ಡಾರ್ಜೆಲಿಂಗ್: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನ ಬಾಗ್ಡೋಗ್ರಾದಲ್ಲಿ ಏಷ್ಯನ್ ಹೆದ್ದಾರಿ 2ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 6 ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ಧಾರ್ಮಿಕ ಕಾರ್ಯಕ್ರಮಕ್ಕಾಗಿ ಜಂಗ್ಲಿ ಬಾಬಾ ಮಂದಿರಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳಿಗೆ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದಿದೆ.
ಘೋಷ್ಪುಕೂರ್‌ನಿಂದ ಸಿಕ್ಕಿಂಗೆ ಹೋಗುತ್ತಿದ್ದ ಕಾರು ಈ ಜನರಿಗೆ ಡಿಕ್ಕಿ ಹೊಡೆಯುವ ಮೊದಲು ರಸ್ತೆ ವಿಭಜಕವನ್ನು ಮುರಿದಿದೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಧಾರ್ಮಿಕ ಆಚರಣೆಗಾಗಿ ಜಂಗ್ಲಿ ಬಾಬಾ ಮಂದಿರಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳು ಈ ವಾಹನದಲ್ಲಿದ್ದರು. ಆಗ ವೇಗವಾಗಿ ಬಂದ ವಾಹನವೊಂದು ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Tamil Nadu Road Accident: ತಮಿಳುನಾಡಿನ ತಿರುತ್ತಣಿಯಲ್ಲಿ ಭಾರೀ ರಸ್ತೆ ಅಪಘಾತ, ಐವರು ವಿದ್ಯಾರ್ಥಿಗಳು ಸಾವು
ಪೊಲೀಸ್ ವರದಿಗಳ ಪ್ರಕಾರ, ಘೋಷ್ಪುಕೂರ್‌ನಿಂದ ಸಿಕ್ಕಿಂಗೆ ಪ್ರಯಾಣಿಸುತ್ತಿದ್ದ ವಾಹನವು ಯಾತ್ರಾರ್ಥಿಗಳ ಗುಂಪಿಗೆ ಡಿಕ್ಕಿ ಹೊಡೆಯುವ ಮೊದಲು ರಸ್ತೆ ವಿಭಜಕದಿಂದ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ನಾಗರಿಕ ಸ್ವಯಂಸೇವಕ ಪ್ರಹ್ಲಾದ್ ರಾಯ್, ಗೋಬಿಂದ್ ಸಿಂಗ್ (22), ಅಮಲೇಶ್ ಚೌಧರಿ (20), ಕನಕ್ ಬರ್ಮನ್ (22), ಪ್ರಣಬ್ ರಾಯ್ (28) ಮತ್ತು ಪದಕಾಂತ್ ರಾಯ್ ಸಾವನ್ನಪ್ಪಿದ್ದಾರೆ.
Siliguri, West Bengal: A group returning from Baba Dham lost control and was hit by a car, causing 6 deaths and many injuries. The accident occurred near Bagdogra on National Highway 31. Emergency services responded, and the injured were taken to North Bengal Medical College… pic.twitter.com/8fxHWztdzJ
— IANS (@ians_india) August 12, 2024
ಗಾಯಗೊಂಡ ಇಬ್ಬರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ವಾಹನದ ನಿಯಂತ್ರಣ ತಪ್ಪಲು ನಿಖರವಾದ ಕಾರಣವನ್ನು ಕಂಡುಹಿಡಿಯಲು ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ