ಟಿವ್​ನಲ್ಲಿರೊ ಚಿನ್ನ ಉತ್ಪಾದನಾ ಕೇಂದ್ರ.. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನಲ್ಲಿರೋ (Lingasugur in Raichur) ಹಟ್ಟಿ ಚಿನ್ನದ ಗಣಿಯಲ್ಲಿ ಈಗಲೂ ಚಿನ್ನ ಉತ್ಪಾದನೆ ಮಾಡಲಾಗುತ್ತೆ.. ಸರ್ಕಾರದ ಖಜಾನೆಯನ್ನ ತುಂಬಿಸೋದ್ರಲ್ಲಿ ಹಟ್ಟಿ ಚಿನ್ನದ ಗಣಿ (Hatti mines) ತನ್ನದೇ ಆದ ಖ್ಯಾತಿ ಪಡೆದಿದೆ.. ಕೊರೊನಾ ಬಂದ ವೇಳೆ ಯಾವ ಯಾವ ಕಂಪನಿಗಳು ಬೀದಿಗೆ ಬಂದವು.. ಅದೆಷ್ಟೋ ಕಂಪನಿಗಳು ನಷ್ಟಕ್ಕೊಳಗಾಗಿ ಈಗಲೂ ಪರಿತಪಿಸುತ್ತಿವೆ..

ಕೊರೊನಾ ಕಾಲದಲ್ಲಿ ಲಾಭ ಕಂಡವರಿಗಿಂತ ಲಾಸ್ ಆಗಿರೋರೇ ಹೆಚ್ಚು.. ಅಂಥ ವೇಳೆಯಲ್ಲೂ ಇದೇ ಹಟ್ಟಿ ಚಿನ್ನದ ಗಣಿ ಕೇಜಿಗಟ್ಟಲೇ ಚಿನ್ನವನ್ನ ಉತ್ಪಾದಿಸಿದೆ. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ಕೊಡುಗೆ ನೀಡಿದೆ. ಆದ್ರೆ ಅದೇ ಹಟ್ಟಿ ಚಿನ್ನದ ಗಣಿಯಲ್ಲಿ ಕೆಲಸ ಮಾಡೋ ಕಾರ್ಮಿಕರ ಸ್ಥಿತಿ ಯಾರಿಗೂ ಬೇಡ.. ಚಿನ್ನ ಉತ್ಪಾದಿಸೋ ಕಾರ್ಮಿಕರ ಬಾಳೇ ಕತ್ತಲಲ್ಲಿದೆ.. ಇಲ್ಲಿ ಕೆಲಸ ಮಾಡೋ ಕಾರ್ಮಿಕರ ಸಮಸ್ಯೆ, ಅಳಲು ಒಂದ ಎರಡಾ… ಎಂದು ವಿಷಾದದ ದನಿಯಲ್ಲಿ ಹೇಳುತ್ತಾರೆ ಕಾರ್ಮಿಕ ಕಂಠಿ ಬಸವ.

ಇದು ಅಕ್ಷರಶಃ ನಿಜ.. ಹಟ್ಟಿ ಚಿನ್ನದ ಗಣಿಯಲ್ಲಿ ಸುಮಾರು 4,000 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ.. ಆ ಪೈಕಿ ಬಹುತೇಕ ಕಾರ್ಮಿಕರು ಹಟ್ಟಿ ಕಂಪನಿಯ 1,000 ಕ್ಕೂ ಹೆಚ್ಚು ಮನೆಗಳಲ್ಲಿ ವಾಸಿಸುತ್ತಿದ್ದಾರೆ.. ಆದ್ರೆ ಆ ಮನೆಗಳ ಸ್ಥಿತಿ ಶೋಚನೀಯವಾಗಿದೆ.. ಮಳೆ‌ ಬಂದ್ರೆ ಸಾಕು ಹಟ್ಟಿ ಕಂಪನಿಯ ಬಹುತೇಕ ಮನೆಗಳು ಸೋರುತ್ತವೆ..

Staff at Hatti mines at Lingasugur in Raichur are in dire straits without houses

ಶೀಟ್ ಮನೆಗಳಾಗಿರೋ ಹಿನ್ನೆಲೆ ಬಹುತೇಕ ಮನೆಗಳ ಶೀಟ್ ಒಡೆದು ಹೋಗಿವೆ, ಅವುಗಳ ದುರಸ್ಥಿ ಕಾರ್ಯವೂ ಆಗಿಲ್ಲ.. ಇನ್ನು ಕೆಲ ಮನೆಗಳ ಗೋಡೆ ಬಿರುಕು ಬಿಟ್ಟಿವೆ.. ಮೇಲ್ಛಾವಣಿ ಒಡೆದು ಹೋಗಿವೆ.. ಮಳೆಗಾಲದಲ್ಲಿ ದಿನನಿತ್ಯ ಕುಟುಂಬಸ್ಥರೆಲ್ಲಾ ಸೋರುವ ಮನೆಯಲ್ಲೇ ವಾಸ ಮಾಡೋ ಅನಿವಾರ್ಯತೆ ಇದೆ..

ದುರಸ್ಥಿ ಕಾರ್ಯ ಮಾಡಿಸಿ ಅಂತ ಅಧಿಕಾರಿಗಳಿಗೆ ದೂರು ನೀಡಿದ್ರೆ, ಯಾರೂ ಕ್ಯಾರೆ ಎನ್ನಲ್ಲ.. ಈಗ ಮಾಡೋಣ, ಆಗ ಮಾಡೋಣ ಅಂತಾರೆ.. ಮಳೆಗಾಲದಲ್ಲಿ ಕೇಳಿದರೆ ಮಳೆಗಾಲ ಹೋಗ್ಲಿ ಅಂದ್ರು.. ಆದ್ರೀಗ ತಮ್ಮತ್ತ ತಿರುಗಿಯೂ ನೋಡ್ತಿಲ್ಲ ಅಂತ ಕಾರ್ಮಿಕರ ಕುಟುಂಬಸ್ಥರು ಅಳಲನ್ನ ತೋಡಿಕೊಂಡಿದ್ದಾರೆ. ಈ ಬಗ್ಗೆ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಹಾಗೂ ಮಾಜಿ ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ವಿರುದ್ಧ ಹಿರಿಯ ಕಾಂಗ್ರೆಸ್ ಮುಖಂಡ ಆಲ್ಕೋಡ್ ಹನುಮಂತಪ್ಪ ಕಿಡಿಕಾರಿದ್ದಾರೆ. ಕೂಡಲೇ ಕಾರ್ಮಿಕರ ಸಮಸ್ಯೆ ಆಲಿಸಿ ಅಂತ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಭಟ್ಕಳ: ಕಸದ ಬುಟ್ಟಿ ಬಕೆಟ್ ಖರೀದಿಯಲ್ಲೂ ಗೋಲ್​ಮಾಲ್​! ನೂರಿನ್ನೂರು ರೂ ಬಕೆಟ್ 950ಕ್ಕೆ ಖರೀದಿ ಮಾಡಿದ ಗ್ರಾಮ ಪಂಚಾಯತ್

ಇದಷ್ಟೇ ಅಲ್ಲ, ಇಲ್ಲಿ ಕಾರ್ಮಿಕರ ಭತ್ಯೆ, ಮೆಡಿಕಲ್ ಭತ್ಯೆ, ಕಾರ್ಮಿಕರ ಮಕ್ಕಳಿಗೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳಿವೆ. ಈಗಲಾದ್ರೂ ಸರ್ಕಾರವಾಗಲಿ ಇಲ್ಲವೇ ಸಂಬಂಧಪಟ್ಟ ಅಧಿಕಾರಿಗಳಾಗಲಿ ಸರ್ಕಾರಕ್ಕೆ ಕೋಟಿ ಕೋಟಿ ಆದಾಯ ತಂದು ಕೊಡುವ ಈ ಕಾರ್ಮಿಕರ ಶ್ರಮಕ್ಕೆ ತಕ್ಕಂತೆ, ಅವರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕಿದೆ. (ವರದಿ: ಭೀಮೇಶ್ ಪೂಜಾರ್, ಟಿವಿ 9, ರಾಯಚೂರು)

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?