ಹೈದರಾಬಾದ್​ ಮೃಗಾಲಯದಲ್ಲಿರುವ 8 ಸಿಂಹಗಳಿಗೆ ಕೊರೊನಾ ಸೋಂಕು; ದೇಶದಲ್ಲೇ ಮೊದಲ ಪ್ರಕರಣ ಇದು

|

Updated on: May 04, 2021 | 5:53 PM

ಎಂಟು ಸಿಂಹಗಳಲ್ಲಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದ ಕಾರಣ ಏಪ್ರಿಲ್​ 29ರಂದು ಅವುಗಳ ಗಂಟಲುದ್ರವದ ಮಾದರಿ ಸಂಗ್ರಹಿಸಿ, ಆರ್​ಟಿ-ಪಿಸಿಆರ್​​ ಟೆಸ್ಟ್​ ಮಾಡಿಸಲಾಗಿತ್ತು.

ಹೈದರಾಬಾದ್​ ಮೃಗಾಲಯದಲ್ಲಿರುವ 8 ಸಿಂಹಗಳಿಗೆ ಕೊರೊನಾ ಸೋಂಕು; ದೇಶದಲ್ಲೇ ಮೊದಲ ಪ್ರಕರಣ ಇದು
ಪ್ರಾತಿನಿಧಿಕ ಚಿತ್ರ
Follow us on

ಹೈದರಾಬಾದ್​: ನಗರದ ಜೂಲಾಜಿಕಲ್ ಪಾರ್ಕ್​ನಲ್ಲಿರುವ ಎಂಟು ಸಿಂಹಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇಷ್ಟು ದಿನ ಬೇರೆ ದೇಶಗಳಲ್ಲಿ ಪ್ರಾಣಿಗಳಿಗೂ ಕೊರೊನಾ ಸೋಂಕು ತಗುಲಿದ್ದ ಬಗ್ಗೆ ವರದಿಗಳನ್ನು ಓದಿದ್ದರೂ ನಮ್ಮ ದೇಶದಲ್ಲಿ ಇಂಥ ಪ್ರಕರಣಗಳು ಕಂಡುಬಂದಿರಲಿಲ್ಲ. ಆದರೆ ಇದೇ ಮೊದಲಬಾರಿಗೆ ಹೈದರಾಬಾದ್​ನಲ್ಲಿ ಎಂಟು ಸಿಂಹಗಳಲ್ಲಿ ಕೊವಿಡ್ 19 ಸೋಂಕು ಕಾಣಿಸಿಕೊಂಡಿದೆ.

ಎಂಟು ಸಿಂಹಗಳಲ್ಲಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದ ಕಾರಣ ಏಪ್ರಿಲ್​ 29ರಂದು ಅವುಗಳ ಗಂಟಲುದ್ರವದ ಮಾದರಿ ಸಂಗ್ರಹಿಸಿ, ಆರ್​ಟಿ-ಪಿಸಿಆರ್​​ ಟೆಸ್ಟ್​ ಮಾಡಿಸಲಾಗಿತ್ತು. ಅದರ ವರದಿ ಈಗ ಬಂದಿದ್ದು ಎಲ್ಲ ಪ್ರಾಣಿಗಳಲ್ಲೂ ಸೋಂಕು ದೃಢಪಟ್ಟಿದೆ.

ಸದ್ಯ ಎಲ್ಲ ಸಿಂಹಗಳನ್ನೂ ಸಂಪೂರ್ಣವಾಗಿ ಐಸೋಲೇಟ್ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸಿಂಹಗಳೂ ಸಹ ಚಿಕಿತ್ಸೆಗೆ ಸ್ಪಂದಿಸುತ್ತಿವೆ. ಈ ನೆಹರೂ ಜೂಲಾಜಿಕಲ್​ ಪಾರ್ಕ್​ನಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಸಾರ್ವಜನಿಕರ ವೀಕ್ಷಣೆಗೂ ನಿರ್ಬಂಧ ಹೇರಲಾಗಿದೆ. ಮೃಗಾಲಯದ ಸಿಬ್ಬಂದಿ ಸಿಂಹಗಳ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದಾರೆ. ಆಹಾರವನ್ನೂ ಸಹ ಸೋಂಕು ರಹಿತಗೊಳಿಸಿ, ಪರೀಕ್ಷಿಸಿ ನೀಡಲಾಗುತ್ತಿದೆ.

ನಮ್ಮ ದೇಶದಲ್ಲಿ ಪ್ರಾಣಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಇದೇ ಮೊದಲಬಾರಿಗೆ ಆದರೂ, ಬೇರೆ ಕೆಲವು ದೇಶಗಳಲ್ಲಿ ಕಳೆದ ವರ್ಷವೇ ಇಂಥ ಕೇಸ್​ಗಳು ವರದಿಯಾಗಿವೆ. ಕಳೆದ ಏಪ್ರಿಲ್​ನಲ್ಲಿ ನ್ಯೂಯಾರ್ಕ್​ ಸಿಟಿಯಲ್ಲಿ ಹುಲಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಮನುಷ್ಯನ ಮೂಲಕ ಪ್ರಾಣಿಗಳಿಗೆ ಕೊರೊನಾ ಸೋಂಕು ತಗುಲುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಕೊರೊನಾ ಸೋಂಕು ಇದ್ದರೂ ಕೆಲವರಲ್ಲಿ ಅದರ ಲಕ್ಷಣಗಳು ಗೋಚರಿಸುವುದಿಲ್ಲ. ಅಂಥವರಿಂದಲೇ ಪ್ರಾಣಿಗಳಿಗೆ ಕೊವಿಡ್ ತಗುಲುತ್ತದೆ ಎಂಬುದು ದೃಢಪಟ್ಟಿದೆ.

ಇದನ್ನೂ ಓದಿ: 26 ಕ್ಕೂ ಹೆಚ್ಚು ಕೊರೊನಾ ರೋಗಿಗಳನ್ನು ಬದುಕುಳಿಸಿದ್ದಾರೆ ಈ ಶಿಕ್ಷಕ!

ಸಾಲ ಶೂಲ ಮಾಡಿ ದಿನನಿತ್ಯ ಕೂಲಿ ಮಾಡಿ ಆಸ್ಪತ್ರೆಗೆ 3 ಲಕ್ಷ ಹಣ ಕಟ್ಟಿದ್ರೂ ಉಳಿಯಲಿಲ್ಲ!