Bharat Jodo: ಕಾಂಗ್ರೆಸ್​ನ ಭಾರತ್ ಜೋಡೋ ಯಾತ್ರೆಯಲ್ಲಿ ಓರ್ವ ವೈದ್ಯ ಸೇರಿ ಐವರು ಕನ್ನಡಿಗರು ಭಾಗಿ

| Updated By: ನಯನಾ ರಾಜೀವ್

Updated on: Sep 04, 2022 | 1:46 PM

ಕಾಂಗ್ರೆಸ್​ನ ಭಾರತ್ ಜೋಡೋ ಯಾತ್ರೆಗೆ ಭರದ ಸಿದ್ಧತೆ ನಡೆಯುತ್ತಿದೆ. ಯಾತ್ರೆಯಲ್ಲಿ ಓರ್ವ ವೈದ್ಯ ಸೇರಿ ಐವರು ಕನ್ನಡಿಗರು ಇರಲಿದ್ದಾರೆ.

Bharat Jodo: ಕಾಂಗ್ರೆಸ್​ನ ಭಾರತ್ ಜೋಡೋ ಯಾತ್ರೆಯಲ್ಲಿ  ಓರ್ವ ವೈದ್ಯ ಸೇರಿ ಐವರು ಕನ್ನಡಿಗರು ಭಾಗಿ
Bharat Jodo
Follow us on

ಕಾಂಗ್ರೆಸ್​ನ ಭಾರತ್ ಜೋಡೋ ಯಾತ್ರೆಗೆ ಭರದ ಸಿದ್ಧತೆ ನಡೆಯುತ್ತಿದೆ. ಯಾತ್ರೆಯಲ್ಲಿ ಓರ್ವ ವೈದ್ಯ ಸೇರಿ ಐವರು ಕನ್ನಡಿಗರು ಇರಲಿದ್ದಾರೆ. 117 ಮಂದಿ ಕಾಂಗ್ರೆಸ್ ನಾಯಕರ ಪೈಕಿ 9 ಮಂದಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,700 ಕಿ.ಮೀ ವಿಸ್ತೀರ್ಣದಲ್ಲಿ ಪಾದಯಾತ್ರೆ ನಡೆಯಲಿದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ರಾಜಸ್ತಾನದಿಂದ ಯಾತ್ರೆ ಪ್ರಾರಂಭಿಸಲಿದ್ದಾರೆ.

ಭಾರತ್ ಜೋಡೋ ಪಾದಯಾತ್ರೆಯಲ್ಲಿ ಭಾಗವಹಿಸುವ ನಾಯಕರ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಯಾತ್ರೆಯು ಇದೇ ಸೆಪ್ಟೆಂಬರ್ 8ರಂದು ಆರಂಭವಾಗಲಿದ್ದು, ರಾಜಸ್ತಾನದ ಜಲವಾರ್, ಕೋಟ, ಡೌಸ ಮತ್ತು ಅಲ್ವರ್ ಜಿಲ್ಲೆಗಳ ಮೂಲಕ ಸಾಗಲಿದೆ.

ರಾಜಸ್ತಾನದಿಂದ ಪ್ರಾತಿನಿಧ್ಯವನ್ನು ಶ್ರವಣ್ ಕುಮಾರ್ ಗುರ್ಜಾರ್, ಜಬರ್ ಶೆರಾವಟ್, ಸೀತಾರಾಮ್ ಲಂಬ, ಯೋಗೇಶ್ ಕುಮಾರ್ ಮೀನಾ, ರೂಬಿ ಖಾನ್, ವಿವೇಕ್ ಭಟ್ನಾಗರ್, ಜಗದೀಶ್ ಬಿಶ್ನೊಯ್ ಮತ್ತು ಶತ್ರುಘನ್ ಶರ್ಮ ವಹಿಸಲಿದ್ದಾರೆ.

ಕರ್ನಾಟಕದಿಂದ ಯಾತ್ರೆಯ ಬಗ್ಗೆ ವಿವರ ನೀಡಿದ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್, ರಾಜ್ಯದಿಂದ ಪಕ್ಷದ ಪ್ರತಿಯೊಬ್ಬ ಶಾಸಕರು 5 ಸಾವಿರ ಜನರನ್ನು ಸೇರಿಸುವಂತೆ ಕೇಳಿಕೊಳ್ಳಲಾಗಿದ್ದು ರಾಜ್ಯದಲ್ಲಿ 21 ದಿನಗಳ ಕಾಲ ಯಾತ್ರೆ ನಡೆಯಲಿದೆ.

ಕರ್ನಾಟಕದಿಂದ ಯಾತ್ರೆಯ ಬಗ್ಗೆ ವಿವರ ನೀಡಿದ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್, ರಾಜ್ಯದಿಂದ ಪಕ್ಷದ ಪ್ರತಿಯೊಬ್ಬ ಶಾಸಕರು 5 ಸಾವಿರ ಜನರನ್ನು ಸೇರಿಸುವಂತೆ ಕೇಳಿಕೊಳ್ಳಲಾಗಿದ್ದು ರಾಜ್ಯದಲ್ಲಿ 21 ದಿನಗಳ ಕಾಲ ಯಾತ್ರೆ ನಡೆಯಲಿದೆ.

ಕರ್ನಾಟಕದ 5 ಮಂದಿ: ಡಾ. ಸುಶ್ರುತಾ ಹೆಡ್ನಾ, ಎಸ್​. ಪ್ಯಾರಿ ಜಾನ್, ಶ್ರೀಜಿತ್ ಡಿಎಲ್​ ಹಾಗೂ ಚನ್ನಬಸಪ್ಪ ಎಸ್ ಜಾಗಲಿ ಪಾಲ್ಗೊಳ್ಳಲಿದ್ದಾರೆ.