ಮತ್ತೆ ಮೂರು ರಫೇಲ್ ಯುದ್ಧವಿಮಾನ (Rafale Jets)ಗಳು ಬುಧವಾರ ಭಾರತ ಸೇನೆಯನ್ನು ಸೇರ್ಪಡೆಗೊಂಡಿವೆ. ಫ್ರಾನ್ಸ್ನಿಂದ ಹೊರಟಿದ್ದ ಈ ಜೆಟ್ಗಳು ಮಧ್ಯೆ ಎಲ್ಲಿಯೂ ನಿಲುಗಡೆ ಪಡೆಯದೆ, ನೇರವಾಗಿ ಭಾರತೀಯ ವಾಯುಸೇನೆ (Indian Air Force) ತಲುಪಿವೆ. ಇನ್ನು ರಫೇಲ್ ಜೆಟ್ಗಳಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನ ವಾಯುಪಡೆ ಮಾರ್ಗಮಧ್ಯೆ, ಹಾರಾಟದ ಸ್ಥಿತಿಯಲ್ಲಿ ಇದ್ದಾಗಲೇ ಇಂಧನ ತುಂಬಿದೆ ಎಂದು ಭಾರತೀಯ ವಾಯು ಪಡೆ ಟ್ವೀಟ್ ಮಾಡಿ ತಿಳಿಸಿದೆ. ಹಾಗೇ, ಮಾರ್ಗ ಮಧ್ಯೆ ಇಂಧನ ತುಂಬಿಕೊಟ್ಟ UAE ವಾಯುಪಡೆಗೆ ಧನ್ಯವಾದವನ್ನೂ ಹೇಳಿದೆ.
ಇದೀಗ ಭಾರತವನ್ನು ತಲುಪಿರುವ ಮೂರು ರಫೇಲ್ ಯುದ್ಧವಿಮಾನಗಳು, ವಾಯುಪಡೆಯ ಎರಡನೇ ಸ್ಕ್ವಾಡ್ರನ್ ಸೇರಿಕೊಳ್ಳಲಿವೆ. ಈ ಎರಡನೇ ಸ್ಕ್ವಾಡ್ರನ್ಗಳು ಪಶ್ಚಿಮ ಬಂಗಾಳದ ಹಶಿಮಾರಾ ವಾಯುನೆಲೆಯಲ್ಲಿ ಜುಲೈ ತಿಂಗಳ ಅಂತ್ಯದಿಂದ ಕಾರ್ಯಾಚರಣೆ ನಡೆಸಲಿವೆ.
ಹಾಗೇ, ಮೊದಲನೇ ರಫೇಲ್ ಸ್ಕ್ವಾಡ್ರನ್ ಈಗಾಗಲೇ ಅಂಬಾಲಾದ ವಾಯುನೆಲೆಯಲ್ಲಿ ಕಾರ್ಯಾಚರಣೆ ಶುರು ಮಾಡಿದೆ. ಪೂರ್ವ ಲಡಾಖ್ನ ಚೀನಾ ಗಡಿಗಳಲ್ಲಿ ಮತ್ತು ಇತರ ಪ್ರದೇಶಗಳಲ್ಲಿ ಗಸ್ತು ತಿರುಗಲು ಶುರು ಮಾಡಿವೆ. ಹಶಿಮಾರಾ ವಾಯುನೆಲೆಯಿಂದ ಹಲವು ಚೀನಾ ವಾಯುನೆಲೆಗಳು ಸಮೀಪದಲ್ಲೇ ಇದ್ದು, ಇದೀಗ ರಫೇಲ್ ಜೆಟ್ನ ಎರಡನೇ ಸ್ಕ್ವಾಡ್ರನ್ನಿಂದ ಸಹಜವಾಗಿಯೇ ಇಲ್ಲಿನ ವಾಯುಪಡೆಗೆ ಉತ್ತೇಜನ ದೊರೆಯಲಿದೆ.
ಫ್ರಾನ್ಸ್ನೊಂದಿಗೆ ಭಾರತ 2016ರಲ್ಲಿ ಮಾಡಿಕೊಂಡ ಅನ್ವಯ ಇಲ್ಲಿಗೆ ಒಟ್ಟು 36 ರಫೇಲ್ ಜೆಟ್ಗಳು ಬರಲಿವೆ. ಎರಡು ಇಂಜಿನ್ಗಳ ರಫೇಲ್ ಜೆಟ್ಗಳು ನೆಲ ಮತ್ತು ಸಮುದ್ರ ದಾಳಿ, ನ್ಯೂಕ್ಲಿಯರ್ ಅಟ್ಯಾಕ್ನಂತಹ ಅಪಾಯಕಾರಿ ದಾಳಿ ವಿರುದ್ಧವೂ ನಿಲ್ಲಬಹುದಾದ ಸಾಮರ್ಥ್ಯಹೊಂದಿವೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ, ಗಾಂಜಾ ನಶೆಯಲ್ಲಿ ರಸ್ತೆ ಬದಿ ನಿಂತಿದ್ದ ವಾಹನಗಳ ಗಾಜು ಪುಡಿ ಪುಡಿ
3 more Rafale jets arrived to India from France
Published On - 8:30 am, Thu, 22 July 21