ಇವರೆಂಥಾ ದುಬಾರಿ ಸಿಎಂ?-ಭಗವಂತ್​ ಮಾನ್​ ಪ್ರಮಾಣ ವಚನ ಸ್ವೀಕಾರಕ್ಕಾಗಿ 40 ಎಕರೆ ಗೋಧಿ ಬೆಳೆ ನಾಶ !

ಪಂಜಾಬ್​ ಸರ್ಕಾರ ಈಗಾಗಲೇ ಸಾಲದ ಸುಳಿಯಲ್ಲಿದೆ. ಹಾಗಿದ್ದಾಗ್ಯೂ ಒಂದು ತಾಸಿಗೂ ಕಡಿಮೆ ಅವಧಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕಾಗಿ ರಾಜ್ಯ ಸರ್ಕಾರ 2.61 ಕೋಟಿ ರೂಪಾಯಿ ಖರ್ಚು ಮಾಡಲಿದೆ ಎಂದೂ ವರದಿಯಾಗಿದೆ.

ಇವರೆಂಥಾ ದುಬಾರಿ ಸಿಎಂ?-ಭಗವಂತ್​ ಮಾನ್​ ಪ್ರಮಾಣ ವಚನ ಸ್ವೀಕಾರಕ್ಕಾಗಿ 40 ಎಕರೆ ಗೋಧಿ ಬೆಳೆ ನಾಶ !
ಭಗವಂತ್ ಮಾನ್​
Follow us
TV9 Web
| Updated By: Lakshmi Hegde

Updated on: Mar 15, 2022 | 5:53 PM

ಪಂಜಾಬ್​ನಲ್ಲಿ ಭಗವಂತ್ ಮಾನ್(Bhagwant Mann)​ ಮಾರ್ಚ್​ 16ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ (swearing-in) ಸ್ವೀಕಾರ ಮಾಡಲಿದ್ದಾರೆ. ಹೀಗಾಗಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಅದರಲ್ಲೂ ಮಾನ್​, ರಾಜಭವನದ ಬದಲು ಕ್ರಾಂತಿಕಾರಿ ಭಗತ್​ಸಿಂಗ್​ ಪೂರ್ವಜನ ಹಳ್ಳಿಯಾದ ಖಟ್ಕರ್​ಕಲಾನ್​​ನಲ್ಲಿ ಮುಖ್ಯಮಂತ್ರಿಯಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸುವರು. ಆದರೆ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಸುವುದಕ್ಕಾಗಿ ಸುಮಾರು 40 ಎಕರೆ ಪ್ರದೇಶದಲ್ಲಿ ಬೆಳೆದ ಗೋಧಿಯನ್ನು ನಾಶ ಮಾಡಲಾಗುತ್ತಿದೆ. ಸಿಎಂ ಪ್ರಮಾಣ ವಚನ ಕಾರ್ಯಕ್ರಮ ಅದ್ದೂರಿಯಾಗಿ ಮಾಡಲು ಆಪ್ ಸರ್ಕಾರ ನಿರ್ಧರಿಸಿದ್ದು, ಸಮಾರಂಭ ನಡೆಯಲಿರುವ ಸುತ್ತಲಿನ ಪ್ರದೇಶದಲ್ಲಿ ಪಾರ್ಕಿಂಗ್​ ವ್ಯವಸ್ಥೆ ಮಾಡುವುದಾಗಿ, ಗೋಧಿ ಬೆಳೆ ಕಟಾವು ಮಾಡುವಂತೆ ರೈತರಿಗೆ ಸೂಚನೆ ನೀಡಲಾಗಿದೆ. ಬೆಳೆಗಳನ್ನೂ ಇನ್ನೂ ಕಟಾವಿಗೆ ಬಾರದೆ ಇದ್ದರೂ, ಅವುಗಳನ್ನು ತೆಗೆಯಬೇಕಾಗಿದೆ ಎಂದು ಐಎಎನ್​ಎಸ್​ ವರದಿ ಮಾಡಿದೆ.

ಇನ್ನು ಪಂಜಾಬ್​ ಸರ್ಕಾರ ಈಗಾಗಲೇ ಸಾಲದ ಸುಳಿಯಲ್ಲಿದೆ. ಹಾಗಿದ್ದಾಗ್ಯೂ ಒಂದು ತಾಸಿಗೂ ಕಡಿಮೆ ಅವಧಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕಾಗಿ ರಾಜ್ಯ ಸರ್ಕಾರ 2.61 ಕೋಟಿ ರೂಪಾಯಿ ಖರ್ಚು ಮಾಡಲಿದೆ ಎಂದೂ ವರದಿಯಾಗಿದೆ. ಇನ್ನು ಸಮಾರಂಭಕ್ಕಾಗಿ ಅವಧಿ ಪೂರ್ವದಲ್ಲೇ ಬೆಳೆಯನ್ನು ಕಟಾವು ಮಾಡುವ ರೈತರಿಗೆ, ಎಕರೆಗೆ 46 ಸಾವಿರ ರೂಪಾಯಿ ಪರಿಹಾರ ನೀಡಲೂ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಈಗೆರಡು ದಿನಗಳಿಂದಲೂ ಈ ಬಗ್ಗೆ ಸುದ್ದಿಯಾಗುತ್ತಿದ್ದರೂ, ಅದನ್ನು ಪಂಜಾಬ್​ ಸರ್ಕಾರದ ಯಾವುದೇ ಅಧಿಕಾರಿಗಳು ಅದನ್ನು ತಳ್ಳಿ ಹಾಕಿಲ್ಲ.  ಒಟ್ಟಾರೆ ಭಗವಂತ್ ಮಾನ್​ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಭರ್ಜರಿ ಜನರು ಸೇರುವ ನಿರೀಕ್ಷೆಯಿದೆ.

ಖಟ್ಕಾರ್​ ಕಲಾನ್​ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿರುವ ಜಾಗ, ಅಲ್ಲಿನ ಸಿದ್ಧತೆಯನ್ನು  ಪಂಜಾಬ್ ಹೆಚ್ಚುವರಿ ಕಾರ್ಯದರ್ಶಿ ಎ.ವೇಣುಪ್ರಸಾದ್ ಪರಿಶೀಲನೆ ನಡೆಸಿದ್ದಾರೆ. ನಿನ್ನೆ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದ ಭಗವಂತ್ ಮಾನ್​, ನಾನು ನಿಮಗೆಲ್ಲ ಸಹೋದರನಿದ್ದಂತೆ. ಖಟ್ಕರ್​ಕಲಾನ್​​ನಲ್ಲಿ ಬೆಳಗ್ಗೆ 10ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ. ನೀವೆಲ್ಲ ಅಲ್ಲಿಗೆ ಬನ್ನಿ, ಮಹಿಳೆಯರು ಕೇಸರಿ ದುಪ್ಪಟ್ಟಾ, ಪುರುಷರು ಕೇಸರಿ ಪೇಟ ಧರಿಸಿ ಬನ್ನಿ. ಸಿಖ್​ ಧರ್ಮದಲ್ಲಿ ಕೇಸರಿಗೆ ತುಂಬ ಪ್ರಾಮುಖ್ಯತೆ ಇದೆ ಎಂದು ಹೇಳಿದ್ದರು.

ಇದನ್ನೂ ಓದಿ: ದೇವೇಗೌಡರ ಪುತ್ರಿ ಶೈಲಜಾ ಒಡೆತನದ ಕಟ್ಟಡದಲ್ಲಿ ಕಾಲು ಜಾರಿ ಬಿದ್ದು ಕಾರ್ಮಿಕ ಸಾವು

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು