ಕಂದಕಕ್ಕೆ ಉರುಳಿದ ಬಸ್, ಐವರ ಸಾವು

ದೆಹಲಿ: ಇಂದು ಬೆಳಿಗ್ಗೆ ಆಗ್ರಾ-ಲಕ್ನೋ ಹೆದ್ದಾರಿಯಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ನಿಯಂತ್ರಣ ತಪ್ಪಿ ಖಾಸಗಿ ಬಸ್ ಕಂದಕಕ್ಕೆ ಉರುಳಿದೆ. ಈ ಪರಿಣಾಮ ಐವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 40 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಘಾತ ಸಂಭವಿಸಿದಾಗ ಬಸ್ ಬಿಹಾರದ ದರ್ಭಂಗದಿಂದ ದೆಹಲಿಗೆ ಹೋಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ.

ಕಂದಕಕ್ಕೆ ಉರುಳಿದ ಬಸ್, ಐವರ ಸಾವು

Updated on: Jul 19, 2020 | 9:56 AM

ದೆಹಲಿ: ಇಂದು ಬೆಳಿಗ್ಗೆ ಆಗ್ರಾ-ಲಕ್ನೋ ಹೆದ್ದಾರಿಯಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ನಿಯಂತ್ರಣ ತಪ್ಪಿ ಖಾಸಗಿ ಬಸ್ ಕಂದಕಕ್ಕೆ ಉರುಳಿದೆ. ಈ ಪರಿಣಾಮ ಐವರು ಮೃತಪಟ್ಟಿದ್ದಾರೆ.

ಘಟನೆಯಲ್ಲಿ 40 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಘಾತ ಸಂಭವಿಸಿದಾಗ ಬಸ್ ಬಿಹಾರದ ದರ್ಭಂಗದಿಂದ ದೆಹಲಿಗೆ ಹೋಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ.