AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಮುಂದಾದ ಕೇಂದ್ರ, 5 ಪ್ರಮುಖ ನಗರಗಳಿಗೆ 800 ಮೆಟ್ರಿಕ್ ಟನ್ ಈರುಳ್ಳಿ ರವಾನೆ

ಈರುಳ್ಳಿ ಬೆಲೆ ದಿಢೀರ್ ಏರಿಕೆ ಕಂಡಿದ್ದು, ಸಾಮಾನ್ಯ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಕೆ.ಜಿ. ಈರುಳ್ಳಿ ಬೆಲೆ ಪ್ರಸ್ತುತ 60ರಿಂದ 75ಕ್ಕೆ ತಲುಪಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕೆಲವೇ ದಿನಗಳಲ್ಲಿ ಈರುಳ್ಳಿ ದರ 100ರ ಗಡಿ ದಾಟುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ. ಇದರ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಸರ್ಕಾರ ಈರುಳ್ಳಿ ಬೆಲೆ ಏರಿಕೆಗೆ ಬ್ರೇಕ್ ಹಾಕಲು ಮುಂದಾಗಿದೆ.

ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಮುಂದಾದ ಕೇಂದ್ರ, 5 ಪ್ರಮುಖ ನಗರಗಳಿಗೆ 800 ಮೆಟ್ರಿಕ್ ಟನ್ ಈರುಳ್ಳಿ ರವಾನೆ
pralhad joshi
ರಮೇಶ್ ಬಿ. ಜವಳಗೇರಾ
|

Updated on: Aug 25, 2026 | 6:57 PM

Share

ಮುಖ್ಯಾಂಶಗಳು

  • 5 ಪ್ರಮುಖ ನಗರಗಳಿಗೆ 800 ಮೆಟ್ರಿಕ್ ಟನ್ ಈರುಳ್ಳಿ ಪೂರೈಕೆ
  • ನಾಸಿಕ್ ನಿಂದ ಚೆನ್ನೈ, ಮಧುರೈ, ದೆಹಲಿ, ಎರ್ನಾಕುಲಂ, ಗುವಾಹಟಿಗೆ ಈರುಳ್ಳಿ ಪೂರೈಕೆFirst 'Kanda Express' with 800 tn onion to 5 City, to be retailed at Rs 35 kg Says pralhad joshi
  • ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಮಾಹಿತಿ

ನವದೆಹಲಿ, (ಆಗಸ್ಟ್ 25): ನಾಸಿಕ್ ನಿಂದ ಕಂದಾ ಎಕ್ಸ್ ಪ್ರೆಸ್ ವಿಶೇಷ ರೈಲುಗಳಲ್ಲಿ 5 ಪ್ರಮುಖ ನಗರಗಳಿಗೆ 800 ಮೆಟ್ರಿಕ್ ಟನ್ ಈರುಳ್ಳಿ (onion)  ಪೂರೈಸಲಾಗುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ (Union Minister pralhad joshi) ತಿಳಿಸಿದ್ದಾರೆ.ಆರಂಭಿಕವಾಗಿ ಚೆನ್ನೈ, ಮಧುರೈ, ದೆಹಲಿ, ಎರ್ನಾಕುಲಂ ಮತ್ತು ಗುವಾಹಟಿ ನಗರಗಳಿಗೆ ಕಂದಾ ಎಕ್ಸ್ ಪ್ರೆಸ್ ರೈಲು ಮೂಲಕ ಈರುಳ್ಳಿ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಇತರೆ ನಗರಗಳಿಗೂ ಪೂರೈಕೆ ಮಾಡಲಾಗುವುದು ಎಂದು ಹೇಳಿದ್ದಾರೆ.

35 ರೂ.ಕೆಜಿ ಬೆಲೆಯಲ್ಲಿ 800 ಮೆಟ್ರಿಕ್ ಟನ್ ಈರುಳ್ಳಿ

ಬಫರ್ ದಾಸ್ತಾನಿನ ಈರುಳ್ಳಿಯನ್ನು 35 ರೂಪಾಯಿ ಕೆಜಿ ದರದಲ್ಲಿ NCCF, NAFED ಮತ್ತು ಕೇಂದ್ರೀಯ ಭಂಡಾರ್ ಮೂಲಕ ಶೀಘ್ರದಲ್ಲೇ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. 5 ಪ್ರಮುಖ ನಗರಗಳಿಗೆ 800 ಮೆಟ್ರಿಕ್ ಟನ್ ಈರುಳ್ಳಿಯನ್ನು ‘ಕಂದಾ ಎಕ್ಸ್‌ಪ್ರೆಸ್’ ವಿಶೇಷ ರೈಲುಗಳಲ್ಲಿ ನಾಸಿಕ್‌ನಿಂದ ಸಾಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ನೋಡಿ: ಗ್ರಾಹಕರಿಗೆ ಕಣ್ಣೀರು ತರಿಸಿದ ಈರುಳ್ಳಿ ದರ: ಕೆಜಿಗೆ ನೂರು ರೂಪಾಯಿಯತ್ತ ಮುನ್ನುಗ್ಗುತ್ತಿದೆ ಬೆಲೆ!

ಕಂದಾ ಎಕ್ಸ್‌ಪ್ರೆಸ್ ರೈಲು ಸುಮಾರು 40 ಟ್ರಕ್‌ಗಳಿಗೆ ಸಮನಾದ ಸರಕನ್ನು ಸಾಗಿಸುವ ಸಾಮರ್ಥ್ಯ ಹೊಂದಿದ್ದು, ಬೃಹತ್ ಪ್ರಮಾಣದಲ್ಲಿ ಪ್ರಮುಖ ನಗರಗಳ ಮಾರುಕಟ್ಟೆಗಳಿಗೆ ಈರುಳ್ಳಿ ತಲುಪಿಸಲಾಗುತ್ತಿದೆ.

ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಮತ್ತು ಲಭ್ಯತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ಬೆಂಬಲ ಬೆಲೆ ನೀಡುವ ಮೂಲಕ ಗ್ರಾಹಕರು ಮತ್ತು ರೈತರ ಹಿತಾಸಕ್ತಿ ಕಾಪಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ನಿರಂತರವಾಗಿ ಸಮಯೋಚಿತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ

Follow Us
ಜಾರಕಿಹೊಳಿ ಮೇಲೆ ಇಡಿ ದಾಳಿ:‘ಕೈ’ ಮನೆಯೊಳಗೆ ಷಡ್ಯಂತ್ರದ ಮಾತಿನ ಸದ್ದು
ಜಾರಕಿಹೊಳಿ ಮೇಲೆ ಇಡಿ ದಾಳಿ:‘ಕೈ’ ಮನೆಯೊಳಗೆ ಷಡ್ಯಂತ್ರದ ಮಾತಿನ ಸದ್ದು
ಅಂಬಾನಿ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ; ರಾಧಿಕಾ ಮರ್ಚೆಂಟ್​ ನೃತ್ಯ
ಅಂಬಾನಿ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ; ರಾಧಿಕಾ ಮರ್ಚೆಂಟ್​ ನೃತ್ಯ
ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆರಾಯ: ರಸ್ತೆಗಳೆಲ್ಲಾ ಜಲಾವೃತ!
ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆರಾಯ: ರಸ್ತೆಗಳೆಲ್ಲಾ ಜಲಾವೃತ!
ಕೊಪ್ಪಳ ಹಾಸ್ಟೆಲ್​​ಗೆ ಬಂದು ತಿಗಣಿಗೆ ಮದ್ದು ನೀಡಿದ ಚೆನ್ನೈ ತಜ್ಞರು
ಕೊಪ್ಪಳ ಹಾಸ್ಟೆಲ್​​ಗೆ ಬಂದು ತಿಗಣಿಗೆ ಮದ್ದು ನೀಡಿದ ಚೆನ್ನೈ ತಜ್ಞರು
ಬಿಗ್​​ಬಾಸ್​​ ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಓಂ ಪ್ರಕಾಶ್ ರಾವ್
ಬಿಗ್​​ಬಾಸ್​​ ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಓಂ ಪ್ರಕಾಶ್ ರಾವ್
ಅರಿಶಿನದ ಕೊಂಬುಗಳಿಂದಲೇ ಸಿದ್ಧವಾದ ಪರಿಸರಸ್ನೇಹಿ ಗಣೇಶನ ಮೂರ್ತಿ!
ಅರಿಶಿನದ ಕೊಂಬುಗಳಿಂದಲೇ ಸಿದ್ಧವಾದ ಪರಿಸರಸ್ನೇಹಿ ಗಣೇಶನ ಮೂರ್ತಿ!
ಕೆಡಿಪಿ ಸಭೆಗೆ ಪೊಲೀಸ್ ಆಯುಕ್ತ ಗೈರಾಗಿದ್ದಕ್ಕೆ ಸಚಿವ ಯು.ಟಿ.ಖಾದರ್ ಗರಂ
ಕೆಡಿಪಿ ಸಭೆಗೆ ಪೊಲೀಸ್ ಆಯುಕ್ತ ಗೈರಾಗಿದ್ದಕ್ಕೆ ಸಚಿವ ಯು.ಟಿ.ಖಾದರ್ ಗರಂ
ಗಂಭೀರ ಪಡೆದುಕೊಂಡ ಜಾರಕಿಹೊಳಿ ಕೇಸ್: ಇಡಿ ಸಭೆಯಲ್ಲಿ ಮಹತ್ವದ ಚರ್ಚೆ
ಗಂಭೀರ ಪಡೆದುಕೊಂಡ ಜಾರಕಿಹೊಳಿ ಕೇಸ್: ಇಡಿ ಸಭೆಯಲ್ಲಿ ಮಹತ್ವದ ಚರ್ಚೆ
LIVE: ಕೇಂದ್ರ ಸಚಿವ ಜೆ.ಪಿ‌.ನಡ್ಡಾ ಮಹತ್ವದ ಸುದ್ದಿಗೋಷ್ಠಿ
LIVE: ಕೇಂದ್ರ ಸಚಿವ ಜೆ.ಪಿ‌.ನಡ್ಡಾ ಮಹತ್ವದ ಸುದ್ದಿಗೋಷ್ಠಿ
ಕ್ಯಾರೆಕ್ಟರ್ ಲೆಸ್ ಎಂದ ಮಂಜ, ಗಂಡಸೇ ಅಲ್ಲ ಎಂದ ಕಾವ್ಯಾ: ವಿಡಿಯೋ
ಕ್ಯಾರೆಕ್ಟರ್ ಲೆಸ್ ಎಂದ ಮಂಜ, ಗಂಡಸೇ ಅಲ್ಲ ಎಂದ ಕಾವ್ಯಾ: ವಿಡಿಯೋ