ಹೈದರಾಬಾದ್: ಲೆಬನಾನ್ನ ರಾಜಧಾನಿ ಬೈರುತ್‌ನಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಸಾವಿರಾರು ಮಂದಿಗೆ ಗಾಯಗಳಾಗಿದ್ದು, 78 ಜನ ಮೃತಪಟ್ಟಿದ್ದಾರೆ.
ನಿನ್ನೆ ಸಂಭವಿಸಿದ ಈ ಘಟನೆಯಿಂದ ಇಡೀ ಬೈರುತ್ ಬೆಚ್ಚಿ ಬಿದ್ದಿದೆ. ಅಮೋನಿಯಂ ನೈಟ್ರೇಟ್ ಸಂಗ್ರಹಿಸಿದ್ದ ಗೋದಾಮಿನಲ್ಲಿ ಘಟನೆ ಸಂಭವಿಸಿದ್ದು, ಸರಿಯಾದ ಮುಂಜಾಗ್ರತೆ ವಹಿಸದೆ ಅಮೋನಿಯಂ ನೈಟ್ರೇಟ್ ಆಧಿಕ ಪ್ರಮಾಣದಲ್ಲಿ ಸಂಗ್ರಹಿಸಿದ್ದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ದುರಂತದಲ್ಲಿ 78 ಜನ ಮೃತಪಟ್ಟಿದ್ದು, 4 ಸಾವಿರಕ್ಕೂ ಅಧಿಕ ಜನರಿಗೆ ಗಾಯವಾಗಿದೆ.
ಕಟ್ಟಡ ಗಾಜುಗಳು ಪುಡಿ ಪುಡಿಯಾಗಿದ್ದು, ಸ್ಫೋಟ ಆಗಿರುವ ಸ್ಥಳದಿಂದ ಸುಮಾರು ಒಂದು ಮೈಲು ದೂರದಲ್ಲಿಯೂ ಕುಸಿದ ಕಟ್ಟಡಗಳ ಅವಶೇಷಗಳ ಅಡಿ ಜನ ಸಿಕ್ಕಿ ಹಾಕಿಕೊಂಡಿದ್ದಾರೆ. ರಕ್ಷಣಾ ಕಾರ್ಯ ನಡೆಯುತ್ತಿದೆ.
Absolutely aghast at these visuals from Beirut. Sending love and prayers to the Lebanese people ??❤️pic.twitter.com/7g7xFvJT6w
— Harjinder Singh Kukreja (@SinghLions) August 4, 2020
Published On - 6:54 am, Wed, 5 August 20