ಕೆಪಿಸಿಸಿ ಪಿಆರ್ ಸಂಸ್ಥೆ ವಿವಾದ: ಡಿಕೆ ಶಿವಕುಮಾರ್ ಬಿಟ್ರೆ ಇನ್ನಾರ ಫೋಟೋನೂ ಇಲ್ಲ; ಸಿದ್ದರಾಮಯ್ಯ ಚಿತ್ರವೂ ಬಳಸದ ಪಿಆರ್ ಸಂಸ್ಥೆ
KPCC PR agency: ನರೇಶ್ ಅರೋರಾ ಎಂಬುವವರ ಮಾಲಿಕತ್ವದ ಪಿಆರ್ ಸಂಸ್ಥೆ ಇದಾಗಿದ್ದು, ಡಿ ಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುತ್ತಿದೆ ಎಂಬ ಆರೋಪ ಬಲವಾಗಿ ಕೇಳಿಬಂದಿದೆ. ರಾಜ್ಯದ ಹಿರಿಯ ನಾಯಕರು ಪಕ್ಷದ ವೇದಿಕೆಯಲ್ಲೇ ಸುದ್ದಿಗೋಷ್ಠಿ ನಡೆಸಿದರೂ ಪ್ರಚಾರ ಮಾಡದ ಹಿನ್ನೆಲೆ ಕಾಂಗ್ರೆಸ್ ಪಕ್ಷದಲ್ಲಿ ಈ ಅಸಮಾಧಾನ ಹೆಚ್ಚಾಗಿದೆ.
ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಪಿಆರ್ ಸಂಸ್ಥೆ ವಿಚಾರವಾಗಿ ವಿವಾದ ಎದ್ದಿದೆ. ಡಿಸೈನ್ ಬಾಕ್ಸ್ ಎಂಬ ನೂತನ ಪ್ರಚಾರ ಸಂಸ್ಥೆಯೊಂದನ್ನ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇಮಿಸಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಇಮೇಜ್ ಮ್ಯಾನೇಜ್ ಮೆಂಟ್ ಹೊಣೆ ಹೊತ್ತಿರುವ ಈ ಪಿ ಆರ್ ಸಂಸ್ಥೆಯು ಕೇವಲ ಡಿ ಕೆ ಶಿವಕುಮಾರ್ ಗೆ ಮಾತ್ರ ಪ್ರಚಾರ ನೀಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಡಿಕೆಶಿ ಹೊರತು ಪಡಿಸಿ ಇನ್ನಾರ ಫೋಟೋ ಸಹ ಹಾಕಿಲ್ಲ. ಸಿದ್ದರಾಮಯ್ಯರ ಭಾವಚಿತ್ರವೂ ಬಳಸದ ಪಿ ಆರ್ ಸಂಸ್ಥೆ. ಎಲ್ಲಾ ಪೋಸ್ಟರ್ ಮತ್ತು ಕಂಟೆಂಟ್ ಗಳು ಡಿ ಕೆ ಶಿ ಕೇಂದ್ರಿಕೃತವಾಗಿವೆ ಎಂಬ ಆರೋಪ ಡಿ ಕೆ ಶಿವಕುಮಾರ್ ವಿರೋಧಿ ಬಣದಿಂದ ಕೇಳಿಬಂದಿದೆ.
ಡಿ ಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ: ಈಗಾಗಲೇ ಪಕ್ಷದ ವೇದಿಕೆಯಲ್ಲಿ ಕೆಲ ನಾಯಕರು ಪಿಆರ್ ಸಂಸ್ಥೆ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ದೆಹಲಿ ನಾಯಕರ ಒತ್ತಡಕ್ಕೆ ಮಣಿದು ಪಿ ಆರ್ ಸಂಸ್ಥೆ ನೇಮಕವಾಗಿದೆ ಎಂದು ಆರೋಪಿಸಲಾಗಿದೆ. ನರೇಶ್ ಅರೋರಾ ಎಂಬುವವರ ಮಾಲಿಕತ್ವದ ಪಿಆರ್ ಸಂಸ್ಥೆ ಇದಾಗಿದೆ. ಡಿ ಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುತ್ತಿದೆ ಎಂಬ ಆರೋಪ ಬಲವಾಗಿ ಕೇಳಿಬಂದಿದೆ. ರಾಜ್ಯದ ಹಿರಿಯ ನಾಯಕರು ಪಕ್ಷದ ವೇದಿಕೆಯಲ್ಲೇ ಸುದ್ದಿಗೋಷ್ಠಿ ನಡೆಸಿದರೂ ಪ್ರಚಾರ ಮಾಡದ ಹಿನ್ನೆಲೆ ಕಾಂಗ್ರೆಸ್ ಪಕ್ಷದಲ್ಲಿ ಈ ಅಸಮಾಧಾನ ಹೆಚ್ಚಾಗಿದೆ.
(karnataka congress leaders oppose KPCC PR agency design box as its only pro dk shivakumar)
ಡಿಕೆ ಶಿವಕುಮಾರ್ ರಾಜೀನಾಮೆ ಕೊಡಬೇಕು: ಹೈಕಮಾಂಡ್ ಇದರ ಬಗ್ಗೆ ಗಂಭೀರ ಯೋಚನೆ ಮಾಡಬೇಕು- ಲಖನ್ ಜಾರಕಿಹೊಳಿ
Published On - 11:07 am, Wed, 2 June 21