ಶೋಪಿಯಾನ್: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ತಲ್ರಾನ್ ಗ್ರಾಮದಲ್ಲಿ ಭದ್ರತಾ ಪಡೆಗಳು ಮೂವರು ಉಗ್ರರನ್ನು ಇಂದು ಮುಂಜಾನೆ ಹೊಡೆದುರುಳಿಸಿವೆ. ಇದರೊಂದಿಗೆ ಉಗ್ರರ ಬಳಿಯಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. CRPF, ಜಮ್ಮು & ಕಾಶ್ಮೀರ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಮೃತಪಟ್ಟ ಮೂವರು ಉಗ್ರರಲ್ಲಿ ಒಬ್ಬ ಗಂದರ್‌ಬಾಲ್‌ನ ಮುಖ್ತಾರ್ ಶಾ ಎಂದು ಗುರುತಿಸಲಾಗಿದ್ದು, ಆತ ಬಿಹಾರದ ವ್ಯಾಪಾರಿ ವೀರೇಂದ್ರ ಪಾಸ್ವಾನ್‌ನನ್ನು ಹತ್ಯೆಗೈದು ಶೋಪಿಯಾನ್‌ಗೆ ಬಂದಿದ್ದ ಎಂದು ಕಾಶ್ಮೀರ ಐಜಿಪಿ ವಿಜಯ್‌ಕುಮಾರ್ ಮಾಹಿತಿ ನೀಡಿದ್ದಾರೆ.
ಎಎನ್ಐ ಹಂಚಿಕೊಂಡ ಮಾಹಿತಿ ಇಲ್ಲಿದೆ:
Shopian encounter, Jammu and Kashmir | Out of three killed terrorists, one terrorist has been identified as Mukhtar Shah of Ganderbal, who shifted to Shopian after killing one street hawker Virendra Paswan of Bihar: IGP Kashmir Vijay Kumar pic.twitter.com/wngrnv7OVr
— ANI (@ANI) October 11, 2021
ಈ ಕುರಿತು ಆಲ್ ಇಂಡಿಯಾ ರೇಡಿಯೋ (ಎಐಆರ್) ಮಾಹಿತಿ ಹಂಚಿಕೊಂಡಿದ್ದು, ಶೋಪಿಯಾನ್ ಜಿಲ್ಲೆಯ ಇಮಾಮ್ಸಾಹೇಬ್ ಪ್ರದೇಶದ ತಲ್ರಾನ್ ಗ್ರಾಮದಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟಿರುವುದು ಲಷ್ಕರ್ ಎ ತಯ್ಯಬಾ ಸಂಘಟನೆಯ ಉಗ್ರರು ಎಂದು ತಿಳಿಸಿದೆ. ಈ ಕುರಿತ ಟ್ವೀಟ್ ಇಲ್ಲಿದೆ.
ಎಐಆರ್ ಹಂಚಿಕೊಂಡಿರುವ ಟ್ವೀಟ್:
J&K: Three Lashkar-e-Toiba terrorists killed in encounter with security forces at village Tulran in Imamsahab area of Shopian district early this morning.
— All India Radio News (@airnewsalerts) October 12, 2021
ಶೋಪಿಯಾನ್ ಜಿಲ್ಲೆಯ ಇಮಾಮ್ ಸಾಹೇಬ್ ಪ್ರದೇಶದ ತಲ್ರಾನ್ ಗ್ರಾಮದಲ್ಲಿ ಸೋಮವಾರ ಭದ್ರತಾ ಪಡೆಗಳು ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದರು. ಈ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ.
ಇದನ್ನೂ ಓದಿ:
Poonch Encounter: ಜಮ್ಮು ಕಾಶ್ಮೀರದ ಪೂಂಚ್ನಲ್ಲಿ ಉಗ್ರರ ಗುಂಡೇಟಿನಿಂದ ಸೇನಾ ಅಧಿಕಾರಿ, ನಾಲ್ವರು ಯೋಧರು ಸಾವು
ಬೆಂಗಳೂರು: ಕಂಪೌಂಡ್ ಗೋಡೆ ಕುಸಿದು ಅದಕ್ಕೆ ಅಂಟಿಕೊಂಡಿರುವ ಮನೆಗಳಿಗೆ ಅಪಾಯ, ಮನೆಯಲ್ಲಿದ್ದವರ ಬದುಕು ಅತಂತ್ರ
Published On - 7:44 am, Tue, 12 October 21