ನಾವು ನಿಂತಿದ್ದ ನೆಲ ಒಮ್ಮೆಲೇ ಕುಸಿದು..ಹಾಗೆ ಬಾಯ್ಬಿಟ್ಟ ಭೂಮಿಯಲ್ಲಿ ನಾವು ಬೀಳುವ ದೃಶ್ಯವನ್ನು ಕಲ್ಪನೆ ಮಾಡಿಕೊಳ್ಳಲೂ ಭಯವಾಗುತ್ತದೆ..ಆದರೆ ಇದೇ ನೈಜ ಘಟನೆಯೊಂದು ನಡೆದಿದೆ. ನೋಡನೋಡುತ್ತಿದ್ದಂತೆ ನೆಲ ಬಾಯ್ಬಿಟ್ಟು ದೊಡ್ಡದೊಂದು ಹೊಂಡ ಸೃಷ್ಟಿಯಾಗಿದೆ. ಆ ಸಮಯದಲ್ಲಿ ಅಲ್ಲೇ ನಿಂತಿದ್ದ ಮೂರು ಕಾರುಗಳು ಹೊಂಡದೊಳಗೆ ಬಿದ್ದಿರುವ ವಿಡಿಯೋ ಒಂದು ಸಿಕ್ಕಾಪಟೆ ವೈರಲ್ ಆಗಿದ್ದು, ತೀವ್ರ ಭಯಾನಕ ಎನ್ನಿಸಿದೆ.
ಜೆರುಸೆಲಂನ ಆಸ್ಪತ್ರೆಯೊಂದರ ಪಾರ್ಕಿಂಗ್ ಸ್ಥಳದಲ್ಲಿ ಹೀಗೆ ಭೂಮಿ ಕುಸಿದು ದೊಡ್ಡ ಹೊಂಡ ಸೃಷ್ಟಿಯಾಗಿದೆ. ನಿಲ್ಲಿಸಿದ್ದ ಕಾರುಗಳ ಕೆಳಗಿನ ಭೂಮಿ ಬಾಯ್ಬಿಟ್ಟು ಮೂರು ಕಾರುಗಳು ಅದರೊಳಗೆ ಬಿದ್ದ ದೃಶ್ಯ, ಅಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೂರು ಕಾರುಗಳು ಬಿದ್ದಿವೆ ಎಂದರೆ ಅದೆಷ್ಟು ದೊಡ್ಡ ಹೊಂಡ ಎಂಬುದನ್ನು ಊಹಿಸಿಕೊಳ್ಳಿ. ಊಹಿಸುವುದೂ ಬೇಡ.. ಕೆಳಗಿನ ವಿಡಿಯೋ ನೋಡಿ.
ಈ ಭಯಾನಕ ಘಟನೆ ನಡೆದ ಬಳಿಕ ಸ್ಥಳಕ್ಕೆ ಏಳು ಅಗ್ನಿಶಾಮಕ ಟ್ರಕ್ಗಳು ಮತ್ತು ಒಂದು ವಿಶೇಷ ರಕ್ಷಣಾ ಘಟಕ ತೆರಳಿತ್ತು. ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ ಎಂದು ಸ್ಥಳಕ್ಕೆ ತೆರಳಿದ್ದ ಅಗ್ನಿಶಾಮಕ ದಳವೊಂದು ಟೈಮ್ಸ್ ಆಫ್ ಇಸ್ರೇಲ್ ಮಾಧ್ಯಮಕ್ಕೆ ಮಾಹಿತಿ ನೀಡಿದೆ. ಈ ಜಾಗದ ಸಮೀಪ ಸುರಂಗ ಮಾರ್ಗವೊಂದನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರ ಕಾಮಗಾರಿಯಿಂದಾಗಿಯೇ ಹೀಗೆ ಭೂಕುಸಿತ ಉಂಟಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕಳೆದ ವಾರ ಬರೋಬ್ಬರಿ 300 ಅಡಿ ಆಳದ ಗುಂಡಿಯೊಂದು ಮೆಕ್ಸಿಕೋದ ಕೃಷಿಭೂಮಿಯಲ್ಲಿ ನಿರ್ಮಾಣವಾಗಿ ಆತಂಕ ಹುಟ್ಟಿಸಿತ್ತು. ಮೊದಲು ಸಣ್ಣದಾಗಿದ್ದ ಈ ಕುಳಿ ಬರಬರುತ್ತ ದೊಡ್ಡದಾಗುತ್ತ ಹೋಗಿತ್ತು. ನಂತರ ಅದರಲ್ಲಿ ನೀರು ತುಂಬಿತ್ತು.
עם אחד בפרסום ראשון ממצלמות אבטחה של שערי צדק: כלי הרכב פשוט קורסים למטה. pic.twitter.com/ysQxEeBH1T
— Yossi Eli יוסי אלי (@Yossi_eli) June 7, 2021
ಇದನ್ನೂ ಓದಿ: ಇಂಧನ ದರ ಏರಿಕೆ ವಿರುದ್ಧ ಕಾಂಗ್ರೆಸ್ ಸಮರ; 5 ದಿನಗಳ ಕಾಲ ‘100 ನಾಟೌಟ್’ ಕ್ಯಾಂಪೇನ್: ಡಿ ಕೆ ಶಿವಕುಮಾರ್ ಘೋಷಣೆ
3 parked cars fell into sinkhole out side of Jerusalem hospital
Published On - 4:31 pm, Wed, 9 June 21