ವಾರಾಣಸಿಯಲ್ಲಿ ಸೀರೆ ನೇಯ್ಗೆ ಘಟಕಕ್ಕೆ ಬೆಂಕಿ, 4 ಮಂದಿ ಸಜೀವ ದಹನ; ತಲಾ 4 ಲಕ್ಷ ರೂ.ಪರಿಹಾರ ಘೋಷಿಸಿದ ಯೋಗಿ ಆದಿತ್ಯನಾಥ್​

ಕಟ್ಟಡಕ್ಕೆ ಬೆಂಕಿಬೀಳುತ್ತಿದ್ದಂತೆ ಅದರಲ್ಲಿದ್ದ ಕಾರ್ಮಿಕರು ಸಹಾಯಕ್ಕಾಗಿ ಅರಚಿದ್ದಾರೆ. ಅದನ್ನು ಕೇಳಿ ಸ್ಥಳೀಯ ಒಂದಷ್ಟು ಮಂದಿ ಬೆಂಕಿಯನ್ನು ನಂದಿಸಲು ಬಂದರೂ ಅಷ್ಟರಲ್ಲಾಗಲೇ ಕಾಲ ಮಿಂಚಿತ್ತು.

ವಾರಾಣಸಿಯಲ್ಲಿ ಸೀರೆ ನೇಯ್ಗೆ ಘಟಕಕ್ಕೆ ಬೆಂಕಿ, 4 ಮಂದಿ ಸಜೀವ ದಹನ; ತಲಾ 4 ಲಕ್ಷ ರೂ.ಪರಿಹಾರ ಘೋಷಿಸಿದ ಯೋಗಿ ಆದಿತ್ಯನಾಥ್​
ಸ್ಥಳದ ಚಿತ್ರಣ
Follow us
TV9 Web
| Updated By: Lakshmi Hegde

Updated on: Apr 14, 2022 | 4:44 PM

ಉತ್ತರ ಪ್ರದೇಶದ ವಾರಾಣಸಿಯ ಆಷ್ಫಕ್​​ನಗರ ಕಾಲನಿಯಲ್ಲಿ ಸೀರೆ ನೇಯ್ಗೆ ಘಟಕವೊಂದಕ್ಕೆ ಬೆಂಕಿ ಬಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಈ  ಕೆಲಸದ ಕೋಣೆಯಲ್ಲಿ ಕಾರ್ಮಿಕರು ಅಡುಗೆ ಮಾಡಿಕೊಳ್ಳಲೆಂದು ಒಂದು ಚಿಕ್ಕ ಅಡುಗೆ ಕೋಣೆಯನ್ನೂ ಇಡಲಾಗಿದೆ. ಇಂದು ಬೆಳಗ್ಗೆ 11.30ರ ಹೊತ್ತಿಗೆ ಕೆಲವರು ಅಡುಗೆ ಮಾಡುತ್ತಿದ್ದರು. ಆಗ ವಿದ್ಯುತ್​ ವೈಯರ್​​ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ.  ಬೆಂಕಿಯಿಂದ ದಟ್ಟವಾದ ಹೊಗೆ ಆವರಿಸಿಕೊಂಡಿತ್ತು. ಈ ವೇಳೆ ಕಟ್ಟಡದೊಳಗೆ ಇದ್ದ ನಾಲ್ವರು ಅಲ್ಲಿಯೇ ಸಜೀವ ದಹನವಾಗಿದ್ದಾರೆ. ಮೃತರಲ್ಲಿ ಒಬ್ಬಾತ 45 ವರ್ಷದ ವ್ಯಕ್ತಿಯಾಗಿದ್ದು, ಇನ್ನೊಬ್ಬ ಅವರ ಪುತ್ರ. ಹಾಗೇ ಇನ್ನಿಬ್ಬರು ಬಿಹಾರ ಮೂಲದ ಕಾರ್ಮಿಕರು. 

ಕಟ್ಟಡಕ್ಕೆ ಬೆಂಕಿಬೀಳುತ್ತಿದ್ದಂತೆ ಅದರಲ್ಲಿದ್ದ ಕಾರ್ಮಿಕರು ಸಹಾಯಕ್ಕಾಗಿ ಅರಚಿದ್ದಾರೆ. ಅದನ್ನು ಕೇಳಿ ಸ್ಥಳೀಯ ಒಂದಷ್ಟು ಮಂದಿ ಬೆಂಕಿಯನ್ನು ನಂದಿಸಲು ಬಂದರೂ ಅಷ್ಟರಲ್ಲಾಗಲೇ ಕಾಲ ಮಿಂಚಿತ್ತು. ಮೃತದೇಹಗಳನ್ನು ಪೋಸ್ಟ್​ ಮಾರ್ಟಮ್​ಗೆ ಒಳಪಡಿಸಿದ ಬಳಿಕ, ಅವರ ಕುಟುಂಬಕ್ಕೆ ನೀಡಲಾಗಿದೆ. ಅಷ್ಟರಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಯೂ ಆಗಮಿಸಿದ್ದಾರೆ. ಇದೊಂದು ಸೀರೆ ಫಿನಿಶಿಂಗ್ ಮತ್ತು ಪ್ಯಾಕೇಜಿಂಗ್​  ವರ್ಕ್​ ಶಾಪ್​ ಆಗಿದ್ದರಿಂದ ಅಲ್ಲಿ ಸಿಂಥೆಟಿಕ್ ಬಟ್ಟೆಗಳು ಹೆಚ್ಚಾಗಿವೆ. ಹೀಗಾಗಿ ಬೆಂಕಿ ಶೀಘ್ರವೇ ಆವರಿಸಿದೆ. ಹಾಗೇ, ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂಪಾಯಿ ನೀಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಣೆ ಮಾಡಿದ್ದಾರೆ.

ನಿನ್ನೆ ರಾತ್ರಿ ಆಂಧ್ರಪ್ರದೇಶ ಎಲುರು ಜಿಲ್ಲೆಯಲ್ಲಿ ಭೀಕರ ಅಗ್ನಿದುರಂತ ನಡೆದಿದ್ದು ಅದರಲ್ಲಿ ಆರು ಮಂದಿ ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.  ಮಸುನೂರು ಮಂಡಲ್​​ನ ಅಕ್ಕಿರೆಡ್ಡಿ ಗುಡೆಮ್​​ನಲ್ಲಿರುವ ಪೋರಸ್​ ರಾಸಾಯಾನಿಕ ಕಾರ್ಖಾನೆಯಲ್ಲಿ ಗ್ಯಾಸ್​ ಸೋರಿಕೆಯಾಗಿ ಬೆಂಕಿ ದುರಂತ  ಉಂಟಾಗಿತ್ತು. ಅದರಲ್ಲಿ ಐದು ಜನ ಸಜೀವದಹನಗೊಂಡಿದ್ದರೆ,

ಇದನ್ನೂ ಓದಿ: ಈ ಜಾತ್ರೆಯಲ್ಲಿ ಭಕ್ತರು ಮುಳ್ಳು ಗದ್ದುಗೆಯ ಮೇಲೆ ನಡೆದು ಕುಣಿಯುತ್ತಾರೆ ಮತ್ತು ಕುಪ್ಪಳಿಸುತ್ತಾರೆ!

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್