ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯಲ್ಲಿ 34ಗಂಟೆಗಳಲ್ಲಿ 31ರೋಗಿಗಳ ಸಾವು, ಕಾರಣವೇನು?
ಮಹಾರಾಷ್ಟ್ರದ ನಾಂದೇಡ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 34ಗಂಟೆಗಳಲ್ಲಿ 12 ನವಜಾತ ಶಿಶುಗಳು ಸೇರಿದಂತೆ 31ರೋಗಿಗಳು ಸಾವನ್ನಪ್ಪಿರುವ ಪ್ರಕರಣ ವರದಿಯಾಗಿದೆ. ಈ ಘಟನೆಗೆ ಪ್ರಮುಖ ಕಾರಣ ಆಸ್ಪತ್ರೆಯಲ್ಲಿನ ನೈರ್ಮಲ್ಯತೆ ಎಂದು ಹೇಳಲಾಗಿದೆ. ಕೊಳಚೆ ಪ್ರದೇಶದಲ್ಲೇ ಆಸ್ಪತ್ರೆಯ ರೋಗಿಗಳು ಪಾತ್ರೆ ತೊಳೆಯುವುದು, ಹಲ್ಲುಜ್ಜುವುದು, ಇನ್ನು ಈ ಪ್ರದೇಶಲ್ಲಿ ಹಂದಿಗಳು ಕೂಡ ಓಡಾಡುತ್ತಿತ್ತು ಎಂದು ಹೇಳಲಾಗಿದೆ.
ಮುಂಬೈ. ಅ.4: ಮಹಾರಾಷ್ಟ್ರದ ( Maharashtra) ನಾಂದೇಡ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 34ಗಂಟೆಗಳಲ್ಲಿ 12 ನವಜಾತ ಶಿಶುಗಳು ಸೇರಿದಂತೆ 31ರೋಗಿಗಳು ಸಾವನ್ನಪ್ಪಿರುವ ಪ್ರಕರಣ ವರದಿಯಾಗಿದೆ. ಈ ಘಟನೆಗೆ ಪ್ರಮುಖ ಕಾರಣ ಆಸ್ಪತ್ರೆಯಲ್ಲಿನ ನೈರ್ಮಲ್ಯತೆ ಎಂದು ಹೇಳಲಾಗಿದೆ. ಕೊಳಚೆ ಪ್ರದೇಶದಲ್ಲೇ ಆಸ್ಪತ್ರೆಯ ರೋಗಿಗಳು ಪಾತ್ರೆ ತೊಳೆಯುವುದು, ಹಲ್ಲುಜ್ಜುವುದು, ಇನ್ನು ಈ ಪ್ರದೇಶಲ್ಲಿ ಹಂದಿಗಳು ಕೂಡ ಓಡಾಡುತ್ತಿತ್ತು ಎಂದು ಹೇಳಲಾಗಿದೆ. ಆಸ್ಪತ್ರೆ ಸಿಬ್ಬಂದಿಗಳು ಔಷಧಿ ಮತ್ತು ಹಾಸಿಗೆ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಆದರೆ NDTV ಮಾಡಿದ ಪ್ರತ್ಯಕ್ಷ ವರದಿಯಲ್ಲಿ (Live report) ನಾಂದೇಡ್ ಆಸ್ಪತ್ರೆಯ ಭೀಕರತೆಯನ್ನು ತೋರಿಸಿದೆ. ಆಸ್ಪತ್ರೆಯ ಹಿಂಭಾಗದಲ್ಲಿ ಪ್ಲಾಸ್ಟಿಕ್ ಬಾಟಲಿ ಮತ್ತು ಕಸದಿಂದ ಮುಚ್ಚಿ ಹೋಗಿರುವ ಚರಂಡಿಗಳು. ಆಸ್ಪತ್ರೆ ಕ್ಯಾಂಟಿನ್ ಪಕ್ಕದಲ್ಲೇ ತೆರೆದ ಚರಂಡಿಗಳಲ್ಲಿ ಓಡಾಡುತ್ತಿರುವ ಹಂದಿಗಳನ್ನು ತೋರಿಸಲಾಗಿದೆ. NDTV ಮಾಡಿದ ವರದಿ ಪ್ರಕಾರ ಡಾ ಶಂಕರರಾವ್ ಚವ್ಹಾಣ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ ದೃಶ್ಯಗಳು ಸ್ವಚ್ಛತೆ ಮತ್ತು ನೈರ್ಮಲ್ಯತೆಯೇ 31ರೋಗಿಗಳ ಸಾವಿಗೆ ದೊಡ್ಡ ಕಾರಣ ಎಂದು ಹೇಳಿದೆ. ಪ್ರತಿದಿನವು ರೋಗಿಗಳು ಮತ್ತು ಅವರ ಮನೆಯವರು ಈ ಸಂಕಷ್ಟ ಅನುಭವಿಸಿಕೊಂಡು ಅಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಅಲ್ಲಿನ ಮಹಿಳೆಯರು ಹೇಳಿದ್ದಾರೆ.
ಇನ್ನು ಇಲ್ಲಿಯ ಈ ಅವ್ಯವಸ್ಥೆ ಬಗ್ಗೆ ರೋಗಿಗಳ ಮನೆಯವರಲ್ಲಿ ಈ ಬಗ್ಗೆ ಕೇಳಿದಾಗ, ಇಲ್ಲಿಯ ಶೌಚಾಲಯ ಬಳಸುವಂತಿಲ್ಲ, ಇಲ್ಲಿ ನಮಗೆ ಯಾವುದೇ ರೀತಿಯ ಸೌಲಭ್ಯಗಳು ಸಿಗುತ್ತಿಲ್ಲ. ಔಷಧ ಹಾಗೂ ಎಲ್ಲದಕ್ಕೂ ಹೊರ ಹೋಗಬೇಕಾಗಿದೆ. ಹೀಗಾದರೆ ಬಡವರು ಎಲ್ಲಿ ಹೋಗಬೇಕು? ಎಂದು ಹೇಳಿದ್ದಾರೆ. ಇವರು ಒಬ್ಬರು ಮಾತ್ರ ಅಲ್ಲ ಎಲ್ಲರೂ ಕೂಡ ಈ ಆಸ್ಪತ್ರೆ ಬಗ್ಗೆ ದೂರುತ್ತಿದ್ದಾರೆ ಎಂದು NDTV ವರದಿ ಮಾಡಿದೆ.
NDTV, ಅಲ್ಲಿನ ರೋಗಿಗಳ ಮನೆಯವರಲ್ಲಿ ಈ ಬಗ್ಗೆ ಕೇಳುತ್ತಿರುವಾಗ ಒಬ್ಬ ಮಹಿಳೆ ಇದ್ದಕ್ಕಿದ್ದಂತೆ ಪೊರಕೆಯ ಜತೆಗೆ ಬಂದು ಆ ಪ್ರದೇಶವನ್ನು ಸ್ವಚ್ಛ ಮಾಡಲು ಮುಂದಾಗುತ್ತಾಳೆ. ನಾನು ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತೇನೆ. ಪ್ರತಿದಿನ ನಾನು ಈ ಪ್ರದೇಶವನ್ನು ಸ್ವಚ್ಛಗೊಳಿಸುತ್ತೇನೆ ಎಂದು ಕ್ಯಾಮೆರಾದ ಮುಂದೆ ಹೇಳುತ್ತಾಳೆ. ಇನ್ನು ಹೆರಿಗೆ ವಾರ್ಡ್‌ನ ಸ್ಥಿತಿ ನೋಡಿದ್ರೆ, ಯಾರಿಗೂ ಬೇಡ, ಅಲ್ಲಿ ಮಹಿಳೆಯರು ಹೇಗೆ? ಇರುತಾರೋ ಎಂದು ಗೊತ್ತಾಲ್ಲ ಎಂದು ಎನ್ಡಿಟಿವಿ ವರದಿಗಾರರೂ ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಒಂದೇ ದಿನದಲ್ಲಿ 12 ನವಜಾತ ಶಿಶುಗಳು ಸೇರಿ 24 ಮಂದಿ ಸಾವು
ಈ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಕೂಡ ಇದೆ. ಜತೆಗೆ ಒಬ್ಬ ಸಿಬ್ಬಂದಿ ಬಹು ವಾರ್ಡ್ಗಳನ್ನು ನಿಭಾಯಿಸಬೇಕು. ಇಲ್ಲಿ ಪ್ರತಿದಿನ ಹಂದಿಗಳು ಓಡಾಡುತ್ತಿರುತ್ತದೆ. ಒಬ್ಬನೇ ಎಲ್ಲ ವಾರ್ಡ್ಗಳನ್ನು ಹೇಗೆ ಸ್ವಚ್ಛ ಮಾಡುವುದು ಎಂದು ಗುತ್ತಿಗೆ ಸ್ವೀಪರ್ರೊಬ್ಬರು ಹೇಳಿದ್ದಾರೆ. ಒಬ್ಬನೇ ಎಲ್ಲ ವಾರ್ಡ್ಗಳನ್ನು ನಿಭಾಯಿಸಲು ಸಾಧ್ಯವಿಲ್ಲ. ಈ ಬಗ್ಗೆ ಉನ್ನತ ಅಧಿಕಾರಿಗಳಿ ದೂರು ನೀಡಿದ್ದೇವು. ಆದರೆ ಯಾವುದೇ ಪ್ರಯೋಜವಾಗಿಲ್ಲ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 30ರಿಂದ 48 ಗಂಟೆಗಳ ಒಳಗೆ 16 ನವಜಾತ ಶಿಶುಗಳು ಸೇರಿದಂತೆ 31 ರೋಗಿಗಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸರ್ಕಾರವು ಈ ಘಟನೆಯ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳತ್ತದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ. ಆದರೆ ಯಾವುದೇ ಔಷಧಿ ಕೊರತೆಗಳು ಇಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ