ಗುವಾಹಟಿ: ಅಸ್ಸಾಂನ ದಟ್ಟಾರಣ್ಯದಲ್ಲಿ 150 ಅಡಿ ಆಳದ ಕುಳಿಯ ಒಳಗೆ ಬಿದ್ದು ಆರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ವಲಸೆ ಕಾರ್ಮಿಕರು ಕದ್ದು-ಮುಚ್ಚಿ ಗಣಿಗಾರಿಕೆ ಮಾಡುತ್ತಿದ್ದರೇ ಎನ್ನುವ ಶಂಕೆ ವ್ಯಕ್ತವಾಗಿದೆ.
ಜೈನ್ತಿಯಾ ಹಿಲ್ಸ್ ಭಾಗದಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಲಾಗುತ್ತಿತ್ತು. ಗಣಿ ಜಾಗವನ್ನು ಅಗೆಯುವಾಗ ಕಾರ್ಮಿಕರು ಬಿದ್ದು ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ, ಇಲ್ಲಿ ಗಣಿಗಾರಿಕೆ ನಡೆದ ಯಾವುದೇ ಕುರುಹುಗಳು ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೃತಪಟ್ಟ ಜಾಗದಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತಿತ್ತು ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ. ಈ ಭಾಗದಲ್ಲಿ ಭೂಮಿಯನ್ನು ಅಗೆಯಲಾಗಿತ್ತು ಅಷ್ಟೇ. ಈ ಬಗ್ಗೆ ನಾವು ತನಿಖೆ ನಡೆಸುತ್ತೇವೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. 2018ರಲ್ಲಿ ಇದೇ ಭಾಗದಲ್ಲಿ ಗಣಿಗಾರಿಕೆ ಮಾಡುತ್ತಿದ್ದಾಗ ಕುಳಿ ಕುಸಿದು 15 ಜನರು ನಾಪತ್ತೆ ಆಗಿದ್ದರು.
2014ರಲ್ಲಿ ರಾಷ್ಟ್ರೀಯ ಹಸಿರು ಪ್ರಾಧಿಕಾರ ಮೇಘಾಲಯದಲ್ಲಿ ಗಣಿಗಾರಿಕೆ ಮಾಡುವುದನ್ನು ನಿಷೇಧ ಮಾಡಿತ್ತು. ಆದಾಗ್ಯೂ, ಇಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಅವಘಡ ಹೆಚ್ಚುತ್ತಲೇ ಇದೆ. ಗಣಿಗಾರಿಕೆ ನಿಷೇಧವಾಗಿದ್ದರೂ ಈ ಭಾಗದಲ್ಲಿ ಅದಿರು ಲಾರಿಗಳು ಹೆಚ್ಚು ತಿರುಗಾಡುತ್ತವೆ. ಸ್ಥಳೀಯ ಅಧಿಕಾರಿಗಳು ಕೂಡ ಇದರಲ್ಲಿ ಶಾಮೀಲಾಗಿದ್ದಾರೆಯೇ ಎನ್ನುವ ಶಂಕೆ ಇದೆ.
Shivamogga Blast ಲಾರಿಯಲ್ಲಿದ್ದ ಜಿಲೆಟಿನ್ ಸ್ಫೋಟ, ಸಾವಿನ ಸಂಖ್ಯೆ 8ಕ್ಕೆ ಏರಿಕೆ