ನೈವೇಲಿ ಥರ್ಮಲ್‌ ಘಟಕದಲ್ಲಿ ಬಾಯ್ಲರ್​ ಸ್ಫೋಟ, 6 ಮಂದಿ ಸಾವು

| Updated By: ಸಾಧು ಶ್ರೀನಾಥ್​

Updated on: Jul 01, 2020 | 3:21 PM

ಚೆನ್ನೈ: ಕೊರೊನಾ ಸಂಕಷ್ಟದ ನಡುವೆ ಕೈಗಾರಿಕಾ ಅವಗಡಗಳು ಹೆಚ್ಚಾಗಿ ವರದಿಯಾಗುತ್ತಿವೆ. ವಿಶಾಖಪಟ್ಟಣಂ ಮಹಾದುರಂತ ಸೇರಿದಂತೆ ಮೂರ್ನಾಲ್ಕು ಪ್ರಕರಣಗಳು ವರದಿಯಾಗಿವೆ. ಇದರಿಂದ ಅಮಾಯಕ ಜೀವಗಳು ಬಲಿಯಾಗಿವೆ. ಮೂಕ ಪ್ರಾಣಿಗಳು ಸಹ ಜೀವ ತೆತ್ತಿವೆ. ಕೊರೊನಾ ಸಮಯದಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ, ಲಾಕ್​ಡೌನ್ ಮುಗಿದ ಬಳಿಕ ದಿಢೀರನೆ ಕೆಲಸ ಶುರು ಮಾಡಿದಾಗ ಸರಿಯಾದ ಮೈಂಟೆನೆನ್ಸ್ ಇಲ್ಲದೆ ಕೈಗಾರಿಕೆಗಳಲ್ಲಿ ಇಂತಹ ಅಚಾತುರ್ಯಗಳು ಸಂಭವಿಸುತ್ತಿವೆ. ಇದೇ ರೀತಿ ತಮಿಳುನಾಡಿನಲ್ಲಿ ನೈವೇಲಿ ಥರ್ಮಲ್‌ ಪ್ಲಾಂಟ್‌ನ ಘಟಕ 5 ಬಾಯ್ಲರ್​ನಲ್ಲಿ ಸ್ಫೋಟಗೊಂಡು 6 ಮಂದಿ ಮೃತಪಟ್ಟಿರುವ […]

ನೈವೇಲಿ ಥರ್ಮಲ್‌ ಘಟಕದಲ್ಲಿ ಬಾಯ್ಲರ್​ ಸ್ಫೋಟ, 6 ಮಂದಿ ಸಾವು
Follow us on

ಚೆನ್ನೈ: ಕೊರೊನಾ ಸಂಕಷ್ಟದ ನಡುವೆ ಕೈಗಾರಿಕಾ ಅವಗಡಗಳು ಹೆಚ್ಚಾಗಿ ವರದಿಯಾಗುತ್ತಿವೆ. ವಿಶಾಖಪಟ್ಟಣಂ ಮಹಾದುರಂತ ಸೇರಿದಂತೆ ಮೂರ್ನಾಲ್ಕು ಪ್ರಕರಣಗಳು ವರದಿಯಾಗಿವೆ. ಇದರಿಂದ ಅಮಾಯಕ ಜೀವಗಳು ಬಲಿಯಾಗಿವೆ. ಮೂಕ ಪ್ರಾಣಿಗಳು ಸಹ ಜೀವ ತೆತ್ತಿವೆ. ಕೊರೊನಾ ಸಮಯದಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ, ಲಾಕ್​ಡೌನ್ ಮುಗಿದ ಬಳಿಕ ದಿಢೀರನೆ ಕೆಲಸ ಶುರು ಮಾಡಿದಾಗ ಸರಿಯಾದ ಮೈಂಟೆನೆನ್ಸ್ ಇಲ್ಲದೆ ಕೈಗಾರಿಕೆಗಳಲ್ಲಿ ಇಂತಹ ಅಚಾತುರ್ಯಗಳು ಸಂಭವಿಸುತ್ತಿವೆ.

ಇದೇ ರೀತಿ ತಮಿಳುನಾಡಿನಲ್ಲಿ ನೈವೇಲಿ ಥರ್ಮಲ್‌ ಪ್ಲಾಂಟ್‌ನ ಘಟಕ 5 ಬಾಯ್ಲರ್​ನಲ್ಲಿ ಸ್ಫೋಟಗೊಂಡು 6 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. ಹಾಗೂ ಸ್ಫೋಟದಿಂದ 17 ಜನರಿಗೆ ಗಾಯಗಳಾಗಿವೆ. ಇದೇ ಪ್ಲಾಂಟ್‌ನಲ್ಲಿ ಮೇ 7 ರಂದು ಸಹ ಸ್ಫೋಟ ಸಂಭವಿಸಿತ್ತು. ಇದು ಎರಡನೇ ಬಾರಿಗೆ ಸ್ಫೋಟಗೊಳ್ಳುತ್ತಿರುವುದು.

ಇಂದು ಬೆಳಿಗ್ಗೆ ಕಾರ್ಮಿಕರು ಕೆಲಸವನ್ನು ಪುನರಾರಂಭ ಮಾಡುವಾಗ ಈ ಅವಗಢ ಸಂಭವಿಸಿದೆ. ಮೃತರು ಗುತ್ತಿಗೆ ಕಾರ್ಮಿಕರು ಎಂದು ಹೇಳಲಾಗುತ್ತಿದೆ. ಗಾಯಗೊಂಡವರನ್ನು ಎನ್‌ಎಲ್‌ಸಿ ಲಿಗ್ನೈಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೇ 7 ರ ಘಟನೆಯಂತೆಯೇ ಅತಿಯಾದ ಉಷ್ಣತೆ ಮತ್ತು ಅಧಿಕ ಒತ್ತಡವು ಸ್ಫೋಟಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.