ವಿಮಾನ ಅಪಹರಿಸಿ, ಪಾಕಿಸ್ತಾನಕ್ಕೆ ತೆಗೆದುಕೊಂಡು ಹೋಗ್ತೇನೆ ಎಂದು ಬೆದರಿಕೆ ಹಾಕಿದ್ದವ ಅರೆಸ್ಟ್​

TV9kannada Web Team

TV9kannada Web Team | Edited By: Lakshmi Hegde

Updated on: Jun 09, 2021 | 5:04 PM

ವಿಮಾನ ಅಪಹರಣ ಮಾಡುವ ಬೆದರಿಕೆ ಹಾಕಿದ್ದ ಈತನನ್ನು ಮಂಗಳವಾರ ರಾತ್ರಿ ಶುಜಾಲ್​ಪುರ್​ ಪಟ್ಟಣದಲ್ಲಿ (ಭೋಪಾಲ್​ಗಿಂತ 100 ಕಿಮೀ ದೂರದಲ್ಲಿದೆ) ಬಂಧಿಸಲಾಗಿದೆ.

ವಿಮಾನ ಅಪಹರಿಸಿ, ಪಾಕಿಸ್ತಾನಕ್ಕೆ ತೆಗೆದುಕೊಂಡು ಹೋಗ್ತೇನೆ ಎಂದು ಬೆದರಿಕೆ ಹಾಕಿದ್ದವ ಅರೆಸ್ಟ್​
ಸಾಂದರ್ಭಿಕ ಚಿತ್ರ

ಭೋಪಾಲ್​: ಮಧ್ಯಪ್ರದೇಶದ ಭೋಪಾಲ್​ ಮತ್ತು ಇಂಧೋರ್​​ ವಿಮಾನ ನಿಲ್ದಾಣಗಳಿಂದ ವಿಮಾನಗಳನ್ನು ಅಪಹರಿಸಿ, ಪಾಕಿಸ್ತಾನಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಬೆದರಿಕೆ ಹಾಕಿದ್ದ 34 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಮಧ್ಯಪ್ರದೇಶದ ಶುಜಾಲ್​​ಪುರದವನು ಎಂಬುದು ವಿಚಾರಣೆಯ ವೇಳೆ ಗೊತ್ತಾಗಿದೆ.

ಭೋಪಾಲ್​ನ ಗಾಂಧಿನಗರ ಪೊಲೀಸ್​ ಠಾಣೆಯ ಮುಖ್ಯ ಅಧಿಕಾರಿ ಅರುಣ್​ ಶರ್ಮಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜಾ ಭೋಜ್​ ಏರ್​​ಪೋರ್ಟ್​ಗೆ ಮಂಗಳವಾರ ಸಂಜೆ 5ಗಂಟೆಯ ಹೊತ್ತಿಗೆ ಅಪರಿಚಿತ ಕರೆಯೊಂದು ಬಂದಿತ್ತು. ವಿಮಾನ ಅಪಹರಣ ಮಾಡುವುದಾಗಿ ಬೆದರಿಕೆ ಹಾಕಿದ್ದ. ಏರ್​ಪೋರ್ಟ್​ನವರು ಕೂಡಲೇ ನಮಗೆ ಕರೆ ಮಾಡಿ ವಿಷಯ ತಿಳಿಸಿದರು. ನಾವು ಕಾಲ್​ ಟ್ರೇಸ್​ ಮಾಡಿ ಈತನನ್ನು ಪತ್ತೆಹಚ್ಚಿದ್ದೇವೆ. ವಿಚಾರಣೆಗಾಗಿ ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿ

ವಿಮಾನ ಅಪಹರಣ ಮಾಡುವ ಬೆದರಿಕೆ ಹಾಕಿದ್ದ ಈತನನ್ನು ಮಂಗಳವಾರ ರಾತ್ರಿ ಶುಜಾಲ್​ಪುರ್​ ಪಟ್ಟಣದಲ್ಲಿ (ಭೋಪಾಲ್​ಗಿಂತ 100 ಕಿಮೀ ದೂರದಲ್ಲಿದೆ) ಬಂಧಿಸಲಾಗಿದೆ. ಇವನನ್ನು ಸಮಗ್ರವಾಗಿ ವಿಚಾರಣೆಗೆ ಒಳಪಡಿಸಲಾಗಿದೆ. ಈತನಿಂದ ಕರೆ ಬಂದ ಬಳಿಕ ಮುಂಬೈಗೆ ಭೋಪಾಲ್​​ನಿಂದ ತೆರಳಿದ್ದ ವಿಮಾನವನ್ನು ಸರಿಯಾಗಿ ತಪಾಸಣೆ ಮಾಡಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನೂ ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ:Pvt Schools Fees Torcher : ‘ಸಚಿವರು ಖಾಸಗಿ ಶಾಲೆಗಳ ಜತೆ ಶಾಮೀಲಾದಂತೆ ಕಾಣ್ತಿದೆ’

Man who threatens to hijack planes is arrested in Bhopal

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada