ಇಂಧನ ದರ ಏರಿಕೆ ವಿರುದ್ಧ ಕಾಂಗ್ರೆಸ್ ಸಮರ; 5 ದಿನಗಳ ಕಾಲ ‘100 ನಾಟೌಟ್’ ಕ್ಯಾಂಪೇನ್: ಡಿ ಕೆ ಶಿವಕುಮಾರ್ ಘೋಷಣೆ

DK Shivakumar: ಕೇಂದ್ರ 21 ಲಕ್ಷ ಕೋಟಿ ಆದಾಯ ಮಾಡಿಕೊಂಡಿದೆ. ನಮ್ಮ ನೆರೆಯ ದೇಶಗಳಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗಿಲ್ಲ. ನಮ್ಮ ದೇಶದಲ್ಲಿ ಜಿಡಿಪಿ ದರವೂ ಕುಸಿದಿದೆ. ಬಲಿಷ್ಠ, ಅಭಿವೃದ್ಧಿ ಶೀಲ ಭಾರತದಲ್ಲಿ ಜಿಡಿಪಿ ದರ ಕುಸಿದಿದೆ. ಜನರ ಭಾವನೆ ಅರಿತುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ.

ಇಂಧನ ದರ ಏರಿಕೆ ವಿರುದ್ಧ ಕಾಂಗ್ರೆಸ್ ಸಮರ; 5 ದಿನಗಳ ಕಾಲ ‘100 ನಾಟೌಟ್’ ಕ್ಯಾಂಪೇನ್: ಡಿ ಕೆ ಶಿವಕುಮಾರ್ ಘೋಷಣೆ
ಡಿಕೆ ಶಿವಕುಮಾರ್ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Jun 09, 2021 | 4:14 PM

ಬೆಂಗಳೂರು: ಲೀಟರ್ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದೆ. ಈ ನಡೆಯನ್ನು ವಿರೋಧಿಸಿ, ಕೆಪಿಸಿಸಿ ‘100 ನಾಟೌಟ್ ಕ್ಯಾಂಪೇನ್’ ಹಮ್ಮಿಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಕಚೇರಿಯಲ್ಲಿ ಇಂದು (ಜೂನ್ 9) ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜೂನ್ 11ರಿಂದ 5 ದಿನಗಳ ಕಾಲ ಕ್ಯಾಂಪೇನ್ ನಡೆಯಲಿದೆ. ರಾಜ್ಯದ 5 ಸಾವಿರ ಪೆಟ್ರೋಲ್ ಬಂಕ್‌ಗಳಲ್ಲಿ ಧರಣಿ ನಡೆಯುತ್ತದೆ. ಜೂನ್ 11ರಂದು ಜಿಲ್ಲಾ ಕೇಂದ್ರಗಳಲ್ಲಿ, ಜೂನ್ 12 ತಾಲೂಕು ಕೇಂದ್ರಗಳಲ್ಲಿ, ಜೂನ್ 13 ಜಿಲ್ಲಾ ಪಂಚಾಯಿತಿ, ಹೋಬಳಿ ಮಟ್ಟದಲ್ಲಿ ಪ್ರತಿಭಟನೆ ನಡೆಯಲಿದೆ. ಜೂನ್ 14 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ. ಜೂನ್ 15 ಪ್ರಮುಖ ಪೆಟ್ರೋಲ್ ಬಂಕ್‌ಗಳಲ್ಲಿ ಧರಣಿ ನಡೆಯುತ್ತೆ ಎಂದು ಡಿ.ಕೆ. ಶಿವಕುಮಾರ್ ಇಂಧನ ಬೆಲೆ ಏರಿಕೆ ವಿರುದ್ಧ ಸಮರ ಸಾರಿದ್ದಾರೆ.

ಎಲ್ಲ ಪ್ರತಿಭಟನೆಗಳಿಗೆ ನಾಯಕತ್ವ ಇರುತ್ತದೆ. ಎಲ್ಲ ಜವಾಬ್ದಾರಿಯನ್ನು ಆಯಾ ನಾಯಕರಿಗೆ ವಹಿಸುತ್ತೇವೆ. ಉಸ್ತುವಾರಿಗಳ ಪಟ್ಟಿಯನ್ನು ಕೂಡ ಬಿಡುಗಡೆ ಮಾಡುತ್ತೇವೆ. ಈ ಉಸ್ತುವಾರಿಗಳು ಪ್ರತಿಭಟನೆ ನಿರ್ವಹಣೆ ಮಾಡಬೇಕು. ಒಂದು ನಿಮಿಷದ ವಿಡಿಯೋ ಮಾಡಿ ಐಟಿ ಸೆಲ್‌ಗೆ ರವಾನಿಸಬೇಕು. ನಮ್ಮ ಕೆಪಿಸಿಸಿ ಐಟಿ ಸೆಲ್‌ನಿಂದ, ಎಐಸಿಸಿಗೂ ಕಳಿಸುತ್ತೇನೆ. ನಾನು ಸೇರಿದಂತೆ ಪ್ರತಿಯೊಬ್ಬರೂ ಪ್ರತಿಭಟನೆಗೆ ಹೋಗಬೇಕು. ಶಾಸಕರು, ಮಾಜಿ ಶಾಸಕರು ಕೂಡ ಪ್ರತಿಭಟನೆಗೆ ಹೋಗಬೇಕು. ಕೊವಿಡ್ ನಿಯಮಾನುಸಾರ ಪ್ರತಿಭಟನೆ ಮಾಡಬೇಕು ಎಂದು ಡಿ.ಕೆ. ಶಿವಕುಮಾರ್ ಪ್ರತಿಭಟನಾ ವಿಧಾನ ತಿಳಿಸಿದ್ದಾರೆ.

ಪ್ರತಿಭಟನೆಗೆ ಎಐಸಿಸಿ ಕೂಡ ಮಾರ್ಗದರ್ಶನ ನೀಡುತ್ತದೆ. ದೇಶದಲ್ಲಿ ಪೆಟ್ರೋಲ್ ಪಿಕ್ ಪಾಕೆಟ್ ನಡೆಯುತ್ತಿದೆ. ಹೀಗಾಗಿ ‘100 ನಾಟೌಟ್ ಕ್ಯಾಂಪೇನ್’ ಮಾಡುತ್ತಿದ್ದೇವೆ. ಜನವರಿಯಲ್ಲಿ 16 ಬಾರಿ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಫೆಬ್ರವರಿಯಲ್ಲಿ 16 ಬಾರಿ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಜೂನ್‌ನಲ್ಲಿ 16 ಬಾರಿ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಮಾರ್ಚ್, ಏಪ್ರಿಲ್, ಮೇನಲ್ಲಿ ಪೆಟ್ರೋಲ್ ಬೆಲೆ ಏರಿಕೆ ಆಗಿಲ್ಲ. ಏಕೆಂದರೆ, ಆಗ ಚುನಾವಣೆ ಇರುವ ಕಾರಣ ಪೆಟ್ರೋಲ್ ಬೆಲೆ ಏರಿಕೆಯಾಗಿಲ್ಲ ಎಂದು ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಕೇಂದ್ರ 21 ಲಕ್ಷ ಕೋಟಿ ಆದಾಯ ಮಾಡಿಕೊಂಡಿದೆ. ನಮ್ಮ ನೆರೆಯ ದೇಶಗಳಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗಿಲ್ಲ. ನಮ್ಮ ದೇಶದಲ್ಲಿ ಜಿಡಿಪಿ ದರವೂ ಕುಸಿದಿದೆ. ಬಲಿಷ್ಠ, ಅಭಿವೃದ್ಧಿ ಶೀಲ ಭಾರತದಲ್ಲಿ ಜಿಡಿಪಿ ದರ ಕುಸಿದಿದೆ. ಜನರ ಭಾವನೆ ಅರಿತುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇಂತಹ ಪರಿಸ್ಥಿತಿಗೆ ಬಂದಿದ್ದೇವೆ. ಪೆಟ್ರೋಲ್ ದರ ಏರಿಕೆ ಮೂಲಕ ಜೇಬಿಗೆ ಕತ್ತರಿ ಹಾಕ್ತಿದ್ದಾರೆ. ಪೆಟ್ರೋಲ್ ಬೆಲೆ ಕಡಿಮೆ ಮಾಡಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ ಜಂಟಿ ಸುದ್ದಿಗೋಷ್ಠಿ ಯಾರೂ ಮಾಡದ ಸಾಧನೆ ಮೋದಿ ಸರ್ಕಾರ ಮಾಡಿದೆ. ಪೆಟ್ರೋಲ್ ದರ ಶತಕದ ಗಡಿ ದಾಟಿದೆ ಎಂದು ಬೆಂಗಳೂರಿನಲ್ಲಿ ಇಂದು (ಜೂನ್ 9) ನಡೆದ ಕಾಂಗ್ರೆಸ್ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಮತ್ತು ಕೃಷ್ಣಭೈರೇಗೌಡ ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಗೋಬೆಲ್ಸ್ ಥಿಯರಿಯಂತೆ ಒಂದೇ ಸುಳ್ಳು ಪುನರುಚ್ಛಾರ ಮಾಡುತ್ತಿದ್ದಾರೆ. ಮೋದಿ ಸರ್ಕಾರ ಒಂದೇ ಸುಳ್ಳನ್ನು ಪದೇಪದೆ ಹೇಳುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ದರದಂತೆ ಏರಿಕೆ ಅಂತಾರೆ. ಆದರೆ, ಈ ಹಿಂದೆ ದರ ಕಡಿಮೆ ಇದ್ದಾಗಲೂ ನಮ್ಮಲ್ಲಿ ಹೆಚ್ಚಿದ್ದಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.

ಪೆಟ್ರೋಲ್ ಬೆಲೆ ಏರಿಕೆಗೆ ಕೃಷ್ಣ ಭೈರೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಲೀಟರ್ ಪೆಟ್ರೋಲ್ ಬೆಲೆ ಶತಕ ಬಾರಿಸಿದರೆ, ನಮ್ಮ ಪಕ್ಕದ ರಾಷ್ಟ್ರಗಳಾದ ನೇಪಾಳದಲ್ಲಿ 77 ರೂಪಾಯಿ ಇದೆ. ಭೂತಾನ್‌ನಲ್ಲಿ 68.76 ರೂಪಾಯಿ ಇದೆ. ಶ್ರೀಲಂಕಾದಲ್ಲಿ 59.60 ರೂಪಾಯಿ ಇದೆ. ಪಾಕಿಸ್ತಾನದಲ್ಲಿ ಲೀಟರ್ ಪೆಟ್ರೋಲ್ 51.61 ರೂಪಾಯಿ ಅಷ್ಟೇ ಇದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಕೃಷ್ಣ ಭೈರೇಗೌಡ ಹೇಳಿಕೆ ನೀಡಿದ್ದಾರೆ.

400 ರೂಪಾಯಿ ಇದ್ದ ಎಲ್‌ಪಿಜಿ ಸಿಲಿಂಡರ್ ಬೆಲೆ ರೂಪಾಯಿ 800 ಆಗಿದೆ. ಕೇಂದ್ರ ಸರ್ಕಾರ ಈಗ ಸಬ್ಸಿಡಿಯನ್ನು ಸಹ ಕೊಡುತ್ತಿಲ್ಲ. ಕೇಂದ್ರಕ್ಕೆ ಇವೇ ದೊಡ್ಡ ಆದಾಯ ಮೂಲಗಳಾಗಿವೆ. ಇದರಿಂದ ಈ ಹಿಂದೆ ರೂಪಾಯಿ 52,350 ಕೋಟಿ ಆದಾಯವಿತ್ತು. ಈಗ 3 ಲಕ್ಷ ಕೋಟಿ ರೂಪಾಯಿಯಷ್ಟು ಆದಾಯ ಬರ್ತಿದೆ. ಶೇಕಡಾ 700 ರಷ್ಟು ಏರಿಕೆಯಾಗಿದೆ ಎಂದು ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ತೆರಿಗೆ ಕಟ್ಟುವವರು ಶ್ರೀಮಂತರಲ್ಲ ಬಡವರು ದೇಶದಲ್ಲಿ ತೆರಿಗೆ ಕಟ್ಟುವವರು ಶ್ರೀಮಂತರಲ್ಲ, ಬಡವರು ಎಂದು ಕಾಂಗ್ರೆಸ್ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಕಾರ್ಪೊರೇಟ್ ತೆರಿಗೆ ಶೇ.34ರಿಂದ ಶೇ.28ಕ್ಕೆ ಇಳಿಸಿದ್ರು. ಇದರಿಂದ 1,000 ಜನರಿಗಷ್ಟೇ ಸಹಾಯವಾಯ್ತು. ದೇಶಕ್ಕೆ ಒಂದೂವರೆ ಲಕ್ಷ ಕೋಟಿ ರೂಪಾಯಿ ನಷ್ಟವಾಯ್ತು. ಆರ್ಥಿಕತೆ ಸರಿದಾರಿಗೆ ತರಲು ಬಡವರ ಕೈಗೆ ಹಣ ನೀಡಿ. ಅತಿ ಶ್ರೀಮಂತರ ಮೇಲೆ ತೆರಿಗೆ ವಿಧಿಸಿದರೆ ಶೇಕಡಾ 75ರಷ್ಟು ಭಾರತೀಯರು ನೆಮ್ಮದಿಯಾಗಿರುತ್ತಾರೆ ಎಂದು ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಿಜೆಪಿಯವರು ಯಾವಾಗಲೂ ಒಂದೇ ಜಪ ಮಾಡುತ್ತಾರೆ. 50 ವರ್ಷದಲ್ಲಿ ಮಾಡದ ಸಾಧನೆ ಮಾಡಿದ್ದೇವೆ ಎನ್ನುತ್ತಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ. ಇಂದು ಬಿಜೆಪಿಯವರ ಮಾತನ್ನು ಒಪ್ಪಬೇಕಿದೆ. ನಮ್ಮ ಸರ್ಕಾರವಿದ್ದಾಗ ಇಷ್ಟು ನಿರುದ್ಯೋಗ ಇರಲಿಲ್ಲ. ಬಡತನದ ರೇಖೆ ಈಗಿದ್ದಷ್ಟು ಆಗ ಕುಸಿದಿರಲಿಲ್ಲ. ಜಿಎಸ್‌ಟಿ, ನೋಟ್ ಬ್ಯಾನ್ ಎಲ್ಲ ಜನರಿಗೆ ಅರ್ಥವಾಗಿದೆ. ನಮ್ಮ ಅವಧಿಯಲ್ಲಿ ಪೆಟ್ರೋಲ್ ರೇಟ್ ರೂಪಾಯಿ 60 ದಾಟಿರಲಿಲ್ಲ. ಪೆಟ್ರೋಲ್ ಬೆಲೆ ಏರಿಕೆ ಬಿಸಿ ವ್ಯಾಪಾರಗಳ ಮೇಲೆ ಬಿದ್ದಿದೆ. ಸಾರಿಗೆ, ಆಟೋಮೊಬೈಲ್ ಎಲ್ಲದರ ಮೇಲೂ ಬಿದ್ದಿದೆ. ಡೀಸೆಲ್ ಬೆಲೆ ಏರಿದರೆ ಅಗತ್ಯ ಸರಕುಗಳ ಬೆಲೆ ಹೆಚ್ಚುತ್ತದೆ ಎಂದು ಪ್ರಿಯಾಂಕ್ ಖರ್ಗೆ ಬಿಜೆಪಿ ಸರ್ಕಾರವನ್ನು ಕುಟುಕಿದ್ದಾರೆ.

ದೇಶದ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಇಂಧನ ದರ ಕೇವಲ 35 ರೂಪಾಯಿ. ಉಳಿದಿದ್ದೆಲ್ಲ ತೆರಿಗೆ ಹಣ. ಪೆಟ್ರೋಲ್ ಬಂಕ್‌ಗಳು ತೆರಿಗೆ ವಸೂಲಿ ಕೇಂದ್ರಗಳಾಗಿವೆ ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ವಾಗ್ದಾಳಿ ನಡೆಸಿದ್ದಾರೆ. ಇದು ತೆರಿಗೆ ಭಯೋತ್ಪಾದನೆ. ಕೊವಿಡ್ ಬಳಿಕ ಶೇಕಡಾ 70ರಷ್ಟು ಜನರ ಆದಾಯ ಕುಸಿದಿದೆ. ಬಡತನರೇಖೆ ಕೆಳಗಿರುವವರ ಸಂಖ್ಯೆ 13 ಕೋಟಿಗೂ ಹೆಚ್ಚಿದೆ. ಜನರು ಮನೆ ನಡೆಸುವುದೇ ಕಷ್ಟ ಆಗಿರುವಾಗ ತೆರಿಗೆ ದಾಳಿ ಆಗುತ್ತಿದೆ. ಇದು ದೇಶದ ಬಡವರಿಗೆ ಮಾಡುತ್ತಿರುವ ಅನ್ಯಾಯ. ದೇಶದ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಕೃಷ್ಣಭೈರೇಗೌಡ ಆರೋಪಿಸಿದ್ದಾರೆ.

ತೆರಿಗೆ ಭಯೋತ್ಪಾದನೆಯನ್ನು ಸರ್ಕಾರ ನಿಲ್ಲಿಸಬೇಕು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಆಟೋಮೊಬೈಲ್ ಉದ್ಯಮದ ಮೇಲೂ ಪರಿಣಾಮ ಉಂಟಾಗಿದೆ. ಕೇಂದ್ರದಲ್ಲಿ ಪೆಟ್ರೋಲಿಯಂ ಅನಾಲಿಸಿಸ್ ಸೆಲ್ ಇದೆ. ಇದರ ಪ್ರಕಾರ ಪೆಟ್ರೋಲ್ ಬಳಕೆ ಶೇ.4.9ಕ್ಕೆ ಇಳಿದಿದೆ. ದೇಶದಲ್ಲಿ ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ. ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಬಿಎಂಟಿಸಿಯವರು ದರ ಏರಿಕೆಗೆ ಅರ್ಜಿ ಸಲ್ಲಿಸಿದ್ದಾರೆ. ಕೆಎಸ್​ಆರ್​ಟಿಸಿ ದರ ಹೆಚ್ಚಳದ ಬಗ್ಗೆ ಮನವಿ ನೀಡಿದ್ದಾರೆ. ಡೀಸೆಲ್ ದರ ಏರಿಕೆಯಿಂದ ಬಸ್ ದರ ಏರಿಕೆಗೆ ಮನವಿ ಮಾಡಲಾಗಿದೆ. ಸರ್ಕಾರದ ಸಂಸ್ಥೆಗಳಿಂದಲೇ ಈ ರೀತಿ ಸರ್ಕಾರಕ್ಕೆ ಮನವಿ ನೀಡಲಾಗುತ್ತಿದೆ. ಇದನ್ನ ಗಮನಿಸಿದರೆ ಜನರ ಮೇಲೆ ಮತ್ತಷ್ಟು ಹೊರೆ ಖಚಿತ. ತೆರಿಗೆ ಭಯೋತ್ಪಾದನೆಯನ್ನು ಸರ್ಕಾರ ನಿಲ್ಲಿಸಬೇಕು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ರಸ್ತೆ ಮಾರ್ಗದಲ್ಲಿ ತೆರಳಿ ರಾಜ್ಯಪಾಲರಿಗೆ ಮನವಿ

ಕೆಪಿಸಿಸಿ ಪಿಆರ್ ಸಂಸ್ಥೆ ವಿವಾದ: ಡಿಕೆ ಶಿವಕುಮಾರ್ ಬಿಟ್ರೆ ಇನ್ನಾರ ಫೋಟೋನೂ ಇಲ್ಲ; ಸಿದ್ದರಾಮಯ್ಯ ಚಿತ್ರವೂ ಬಳಸದ ಪಿಆರ್ ಸಂಸ್ಥೆ

Published On - 4:01 pm, Wed, 9 June 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್