ಮದುವೆಯ ಹೆಸರಿನಲ್ಲಿ 50 ಯುವತಿಯರಿಗೆ ಯಾಮಾರಿಸಿದ ಖತರ್ನಾಕ್​ ಆಸಾಮಿ! ಬೆಂಗಳೂರಿಗೂ ಇದೆ ಲಿಂಕ್​

ಇತ್ತೀಚೆಗೆ ಗುರುಗ್ರಾಮ್‌ನಲ್ಲಿ ಮಹಿಳೆಯೊಬ್ಬರು ಪ್ರಕರಣವನ್ನು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಮದುವೆಯಾದ ಮೂರು ದಿನಗಳ ನಂತರ ಆರೋಪಿಯು ಮಹಿಳೆಯ ಚಿನ್ನಾಭರಣ ಸೇರಿದಂತೆ 20 ಲಕ್ಷ ರೂಪಾಯಿ ವಂಚಿಸಿ ಪರಾರಿಯಾಗಿದ್ದ.

ಮದುವೆಯ ಹೆಸರಿನಲ್ಲಿ 50 ಯುವತಿಯರಿಗೆ ಯಾಮಾರಿಸಿದ ಖತರ್ನಾಕ್​ ಆಸಾಮಿ! ಬೆಂಗಳೂರಿಗೂ ಇದೆ ಲಿಂಕ್​
50 ಯುವತಿಯರಿಗೆ ಯಾಮಾರಿಸಿದ ಖತರ್ನಾಕ್​ ಆಸಾಮಿ
Follow us
ಸಾಧು ಶ್ರೀನಾಥ್​
|

Updated on:Jun 11, 2023 | 12:35 PM

ಗುರುಗ್ರಾಮ: 20 ವರ್ಷಗಳ ಅವಧಿಯಲ್ಲಿ ವಿವಿಧ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳ (Matrimonial App) ಮೂಲಕ 50 ಮಹಿಳೆಯರನ್ನು ಮದುವೆಯಾಗಿ ನಂಬಿಸಿ, ಲಕ್ಷ ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ 55 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಗುರುಗ್ರಾಮ ಪೊಲೀಸರು ತಿಳಿಸಿದ್ದಾರೆ. ಜೆಮ್‌ಶೆಡ್‌ಪುರ ಮೂಲದ (native of Jamshedpur) ತಪೇಶ್‌ನನ್ನು ಗುರುಗ್ರಾಮ್ ಪೊಲೀಸರು (Gurugram police) ಗುರುವಾರ ಒಡಿಶಾದಲ್ಲಿ (Odisha) ಬಂಧಿಸಿದ್ದಾರೆ. ಆರೋಪಿಗೆ 1992ರಲ್ಲಿ ಕೋಲ್ಕತ್ತಾದಲ್ಲಿ ಮೊದಲ ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆರೋಪಿಯು 2000 ಇಸ್ವಿಯಲ್ಲಿ ಕಣ್ಮರೆಯಾದ. ಆಮೇಲೆ ತನ್ನ ಪತ್ನಿ ಮತ್ತು ಪುತ್ರಿಯರನ್ನೂ ತೊರೆದಿದ್ದಾನೆ.

ಇತ್ತೀಚೆಗೆ ಗುರುಗ್ರಾಮ್‌ನಲ್ಲಿ ಮಹಿಳೆಯೊಬ್ಬರು ಪ್ರಕರಣವನ್ನು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅದರಲ್ಲಿ ಅವರು ಮ್ಯಾರೇಜ್ ಆ್ಯಪ್ ಮೂಲಕ ಆರೋಪಿಯನ್ನು ಭೇಟಿಯಾಗಿದ್ದು, ತಾವಿಬ್ಬರೂ ಶಾಸ್ತ್ರೋಕ್ತವಾಗಿ ವಿವಾಹ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಆದರೆ ಮದುವೆಯಾದ ಮೂರು ದಿನಗಳ ನಂತರ ಆರೋಪಿಯು ಮಹಿಳೆಯ ಚಿನ್ನಾಭರಣ ಸೇರಿದಂತೆ 20 ಲಕ್ಷ ರೂಪಾಯಿ ವಂಚಿಸಿ ಪರಾರಿಯಾಗಿದ್ದ.

Also Read: ಸುಸಂಸ್ಕೃತ, ದೇಶಭಕ್ತ ಶಿಶುಗಳ ಜನನಕ್ಕಾಗಿ ಗರ್ಭ ಸಂಸ್ಕಾರ ಅಭಿಯಾನ, ಗರ್ಭಿಣಿಯರಿಗೆ ಭಗವದ್ಗೀತೆ, ರಾಮಾಯಣ ಪಾಠ

ಈ ನಡುವೆ ಆರೋಪಿಯು ಬೆಂಗಳೂರಿಗೆ ತೆರಳಿ ‘ಸ್ಮಾರ್ಟ್ ಹೈರ್ ಸೊಲ್ಯೂಷನ್’ ಎಂಬ ಹೆಸರಿನ ಉದ್ಯೋಗ ನಿಯೋಜನೆ ಏಜೆನ್ಸಿ ತೆರೆದಿರುವುದು ತನಿಖೆಯ ವೇಳೆ ಪೊಲೀಸರಿಗೆ ತಿಳಿದು ಬಂದಿದೆ. ಆರೋಪಿಯು ಕೆಲಸ ಕೊಡಿಸುವುದಾಗಿ ಪುರುಷ ಮತ್ತು ಮಹಿಳೆಯರಿಗೆ ವಂಚಿಸುತ್ತಿದ್ದ. ಆದರೆ ಈ ವಂಚನೆಯ ಕೃತ್ಯ ಹೆಚ್ಚು ದಿನ ನಡೆಯದೇ ಇದ್ದಾಗ ಶಾದಿ ಆ್ಯಪ್ ಮೂಲಕ ವಿಚ್ಛೇದಿತ, ವಿಧವೆ ಮತ್ತು ವಿವಾಹಿತ ಮಹಿಳೆಯರೊಂದಿಗೆ ಡೇಟಿಂಗ್ ಆರಂಭಿಸಿದ್ದ. ಅವನು ಮಧ್ಯವಯಸ್ಕ ಮಹಿಳೆಯರೊಂದಿಗೆ ಸಂಬಂಧ ಬೆಳೆಸಿ, ವಂಚಿಸಲು ಪ್ರಾರಂಭಿಸಿದ್ದ.

ಆರೋಪಿಯು ಕಳೆದ 20 ವರ್ಷಗಳಲ್ಲಿ 50 ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿದ್ದಾನೆ ಮತ್ತು ಅವರನ್ನೆಲ್ಲ ವಂಚಿಸಿದ್ದಾನೆ. ಸಧ್ಯಕ್ಕೆ ಆರೋಪಿಯನ್ನು ಒಡಿಶಾದ ಮಾದಕ ವ್ಯಸನ ಕೇಂದ್ರದಲ್ಲಿ ಬಂಧಿಸಲಾಗಿದೆ. ಅವನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Breaking Kannada News Live: ಧಾರವಾಡ ರಸ್ತೆ ಅಪಘಾತದಲ್ಲಿ ಮೂವರ ಸಾವು

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:50 am, Sun, 11 June 23

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?