ಮುಂಬೈ: ನಗರದಲ್ಲಿ ದಿನೇ ದಿನೇ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊವಿಡ್ ನಿಯಮ ಪಾಲಿಸದವರಿಗೆ ದಂಡ ವಿಧಿಸಲಾಗುತ್ತಿದೆ. ಒಂದು ತಿಂಗಳಲ್ಲಿ ಮಾಸ್ಕ್ ಧರಿಸದ 2 ಲಕ್ಷ ಜನರಿಗೆ ದಂಡ ವಿಧಿಸಲಾಗಿದ್ದು, ಒಟ್ಟು ₹ 4 ಕೋಟಿ ಹಣ ಸಂಗ್ರಹವಾಗಿದೆ ಎಂದು ಗುರುವಾರ ಮೂಲಗಳು ತಿಳಿಸಿವೆ. ಫೆಬ್ರವರಿ 20ರಿಂದ ದಂಡ ವಿಧಿಸಲಾಗುತ್ತಿದೆ ಎಂದು ಮುಂಬೈ ಡಿಸಿಪಿ ಎಸ್.ಚೈತನ್ಯ ಹೇಳಿಕೆ ನೀಡಿದ್ದಾರೆ.
ದಂಡ ವಿಧಿಸಿದ್ದರಿಂದ ಸಂಗ್ರಹಿಸಿದ ಹಣದ ಕುರಿತಾಗಿ ಮಾತನಾಡಿದ ಅವರು ಸಂಗ್ರಹಿಸಿದ ಶೇ 50ರಷ್ಟು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ಗೆ(ಬೆಮ್ಸಿ) ನೀಡಲಾಗುತ್ತದೆ. ಉಳಿದವುಗಳನ್ನು ಪೊಲೀಸ್ ವಿಭಾಗದ ಕಲ್ಯಾಣಕ್ಕೆ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.
ದಿನ ಸಾಗುತ್ತಿದ್ದಂತೆ ಕೊವಿಡ್ ಪ್ರಕರಣಗಳು ಹೆಚ್ಚುತ್ತಿವೆ.ಮುಂಬೈ ನಗರದಲ್ಲಿ ಒಟ್ಟು 39 ಕಂಟೈನ್ಮೆಂಟ್ ಝೋನ್ಗಳಿವೆ. ಇವುಗಳಲ್ಲಿ ಸ್ಲಂಗಳು ಸಹ ಒಳಗೊಂಡಿವೆ. ಹಾಗೂ 432 ಬಿಲ್ಡಿಂಗ್ಗಳನ್ನು ಸೀಲ್ಡೌನ್ ಮಾಡಲಾಗಿದೆ ಎಂದು ಮಾಹಿತಿ ದೊರೆತಿದೆ.
ಇದನ್ನೂ ಓದಿ: ಪ್ರಚಾರಕ್ಕಾಗಿ ಜನರ ಗುಂಪು ಸೇರಿಸುತ್ತಿರುವ ಸ್ಟಾರ್ಗಳಿಗೆ ಕೋವಿಡ್-19 ನಿಯಮಾವಳಿ ನೆನಪಿಸಿದ ಸುಧಾಕರ್!
ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ವಿರಾಮ ನೀಡಲು ಸುಪ್ರೀಂಕೋರ್ಟ್ ಸೂಚನೆ
Published On - 10:25 am, Fri, 26 March 21