ದೆಹಲಿ: ಕೊರೊನಾ ಲಸಿಕೆ ಪಡೆದ 51 ಜನರಿಗೆ ಅಲರ್ಜಿ, ಓರ್ವನ ಸ್ಥಿತಿ ಗಂಭೀರ

|

Updated on: Jan 17, 2021 | 7:36 PM

ಸಣ್ಣಪುಟ್ಟ ಅಲರ್ಜಿಗೆ ತುತ್ತಾದವರನ್ನು ಆಸ್ಪತ್ರೆಗೆ ದಾಖಲು ಮಾಡಿಲ್ಲ. ಅವರ ಮೇಲೆ ನಾವು ನಿಗಾ ಇಟ್ಟಿದ್ದೇವೆ. ಆರೋಗ್ಯ ಸ್ಥಿತಿ ಗಂಭೀರವಾದ ವ್ಯಕ್ತಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಅವರ ಆರೋಗ್ಯ ಚೇತರಿಕೆ ಕಾಣುವ ಭರವಸೆ ಇದೆ ಎಂದು ಸತ್ಯೇಂದರ್​ ಜೈನ್ ತಿಳಿಸಿದ್ದಾರೆ.

ದೆಹಲಿ: ಕೊರೊನಾ ಲಸಿಕೆ ಪಡೆದ 51 ಜನರಿಗೆ ಅಲರ್ಜಿ, ಓರ್ವನ ಸ್ಥಿತಿ ಗಂಭೀರ
ಕೊರೊನಾ ಲಸಿಕೆ
Follow us on

ದೆಹಲಿ: ದೆಹಲಿಯಲ್ಲಿ ಕೊರೊನಾ ಲಸಿಕೆ ಪಡೆದ 51 ಜನರಿಗೆ ಅಲರ್ಜಿ ಉಂಟಾಗಿದೆ. ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್​ ಜೈನ್​ ಭಾನುವಾರ ತಿಳಿಸಿದ್ದಾರೆ.

ಈ ಬಗ್ಗೆ ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸತ್ಯೇಂದರ್​ ಜೈನ್, ದೆಹಲಿಯಲ್ಲಿ 4,319 ಆರೋಗ್ಯ ಸಿಬ್ಬಂದಿಗೆ ಕೊರೊನಾ ಔಷಧ ನೀಡಲಾಗಿತ್ತು. ಈ ಪೈಕಿ 51 ಜನರಿಗೆ ಸಣ್ಣ-ಪುಟ್ಟ ಅಲರ್ಜಿ ಸಮಸ್ಯೆ ಉಂಟಾಗಿದೆ. ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಣ್ಣಪುಟ್ಟ ಅಲರ್ಜಿಗೆ ತುತ್ತಾದವರನ್ನು ಆಸ್ಪತ್ರೆಗೆ ದಾಖಲು ಮಾಡಿಲ್ಲ. ಅವರ ಮೇಲೆ ನಾವು ನಿಗಾ ಇಟ್ಟಿದ್ದೇವೆ. ಆರೋಗ್ಯ ಸ್ಥಿತಿ ಗಂಭೀರವಾದ ವ್ಯಕ್ತಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಅವರ ಆರೋಗ್ಯ ಚೇತರಿಕೆ ಕಾಣುವ ಭರವಸೆ ಇದೆ ಎಂದು ಸತ್ಯೇಂದರ್​ ಜೈನ್ ತಿಳಿಸಿದ್ದಾರೆ.

ಕೊವಿಡ್ ಲಸಿಕೆ: ಇಂದು 4 ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ನೀಡುವ ಅಭಿಯಾನ..