Gujarat Accident: ಜೀಪ್, ಟ್ರಕ್ ನಡುವೆ ಡಿಕ್ಕಿ: 7 ಮಂದಿ ಸಾವು, 8 ಜನರಿಗೆ ಗಂಭೀರ ಗಾಯ

ಜೀಪ್ ಹಾಗೂ ಟ್ರಕ್​ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ 7 ಮಂದಿ ಮೃತಪಟ್ಟು, 8 ಜನರು ಗಾಯಗೊಂಡಿರುವ ಘಟನೆ ಗುಜರಾತ್​ನ ಪಾಟನ್​ನಲ್ಲಿ ನಡೆದಿದೆ.

Gujarat Accident: ಜೀಪ್, ಟ್ರಕ್ ನಡುವೆ ಡಿಕ್ಕಿ: 7 ಮಂದಿ ಸಾವು, 8 ಜನರಿಗೆ ಗಂಭೀರ ಗಾಯ
ಆಂಬ್ಯುಲೆನ್ಸ್

Updated on: Feb 16, 2023 | 2:26 PM

ಜೀಪ್ ಹಾಗೂ ಟ್ರಕ್​ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ 7 ಮಂದಿ ಮೃತಪಟ್ಟು, 8 ಜನರು ಗಾಯಗೊಂಡಿರುವ ಘಟನೆ ಗುಜರಾತ್​ನ ಪಾಟನ್​ನಲ್ಲಿ ನಡೆದಿದೆ. ಪಟಾನ್​ ಜಿಲ್ಲೆಯ ರಾಧನ್​ಪುರದ ವಾರಾಹಿ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಟೈರ್ ಸ್ಫೋಟಗೊಂಡ ಪರಿಣಾಮ ಜೀಪ್ ರಸ್ತೆಯಲ್ಲಿ ನಿಂತಿದ್ದ ಟ್ರಕ್​ಗೆ ಡಿಕ್ಕಿ ಹೊಡೆದಿದೆ. ಮೃತರನ್ನು ಸಂಜುಬೆನ್ ಫುಲ್ವಾರಿ(50), ದೂದಾಭಾಯಿ, ರಾಧಾಬೆನ್, ಕಾಜಲ್​ಬೆನ್, ಅಮೃತಾಬೆನ್, ಪೀನಲ್ ವಂಜಾರಾ ಎಂದು ಗುರುತಿಸಲಾಗಿದೆ.

ಜೀಪ್‌ನಲ್ಲಿ ಕನಿಷ್ಠ 15 ಜನರು ಪ್ರಯಾಣಿಸುತ್ತಿದ್ದರು, ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಎನ್‌ಐ ವರದಿ ಮಾಡಿದೆ.

ಮತ್ತಷ್ಟು ಓದಿ: ಮಂಡ್ಯ: ಎರಡು ಕಾರುಗಳ ನಡುವೆ ಭೀಕರ ಅಪಘಾತ: ನಾಲ್ವರ ಸಾವು

ಜೀಪ್ ತುಂಬಾ ಹಳೆಯದಾಗಿದ್ದು, ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದೆ ಎಂದು ಸಂತ್ರಸ್ತರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
“ಮೃತರಲ್ಲಿ ನನ್ನ ಚಿಕ್ಕಮ್ಮ, ಸಹೋದರಿ ಮತ್ತು ನನ್ನ ಕುಟುಂಬದ ಇತರ ಐದು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಚಿಕಿತ್ಸೆಯಲ್ಲಿ

ನಂತರ ಸಾವನ್ನಪ್ಪಿದ್ದಾರೆ. ಇದು ತುಂಬಾ ಹಳೆಯದಾದ ವಾಹನವಾಗಿದ್ದು, 15 ಜನರನ್ನು ಕರೆದುಕೊಂಡು ಹೋಗಲಾಗುತ್ತಿತ್ತು, ಹಣದ ದುರಾಸೆಯಿಂದ ಚಾಲಕ ಜೀಪಿನಲ್ಲಿ ಅಷ್ಟು ಮಂದಿಯನ್ನು ಹತ್ತಿಸಿಕೊಂಡಿದ್ದ ಎನ್ನುವ ವಿಚಾರ ತಿಳಿದುಬಂದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ