ಮಹಾರಾಷ್ಟ್ರದಲ್ಲಿ ‘ಮಹಾ’ ಆಘಾತ: 3ಲಕ್ಷದ ಗಡಿ ದಾಟಿದ ಸೋಂಕಿತರ ಸಂಖ್ಯೆ

ಕೊರೊನಾ ವೈರಸ್​ನಿಂದಾಗಿ ಮರಾಠರ ನಾಡು ಮಹಾರಾಷ್ಟ್ರ ಕಂಗೆಟ್ಟು ಹೋಗಿದೆ. ದೇಶದಲ್ಲಿ ಕಾಲು ಭಾಗ ಸೋಂಕಿತರು ಈ ರಾಜ್ಯದಲ್ಲೇ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 3,00,937ಕ್ಕೆ ಏರಿಕೆಯಾಗಿದೆ. ಕೇವಲ 24 ಗಂಟೆಗಳ ಅವಧಿಯಲ್ಲೇ 38,902 ಜನರಿಗೆ ಸೋಂಕು ವಕ್ಕರಿಸಿಕೊಂಡಿದ್ರೆ, 543 ಜನರು ಪ್ರಾಣ ಕಳೆದುಕೊಂಡಿದ್ದಾರೆ. 6,77,423 ಜನರು ಪ್ರಾಣ ಕಳೆದುಕೊಂಡಿದ್ದಾರೆ. ನಾಳೆ ಕೊವ್ಯಾಕ್ಸಿನ್ ಲಸಿಕೆ ಪ್ರಯೋಗ ಮದ್ದಿಲ್ಲದೇ ಇಡೀ ಜಗತ್ತನ್ನೇ ನರಳುವಂತೆ ಮಾಡಿರುವ ಕೊರೊನಾ ವೈರಸ್​ಗೆ, ಔಷಧಿ ಹುಡುಕಲು ಭಾರತ ಮುಂದಡಿ ಇಟ್ಟಿದೆ. ಐಸಿಎಂಆರ್ ನಿರ್ದೇಶನದಂತೆ ಭಾರತ್ ಬಯೋಟೆಕ್ ಜಂಟಿಯಾಗಿ […]

ಮಹಾರಾಷ್ಟ್ರದಲ್ಲಿ ‘ಮಹಾ’ ಆಘಾತ: 3ಲಕ್ಷದ ಗಡಿ ದಾಟಿದ ಸೋಂಕಿತರ ಸಂಖ್ಯೆ
Follow us
ಆಯೇಷಾ ಬಾನು
|

Updated on:Jul 19, 2020 | 3:31 PM

ಕೊರೊನಾ ವೈರಸ್​ನಿಂದಾಗಿ ಮರಾಠರ ನಾಡು ಮಹಾರಾಷ್ಟ್ರ ಕಂಗೆಟ್ಟು ಹೋಗಿದೆ. ದೇಶದಲ್ಲಿ ಕಾಲು ಭಾಗ ಸೋಂಕಿತರು ಈ ರಾಜ್ಯದಲ್ಲೇ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 3,00,937ಕ್ಕೆ ಏರಿಕೆಯಾಗಿದೆ. ಕೇವಲ 24 ಗಂಟೆಗಳ ಅವಧಿಯಲ್ಲೇ 38,902 ಜನರಿಗೆ ಸೋಂಕು ವಕ್ಕರಿಸಿಕೊಂಡಿದ್ರೆ, 543 ಜನರು ಪ್ರಾಣ ಕಳೆದುಕೊಂಡಿದ್ದಾರೆ. 6,77,423 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ನಾಳೆ ಕೊವ್ಯಾಕ್ಸಿನ್ ಲಸಿಕೆ ಪ್ರಯೋಗ ಮದ್ದಿಲ್ಲದೇ ಇಡೀ ಜಗತ್ತನ್ನೇ ನರಳುವಂತೆ ಮಾಡಿರುವ ಕೊರೊನಾ ವೈರಸ್​ಗೆ, ಔಷಧಿ ಹುಡುಕಲು ಭಾರತ ಮುಂದಡಿ ಇಟ್ಟಿದೆ. ಐಸಿಎಂಆರ್ ನಿರ್ದೇಶನದಂತೆ ಭಾರತ್ ಬಯೋಟೆಕ್ ಜಂಟಿಯಾಗಿ ಕೊವ್ಯಾಕ್ಸಿನ್ ಲಸಿಕೆ ಸಂಶೋಧನೆ ನಡೆಸಿದ್ದು, ನಾಳೆಯಿಂದ ಮಾನವನ ಮೇಲೆ ಲಸಿಕೆ ಪ್ರಯೋಗ ಶುರುವಾಗಲಿದೆ. ಲಸಿಕೆ ಪ್ರಯೋಗಕ್ಕೆ ನೋಂದಣಿ ಮಾಡಿಕೊಳ್ಳಲು ನಾಳೆಯಿಂದ ಸ್ವಯಂ ಸೇವಕರಿಗೆ ಆಹ್ವಾನಿಸಲಾಗಿದೆ.

ಅಕ್ಟೋಬರ್​ಗೆ ಮತ್ತೊಂದು ವ್ಯಾಕ್ಸಿನ್ ಭಾರತ್ ಬಯೋಟೆಕ್ ನಾಳೆಯಿಂದ ಕೊವ್ಯಾಕ್ಸಿನ್ ಲಸಿಕೆ ಪ್ರಯೋಗ ಮಾಡಿದ್ರೆ, ಪುಣೆ ಮೂಲದ ಜಿನ್ನೊವಾ ಬಯೋಫಾರ್ಮಟಿಕಲ್ಸ್​ ವತಿಯಿಂದ ಅಕ್ಟೋಬರ್ ವೇಳೆಗೆ ವ್ಯಾಕ್ಸಿನ್ ಪ್ರಯೋಗ ಮಾಡುವುದಾಗಿ ಹೇಳಿದೆ. ಮಾರ್ಚ್​ 2021 ರ ವೇಳೆಗೆ ಪ್ರಯೋಗದಲ್ಲಿ ಯಶಸ್ವಿಯಾಗುವ ಮುನ್ಸೂಚನೆ ನೀಡಿದೆ.

ಕೊರೊನಾ ಹೈರಾಣ ಭಾರತದಲ್ಲಿ ಕೊರೊನಾ ಆರ್ಭಟಕ್ಕೆ ಇಡೀ ದೇಶವೇ ತತ್ತರಿಸಿ ಹೋಗಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 10,77,864ಕ್ಕೆ ಏರಿಕೆಯಾಗಿದ್ರೆ, ಸೋಂಕಿನಿಂದ 26,828 ಜನರು ಬಲಿಯಾಗಿದ್ದಾರೆ. ಪ್ರಸ್ತುತ3,73,406 ಸೋಂಕಿತರು ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದು, 8,944 ಜನರ ಸ್ಥಿತಿ ಗಂಭೀರವಾಗಿದೆ. 6,77,630 ಜನರು ವೈರಸ್​ನಿಂದ ಗುಣಮುಖರಾಗಿದ್ದಾರೆ.

ಕೊರೊನಾ ಮರಣಮೃದಂಗ! ಹೆಮ್ಮಾರಿ ವೈರಸ್​ನ ಅಟ್ಟಹಾಸದಿಂದಾಗಿ ಭಾರತದಲ್ಲಿ ಮರಣಮೃದಂಗ ಬಾರಿಸುವಂತಾಗಿದೆ. ದೇಶದಲ್ಲಿ ಕೇವಲ 24 ಗಂಟೆಗಳ ಅವಧಿಯಲ್ಲಿ ಸೋಂಕಿನಿಂದ 545 ಜನರು ಪ್ರಾಣ ಕಳೆದುಕೊಂಡಿದ್ದಾರೆ. 24 ಗಂಟೆಗಳ ಅವಧಿಯಲ್ಲಿ ವಿಶ್ವದಾದ್ಯಂತ 2.24 ಲಕ್ಷ ಸೋಂಕಿತರು ಪತ್ತೆಯಾಗಿದ್ರೆ, 5 ಸಾವಿರ ಜನರು ಬಲಿಯಾಗಿದ್ದಾರೆ. ದೆಹಲಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಕೊರೊನಾದಿಂದ ಗುಣಮುಖರಾಗಿದ್ದು, ಸೋಂಕಿತರರಲ್ಲಿ ಶೇ83 ರಷ್ಟು ಮಂದಿ ಗುಣಮುಖರಾಗಿದ್ದಾರೆ.

‘ಬಿಜೆಪಿಯಿಂದ ಸುಳ್ಳುಗಳ ಸರಮಾಲೆ’ ಭಾರತದಲ್ಲಿ ಕೊರೊನಾ ವೈರಸ್ ಶರವೇಗದಲ್ಲಿ ಮುನ್ನುಗ್ಗುತ್ತಿದ್ದು, ಸೋಂಕಿನಿಂದ ಮೃತಪಡೋರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದ್ರೆ ಬಿಜೆಪಿ ಸರ್ಕಾರ ಮಾತ್ರ ಕೊರೊನಾದಿಂದ ಮೃತಪಟ್ಟವರ ಅಂಕೆ ಸಂಖ್ಯೆಯನ್ನ ಮುಚ್ಚಿಡುವ ಮೂಲಕ ಸುಳ್ಳನ್ನ ಸಾಂಸ್ಥಿಕರಣ ಮಾಡುತ್ತಿದೆ ಅಂತಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ. ಟ್ವೀಟ್ ಮೂಲಕ ಸೋಂಕಿನ ಸುಳ್ಳಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಕಲಿ ಸರ್ಟಿಫಿಕೆಟ್​ ಹಾವಳಿ ಉತ್ತರಕಾಂಡ್​ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದ್ದು, ಸೋಂಕಿತರ ಸಂಖ್ಯೆ 4,102ಕ್ಕೆ ಏರಿಕೆಯಾಗಿದ್ರೆ, 51 ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗಲು ಅನ್ಯ ರಾಜ್ಯದಿಂದ ಬರುವವರು ನಕಲಿ ಕೊವಿಡ್ ಟೆಸ್ಟ್ ಪ್ರಮಾಣವನ್ನ ತೋರಿಸಿ ಬರ್ತಿದ್ದಾರಂತೆ. ಇದರಿಂದಲೇ ಸೋಂಕಿನ ಪ್ರಮಾಣ ಹೆಚ್ಚಾಗಲು ಕಾರಣ ಅಂತಾ ಉತ್ತರಕಾಂಡ್​ನ ಸಿಎಂ ಟಿ.ಎಸ್. ರಾವತ್ ಹೇಳಿದ್ದಾರೆ.

ಕೊರೊನಾ ‘ಬಂಗಾಳ’ ಪಶ್ಚಿಮ ಬಂಗಾಳದಲ್ಲಿ ಕ್ರೂರಿ ಕೊರೊನಾ ವೈರಸ್ ರಣಕೇಕೆ ಹಾಕ್ತಿದ್ದು, ಸೋಂಕಿತರ ಸಂಖ್ಯೆ 40 ಸಾವಿರಕ್ಕೆ ಏರಿಕೆಯಾಗಿದೆ, ಸೋಂಕಿನಿಂದ ನರಳಿ 1 ಸಾವಿರದ 49 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆಘಾತಕಾರಿ ವಿಚಾರ ಅಂದ್ರೆ, ಒಂದೇ ದಿನ 2 ಸಾವಿರ ಕೇಸ್​ಗಳು ಪತ್ತೆಯಾಗಿದ್ದು, ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ವೈರಸ್ ವಿರುದ್ಧ ಹೋರಾಡಿ 22,253 ಜನರು ಗುಣಮುಖರಾಗಿದ್ದಾರೆ.

ಕೊರೊನಾ ತೆಲಂ‘ಗಾಣ’..! ತೆಲಂಗಾಣ ರಾಜ್ಯದಲ್ಲಿ ಸೋಂಕಿತರ ಪಾಲಿಗೆ ಕೊರೊನಾ ವೈರಸ್ ಗಾಣದಂತಾಗಿದೆ. ದಿನೇ ದಿನೆ ಸೋಂಕಿತರನ್ನ ತನ್ನ ತೆಕ್ಕೆಗೆ ಎಳೆದುಕೊಳ್ಳುತ್ತಿದ್ದು, ಸೋಂಕಿತರ ಸಂಖ್ಯೆ 44 ಸಾವಿರ ಗಡಿ ಸಮೀಪಿಸಿದೆ. ತೆಲಂಗಾಣದಲ್ಲಿ 24ಗಂಟೆಗಳಲ್ಲಿ 1, 284 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ರಾಜಧಾನಿ ಹೈದರಾಬಾದ್ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 667 ಕೇಸುಗಳ ದಾಖಲಾಗಿವೆ. ಹೈದರಾಬಾದ್ ಮಹಾನಗರ ವ್ಯಾಪ್ತಿಯಲ್ಲಿ 29,736ಕೇಸ್​ಗಳು ದಾಖಲಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

Published On - 3:29 pm, Sun, 19 July 20

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?