106 ಕೆ.ಜಿ ತೂಕದ ಮಹಿಳೆಯ ಅಂಡಾಶಯದಲ್ಲಿ 50 ಕೆ.ಜಿ ಗಡ್ಡೆ.. ವೈದ್ಯರಿಗೆ ಶಾಕ್​, ಎಲ್ಲಿ?

| Updated By: KUSHAL V

Updated on: Aug 23, 2020 | 5:01 PM

ದೆಹಲಿ: ನಗರದ ನಿವಾಸಿಯಾಗಿದ್ದ 52 ವರ್ಷದ ಮಹಿಳೆಯೊಬ್ಬಳ ದೇಹದಲ್ಲಿ ಬರೋಬ್ಬರಿ 50 ಕೆ.ಜಿ ತೂಕದ ಗಡ್ಡೆ ಪತ್ತೆಯಾಗಿರುವ ಸ್ವಾರಸ್ಯಕರ ಪ್ರಸಂಗ ಬೆಳಕಿಗೆ ಬಂದಿದೆ. ಮಹಿಳೆಗೆ ಕೆಲವು ತಿಂಗಳಿಂದ ತನ್ನ ತೂಕದಲ್ಲಿ ವಿಪರೀತ ಏರಿಕೆ ಕಾಣಿಸಿಕೊಂಡಿತ್ತು. ಹೀಗಾಗಿ, ಗಾಬರಿಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಈ ಕುರಿತು ವೈದ್ಯರ ಬಳಿ ತೋರಿಸಿಕೊಂಡಾಗ ಗಡ್ಡೆಯಿರುವುದು ತಿಳಿದುಬಂದಿದೆ. ಕೆಲವೇ ತಿಂಗಳಲ್ಲಿ ಮಹಿಳೆಯ ತೂಕ 106 ಕೆ.ಜಿಗೆ ಏರಿಕೆಯಾಗಿತ್ತು. ಇದರಿಂದ ಮಹಿಳೆಗೆ ತೀವ್ರ ಉಸಿರಾಟದ ತೊಂದರೆ ಹಾಗೂ ವಿಪರೀತ ಹೊಟ್ಟೆ ನೋವು ಪ್ರಾರಂಭವಾಗಿತ್ತು. ಇದರಿಂದ ಮಹಿಳೆಗೆ ನಡೆದಾಡಲು […]

106 ಕೆ.ಜಿ ತೂಕದ ಮಹಿಳೆಯ ಅಂಡಾಶಯದಲ್ಲಿ 50 ಕೆ.ಜಿ ಗಡ್ಡೆ.. ವೈದ್ಯರಿಗೆ ಶಾಕ್​, ಎಲ್ಲಿ?
Follow us on

ದೆಹಲಿ: ನಗರದ ನಿವಾಸಿಯಾಗಿದ್ದ 52 ವರ್ಷದ ಮಹಿಳೆಯೊಬ್ಬಳ ದೇಹದಲ್ಲಿ ಬರೋಬ್ಬರಿ 50 ಕೆ.ಜಿ ತೂಕದ ಗಡ್ಡೆ ಪತ್ತೆಯಾಗಿರುವ ಸ್ವಾರಸ್ಯಕರ ಪ್ರಸಂಗ ಬೆಳಕಿಗೆ ಬಂದಿದೆ. ಮಹಿಳೆಗೆ ಕೆಲವು ತಿಂಗಳಿಂದ ತನ್ನ ತೂಕದಲ್ಲಿ ವಿಪರೀತ ಏರಿಕೆ ಕಾಣಿಸಿಕೊಂಡಿತ್ತು. ಹೀಗಾಗಿ, ಗಾಬರಿಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಈ ಕುರಿತು ವೈದ್ಯರ ಬಳಿ ತೋರಿಸಿಕೊಂಡಾಗ ಗಡ್ಡೆಯಿರುವುದು ತಿಳಿದುಬಂದಿದೆ.

ಕೆಲವೇ ತಿಂಗಳಲ್ಲಿ ಮಹಿಳೆಯ ತೂಕ 106 ಕೆ.ಜಿಗೆ ಏರಿಕೆಯಾಗಿತ್ತು. ಇದರಿಂದ ಮಹಿಳೆಗೆ ತೀವ್ರ ಉಸಿರಾಟದ ತೊಂದರೆ ಹಾಗೂ ವಿಪರೀತ ಹೊಟ್ಟೆ ನೋವು ಪ್ರಾರಂಭವಾಗಿತ್ತು. ಇದರಿಂದ ಮಹಿಳೆಗೆ ನಡೆದಾಡಲು ಹಾಗೂ ನಿದ್ರೆ ಮಾಡಲು ಕಷ್ಟವಾಗುತ್ತಿತ್ತಂತೆ. ಹಾಗಾಗಿ, ಕುಟುಂಬಸ್ಥರು ಮಹಿಳೆಯನ್ನು ನಗರದ ಇಂದ್ರಪ್ರಸ್ಥದಲ್ಲಿರುವ ಅಪೋಲೋ ಆಸ್ಪತ್ರೆಗೆ ಸೇರಿಸಿದ್ದರು. ವೈದ್ಯರ ತಪಾಸಣೆ ವೇಳೆ ಮಹಿಳೆಯ ಅಂಡಾಶಯದಲ್ಲಿ ಬರೋಬ್ಬರಿ 50 ಕೆ.ಜಿ ತೂಕದ ಗಡ್ಡೆ ಪತ್ತೆಯಾಗಿದೆ.

ಕೂಡಲೇ, ಆಸ್ಪತ್ರೆಯ ವೈದ್ಯರು ಮಹಿಳೆಗೆ ಮೂರೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆಯನ್ನುಹೊರತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿದ ತಜ್ಞರ ತಂಡವು ಇದು ವಿಶ್ವದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾದ ಅತಿದೊಡ್ಡ ಗಡ್ಡೆ ಎಂದು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಇದೀಗ ಮಹಿಳೆಯ ತೂಕ 56 ಕೆ.ಜಿಗೆ ಇಳಿದಿದೆ. ಶಸ್ತ್ರಚಿಕಿತ್ಸೆಯಿಂದ ಮಹಿಳೆಯು ಚೇತರಿಸಿಕೊಂಡಿದ್ದು ಆಗಸ್ಟ್ 22 ರಂದು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

2017 ರಲ್ಲಿ ಕೊಯಂಬತ್ತೂರಿನ ಮಹಿಳೆಯೊಬ್ಬಳ ಅಂಡಾಶಯದಲ್ಲಿ ಬೆಳೆದಿದ್ದ 34 ಕೆ.ಜಿ ಗಡ್ಡೆಯನ್ನು,  ಶಸ್ತ್ರಚಿಕಿತ್ಸೆಗೆ ಒಳಪಡಿಸಿ ತೆಗೆಯಲಾಗಿತ್ತು ಎಂಬ ಮಾಹಿತಿ ಸಹ ದೊರೆತಿದೆ.