ಬಿಹಾರದಲ್ಲಿ ಭೀಕರ ಅಪಘಾತ; ಅಂತ್ಯಕ್ರಿಯೆ ಮುಗಿಸಿ ವಾಪಸ್​​ ಬರುತ್ತಿದ್ದ ಆರು ಮಂದಿ ಸಾವು

| Updated By: Lakshmi Hegde

Updated on: Nov 16, 2021 | 9:51 AM

ಟ್ರಕ್​ ಹಾಗೂ ಎಸ್​ಯುವಿ ಡಿಕ್ಕಿಯ ರಭಸಕ್ಕೆ ಎಸ್​ಯುವಿ  ವಾಹನದಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದಂತೆ ಗಾಯಗೊಂಡ ನಾಲ್ವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಬಿಹಾರದಲ್ಲಿ ಭೀಕರ ಅಪಘಾತ; ಅಂತ್ಯಕ್ರಿಯೆ ಮುಗಿಸಿ ವಾಪಸ್​​ ಬರುತ್ತಿದ್ದ ಆರು ಮಂದಿ ಸಾವು
ಸಾಂಕೇತಿಕ ಚಿತ್ರ
Follow us on

ಬಿಹಾರದ ಜಮುಯಿ ಎಂಬಲ್ಲಿ ಟ್ರಕ್​​ ಮತ್ತು ಎಸ್​ಯುವಿ ವಾಹನದ ನಡುವೆ  ಭೀಕರ ಅಪಘಾತ ನಡೆದಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. ಹಾಗೇ, ನಾಲ್ವರಿಗೆ ಗಂಭೀರ ಗಾಯವಾಗಿದೆ. ಹಲ್ಸಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ,  ಪಿಪ್ರಾ ಎಂಬ ಹಳ್ಳಿಯ ಸಮೀಪ ಸಿಕಂದ್ರಾ-ಶೇಖ್​​ಪುರ ಮುಖ್ಯರಸ್ತೆಯಲ್ಲಿ ದುರ್ಘಟನೆ ನಡೆದದ್ದು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮೃತಪಟ್ಟವರಲ್ಲಿ 5 ಮಂದಿ ಜಮುಯಿಯ ಖೈರಾ ಬ್ಲಾಕ್​​ನ ನೌದಿಹಾದವರು. ಮತ್ತೊಬ್ಬರು ಸ್ಥಳೀಯರಲ್ಲ. ಇವರೆಲ್ಲ ಜಮುಯಿ ಖೈರಾದಿಂದ ಪಾಟ್ನಾಕ್ಕೆ ಒಂದು ಅಂತ್ಯಕ್ರಿಯೆಗಾಗಿ ತೆರಳಿದ್ದರು. ಅಲ್ಲಿಂದ ವಾಪಸ್​ ಬರುವಾಗ ಅಪಘಾತ ಉಂಟಾಗಿದೆ.  

ಟ್ರಕ್​ ಹಾಗೂ ಎಸ್​ಯುವಿ ಡಿಕ್ಕಿಯ ರಭಸಕ್ಕೆ ಎಸ್​ಯುವಿ  ವಾಹನದಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದಂತೆ ಗಾಯಗೊಂಡ ನಾಲ್ವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಭೀಕರ ಅಪಘಾತವಾಗುತ್ತಿದ್ದಂತೆ ಒಂದೇ ಬಾರಿಗೆ ಅನೇಕರು ಸ್ಥಳದಲ್ಲಿ ಸೇರಿದ ಪರಿಣಾಮ ಕೆಲ ಕಾಲ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಮೃತರ ಮತ್ತು ಗಾಯಗೊಂಡವರ ಕುಟುಂಬಕ್ಕೆ ವಿಷಯ ತಿಳಿಸಲಾಗಿದ್ದು, ಅವರೂ ಕೂಡ ಇಲ್ಲಿಗೆ ಆಗಮಿಸಿದ್ದಾರೆ.

ಇದನ್ನೂ ಓದಿ: Viral Video: ತನ್ನ ಎದುರಿಗಿದ್ದ ಮೊಸಳೆಗೆ ಚಪ್ಪಲಿ ತೋರಿಸಿ ಹೆದರಿಸಿದ ಮಹಿಳೆ! ಹೇಗಂತೀರಾ? ವಿಡಿಯೊ ನೋಡಿ