Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾಗಿ 5ನೇ ದಿನಕ್ಕೆ ಅತ್ತೆ ಮಗನೊಂದಿಗೆ ಓಡಿ ಹೋದ ಯುವತಿ; ನನಗೆ ಹೆಂಡ್ತಿ ಬೇಕು ಎಂದು ಪದೇಪದೆ ಠಾಣೆಗೆ ಹೋಗುತ್ತಿರುವ ಪತಿ

ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇದು ಮನೆಯಲ್ಲೂ ಗೊತ್ತಿತ್ತು. ಆದರೆ ಇವರಿಬ್ಬರಿಗೂ ಮದುವೆಯಾಗಲು ಬಿಡಬಾರದು ಎಂಬ ಕಾರಣಕ್ಕೆ ಹುಡುಗಿಯ ಮದುವೆಯನ್ನು ಬೇರೊಬ್ಬನೊಂದಿಗೆ ನಿಶ್ಚಯಿಸಲಾಯಿತು. ಅದು ಗೊತ್ತಾಗುತ್ತಿದ್ದಂತೆ ಇವರಿಬ್ಬರೂ ಓಡಿಹೋಗಿದ್ದರು.

ಮದುವೆಯಾಗಿ 5ನೇ ದಿನಕ್ಕೆ ಅತ್ತೆ ಮಗನೊಂದಿಗೆ ಓಡಿ ಹೋದ ಯುವತಿ; ನನಗೆ ಹೆಂಡ್ತಿ ಬೇಕು ಎಂದು ಪದೇಪದೆ ಠಾಣೆಗೆ ಹೋಗುತ್ತಿರುವ ಪತಿ
ಪ್ರಾತಿನಿಧಿಕ
Follow us
Lakshmi Hegde
|

Updated on: Mar 21, 2021 | 5:20 PM

ಮನೆಯವರು ತೋರಿಸಿದ ಯುವಕನೊಂದಿಗೇ ಮದುವೆಯಾಗಿ, ಬಳಿಕ ಐದೇ ದಿನಕ್ಕೆ ತನ್ನ ಪ್ರಿಯಕರನೊಂದಿಗೆ ಓಡಿಹೋಗಿದ್ದಾಳೆ ಬಿಹಾರದಲ್ಲೊಬ್ಬಳು ಯುವತಿ. ಇಂಥದ್ದೊಂದು ವಿಚಿತ್ರ ಘಟನೆ ನಡೆದಿದ್ದು, ಗೋಪಾಲ್​ಗಂಜ್​ನಲ್ಲಿ. ಇದೀಗ ಮಂಜಾಗಡ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ. ಈ ಯುವತಿ ಅತ್ತೆಯ ಅಂದರೆ ತನ್ನ ತಂದೆಯ ಸೋದರಿಯ ಮಗನನ್ನು ಪ್ರೀತಿಸುತ್ತಿದ್ದಳು ಎಂಬುದು ಇವರಿಬ್ಬರೂ ಓಡಿಹೋದ ಬಳಿಕವಷ್ಟೇ ಗೊತ್ತಾಗಿದೆ.

ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇದು ಮನೆಯಲ್ಲೂ ಗೊತ್ತಿತ್ತು. ಆದರೆ ಇವರಿಬ್ಬರಿಗೂ ಮದುವೆಯಾಗಲು ಬಿಡಬಾರದು ಎಂಬ ಕಾರಣಕ್ಕೆ ಹುಡುಗಿಯ ಮದುವೆಯನ್ನು ಬೇರೊಬ್ಬನೊಂದಿಗೆ ನಿಶ್ಚಯಿಸಲಾಯಿತು. ಅದು ಗೊತ್ತಾಗುತ್ತಿದ್ದಂತೆ ಇವರಿಬ್ಬರೂ ಓಡಿಹೋಗಿದ್ದರು. ಆದರೆ ಆಗ ಇವರ ಕುಟುಂಬದವರು ಅವರನ್ನು ಮನವೊಲಿಸಿ ವಾಪಸ್​ ಕರೆಸಿದ್ದರು. ಹೀಗೆ ವಾಪಸ್​ ಬಂದ ಮೇಲೆ ಹುಡುಗಿಯ ವಿವಾಹವನ್ನೂ ಮಾಡಿಯೇಬಿಟ್ಟರು. ಆದರೆ ಮದುವೆಯಾದ ಮೇಲೆ ನಿಲ್ಲಲಿಲ್ಲ. ಕರೆಕ್ಟ್ ಆಗಿ 5ನೇ ದಿನಕ್ಕೆ ಈ ಜೋಡಿ ಕಾಣೆಯಾಗಿದೆ. ಆದರೆ ಯುವತಿಯ ಗಂಡ ನನಗೆ ಹೆಂಡತಿ ಬೇಕು ಎಂದು ಪಟ್ಟುಹಿಡಿದಿದ್ದಾನೆ. ದಿನದಿನ ಪೊಲೀಸ್​ ಠಾಣೆಗೆ ಹೋಗಿ ಪತ್ನಿಯನ್ನು ಹುಡುಕಿಕೊಡಿ ಎನ್ನುತ್ತಿದ್ದಾನೆ. ಈತ ನೀಡಿದ ದೂರಿನ ಅನ್ವಯ ಮೂವರ ವಿರುದ್ಧ ಎಫ್​ಐಆರ್​ ಕೂಡ ದಾಖಲಾಗಿದೆ.

ಪತಿ ನೀಡಿದ ದೂರಿನಲ್ಲಿ ಏನಿದೆ? ಅತ್ತೆ ಮಗನೊಂದಿಗೆ ಓಡಿಹೋದ ಯುವತಿಯ ಪತಿ ತನ್ನ ದೂರಿನಲ್ಲಿ ಘಟನೆಯ ಬಗ್ಗೆ ವಿವರಿಸಿದ್ದಾರೆ. ಮೊದಲು ನಿಶ್ಚಿತಾರ್ಥವಾದ ಎರಡೇ ದಿನಕ್ಕೆ ಆಕೆ ತನ್ನ ಸಂಬಂಧಿ ಯುವಕನೊಂದಿಗೆ ಓಡಿಹೋದಳು. ಆಗ ಅವರನ್ನು ವಾಪಸ್​ ಕರೆತರಲಾಗಿತ್ತು. ನಾವು ಯುವತಿ ಕುಟುಂಬದಿಂದ ವರದಕ್ಷಿಣೆಯನ್ನೂ ಪಡೆಯಲಿಲ್ಲ. ಮದುವೆಯಾಗಿ ಐದೇ ದಿನಕ್ಕೆ ಮತ್ತೆ ಓಡಿಹೋಗಿದ್ದಾಳೆ. ಆಕೆಯನ್ನು ಹುಡುಕಿ, ವಾಪಸ್​ ಕರೆತನ್ನಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಬು ಚಿಟ್ ಫಂಡ್ ಹೆಸರಲ್ಲಿ ವಂಚಿಸಿದ್ದ ಮೂವರ ಬಂಧನ

ಕಳೆದುಕೊಂಡ 78 ಮೊಬೈಲ್​ಗಳನ್ನ ಸಾರ್ವಜನಿಕರಿಗೆ ಮರಳಿಸಿದ ಅವಳಿ ನಗರದ ಖಾಕಿ ಪಡೆ!

ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ