ಛತ್ತೀಸ್‌ಗಢದ ಇಟ್ಟಿಗೆ ಗೂಡಿನಲ್ಲಿ ಮಲಗಿದ್ದ ಐವರು ಕಾರ್ಮಿಕರು ಉಸಿರುಗಟ್ಟಿ ಸಾವು
ಕಾರ್ಮಿಕರು ತಾವು ನಿರ್ಮಿಸಿದಇಟ್ಟಿಗೆಗಳ ಮೇಲೆ ಮಲಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಕ್ರಮವಾಗಿ ಗೂಡು ನಡೆಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಭೋಪಾಲ್: ಛತ್ತೀಸ್‌ಗಢದ (Chhattisgarh) ಮಹಾಸಮುಂಡ್ ಜಿಲ್ಲೆಯಲ್ಲಿ ಇಟ್ಟಿಗೆ ಒಣಗಿಸುವ ಗೂಡಿನಲ್ಲಿ ಕನಿಷ್ಠ ಐವರು ಕಾರ್ಮಿಕರು ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಟ್ಟಿಗೆ (bricks) ತಯಾರಿಸಲು ಬಳಸಿದ ಬೆಂಕಿಯ ಹೊಗೆಯಿಂದಾಗಿ ಕಾರ್ಮಿಕರಿಗೆ ಉಸಿರುಗಟ್ಟಿದೆ. ಸಾವಿಗೀಡಾದ ಐವರು ಕಾರ್ಮಿಕರು ಮಹಾಸಮುಂಡ್ ಜಿಲ್ಲೆಯ ಗಧ್‌ಫುಲಾಝರ್ ಗ್ರಾಮದ ನಿವಾಸಿಗಳು. ಅಪಘಾತದಲ್ಲಿ ಮತ್ತೊಬ್ಬ ಕಾರ್ಮಿಕ ಗಾಯಗೊಂಡಿದ್ದಾರೆ.
ಕಾರ್ಮಿಕರು ತಾವು ನಿರ್ಮಿಸಿದ ಇಟ್ಟಿಗೆಗಳ ಮೇಲೆ ಮಲಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಕ್ರಮವಾಗಿ ಗೂಡು ನಡೆಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
Chhattisgarh | Five people suffocated to death at a brick kiln in Mahasamund district.
CM Bhupesh Baghel condoles the demises, announces Rs 2 Lakhs each as compensation for their kins. pic.twitter.com/0gMZooxHZ0
— ANI MP/CG/Rajasthan (@ANI_MP_CG_RJ) March 15, 2023
ಮೃತರಿಗೆ ಸಂತಾಪ ಸೂಚಿಸಿದ ಸಿಎಂ ಭೂಪೇಶ್ ಬಘೇಲ್ ಮೃತರ ಕುಟುಂಬದವರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಆರು ಕಾರ್ಮಿಕರು ಮಂಗಳವಾರ ರಾತ್ರಿ ಬಿಸಿ ಮಾಡಲ ಮಣ್ಣಿನ ಇಟ್ಟಿಗೆಗಳನ್ನು ಒಲೆಯಲ್ಲಿ ಹಾಕಿ ಅದರ ಮೇಲೆ ಮಲಗಿದ್ದರು. ಅವರಲ್ಲಿ, ಐವರು ಬೆಳಿಗ್ಗೆ ಸಾವನ್ನಪ್ಪಿದ್ದಾರೆ ಉಸಿರುಗಟ್ಟುವಿಕೆಯಿಂದ ಈ ಸಾವು ಸಂಭವಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ. ಇತರ ಕಾರ್ಮಿಕರು ಸ್ಥಳಕ್ಕೆ ಆಗಮಿಸಿ ಅವರನ್ನು ಎಬ್ಬಿಸಲು ಪ್ರಯತ್ನಿಸಿದಾಗ ಅಪಘಾತ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು. ಮತೊಬ್ಬ ಕೆಲಸಗಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಟಿಪ್ಪುವನ್ನು ಉರಿಗೌಡ ನಂಜೇಗೌಡ ಕೊಂದ್ರಾ? ಯಾರಿವರು? ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್ ಹೇಳಿದ್ದಿಷ್ಟು
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:55 pm, Wed, 15 March 23