West Bengal Elections 2021: ಟಿಎಂಸಿ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿದ್ದರು ಎನ್ನಲಾದ ಬಿಜೆಪಿ ಕಾರ್ಯಕರ್ತನ 85 ವರ್ಷದ ವೃದ್ಧತಾಯಿ ನಿಧನ

ಟಿಎಂಸಿಯ ಗೂಂಡಾಗಳಿಂದ ಹಲ್ಲೆಗೊಳಗಾಗಿದ್ದ ಶೋವಾ ಮಜೂಮ್ದಾರ್ ಅವರ ಸಾವು ದೀದಿಯನ್ನು ಬಹು ಕಾಲದವರೆಗೆ ಕಾಡಲಿದೆ. ಪಶ್ಚಿಮ ಬಂಗಾಳ ಮುಂದಿನ ದಿನಗಳಲ್ಲಿ ಸಹೋದರಿಯರಿಗೆ ಮತ್ತು ತಾಯಂದರಿಗೆ ಸುರಕ್ಷತೆ ಒದಗಿಸಲು ಹೋರಾಟ ನಡೆಸಲಿದೆ; ಗೃಹ ಸಚಿವ ಅಮಿತ್ ಶಾ

West Bengal Elections 2021: ಟಿಎಂಸಿ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿದ್ದರು ಎನ್ನಲಾದ ಬಿಜೆಪಿ ಕಾರ್ಯಕರ್ತನ 85 ವರ್ಷದ ವೃದ್ಧತಾಯಿ ನಿಧನ
ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತ ಗೋಪಾಲ್ ಮಜೂಮ್ದಾರ್ ಅವರ ತಾಯಿ ಶೋಲಾ ಮಜೂಮ್ದಾರ್ ಇಂದು ಮೃತಪಟ್ಟಿದ್ದಾರೆ.
Edited By:

Updated on: Mar 29, 2021 | 3:26 PM

ಕೊಲ್ಕತ್ತಾ: ಟಿಎಂಸಿ ಕಾರ್ಯಕರ್ತರಿಂದ ಹಲ್ಲೆಗೆ ಒಳಗಾಗಿದ್ದಾರೆ ಎಂದು ಹೇಳಲಾಗಿದ್ದ ಪಶ್ಚಿಮ ಬಂಗಾಳ ಬಿಜೆಪಿ ಕಾರ್ಯಕರ್ತ ಗೋಪಾಲ್ ಮಜುಮ್​ದಾರ್​ ಎಂಬುವವರ ತಾಯಿ 85 ವರ್ಷದ ಶೋಭಾ ಮಜುಮ್​ದಾರ್ ಇಂದು (ಮಾರ್ಚ್ 29) ಬೆಳಗ್ಗೆ ಅಸುನೀಗಿದ್ದಾರೆ. ಅವರ ಸಾವಿಗೆ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಕೆಲ ಬಿಜೆಪಿ ನಾಯಕರು ದುಃಖ ವ್ಯಕ್ತಪಡಿಸಿದ್ದಾರೆ. ಬಂಗಾಳ ತನ್ನ ಕುವರಿಯನ್ನು ಕಳೆದುಕೊಂಡಿದೆ. ಟಿಎಂಸಿಯ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿದ್ದ ಶೋಭಾ ಮಜುಮ್​ದಾರ್ ಅವರ ಸಾವು ದೀದಿಯನ್ನು ಬಹು ಕಾಲದವರೆಗೆ ಕಾಡಲಿದೆ. ಪಶ್ಚಿಮ ಬಂಗಾಳ ಮುಂದಿನ ದಿನಗಳಲ್ಲಿ ಸಹೋದರಿಯರಿಗೆ ಮತ್ತು ತಾಯಂದರಿಗೆ ಸುರಕ್ಷತೆ ಒದಗಿಸಲು ಹೋರಾಟ ನಡೆಸಲಿದೆ ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ

ಟಿಎಂಸಿ ಪಕ್ಷಕ್ಕೆ ಸೇರಿದ ಗೂಂಡಾಗಳು ತಮ್ಮ ಮನೆಗೆ ನುಗ್ಗಿ ತಮ್ಮ ವೃದ್ಧ ತಾಯಿ ಮತ್ತು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ಗೋಪಾಲ್ ಮಜೂಮ್ದಾರ್ ಮಾರ್ಚ್ 1ರಂದು ಆರೋಪಿಸಿದ್ದರು. ಅವರ ತಾಯಿ ಶೋವಾ ಮಜೂಮ್ದಾರ್ ತಮ್ಮ ಮೇಲೆ ಹಲ್ಲೆ ನಡೆದ ಘಟನೆಯನ್ನು ವಿವರಿಸಿರುವ ವಿಡಿಯೋವನ್ನು ಪಶ್ಚಿಮ ಬಂಗಾಳದ ಬಿಜೆಪಿ ಘಟಕವು ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿತ್ತು

‘ಅವರು ನನ್ನ ಕುತ್ತಿಗೆ ಮತ್ತು ತಲೆಗೆ ಹೊಡೆದರು. ನನ್ನ ಮುಖಕ್ಕೂ ಗುದ್ದಿದರು. ನಂತರ, ಹೀಗೆ ಹೊಡೆದಿರುವುದನ್ನು ಯಾರಿಗೂ ಹೇಳಬೇಡ ಎಂದು ಹೆದರಿಸಿದರು. ನನ್ನ ಇಡೀ ದೇಹ ನೋವಿನಲ್ಲಿದೆ’ ಎಂದು ಹಲ್ಲೆಗೊಳಗಾದ ಉತ್ತರ 24 ಪರಗಣ ಪ್ರಾಂತ್ಯದ ಬಿಜೆಪಿ ಕಾರ್ಯಕರ್ತ ಗೋಪಾಲ್ ಮಜೂಮ್ದಾರ್ ಅವರ ತಾಯಿ ಶೋವಾ ಮಜೂಮ್ದಾರ್ ಹೇಳಿಕೊಂಡಿದ್ದರು.

ಗೃಹ ಸಚಿವ ಅಮಿತ್ ಶಾ ಅವರ ಟ್ವೀಟ್​ಗೆ ಪ್ರತಿಕ್ರಿಯೆ ನೀಡುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅಮಿತ್ ಶಾ ಅವರು ಏಕೆ ಬಂಗಾಳದ ಪ್ರಶ್ನೆ ಎತ್ತಿದ್ದಾರೆ ತಿಳಿಯದು. ರಾಜ್ಯದಲ್ಲಿ ನಾವು ಯಾರ ಮೇಲೂ ಹಿಂಸಾಚಾರ ನಡೆಯಲು ಪ್ರಚೋದನೆ ನೀಡುವುದಿಲ್ಲ. ಹಾಗಾದರೆ, ಉತ್ತರ ಪ್ರದೇಶದ ಭದ್ರತೆಯ ಮಟ್ಟ ಹೇಗಿದೆ ಎಂದು ಗೃಹ ಸಚಿವ ಅಮಿತ್ ಶಾ ಅವರು ಒಮ್ಮೆ ಅವಲೋಕಿಸಲಿ ಎಂದು ಎದುರೇಟು ನೀಡಿದ್ದಾರೆ.

ಬಿಜೆಪಿಯ ಈ ಆರೋಪವನ್ನು ತಳ್ಳಿಹಾಕಿರುವ ಟಿಎಂಸಿ ನಾಯಕ ಡೆರೆಕ್ ಓಬ್ರಿಯನ್, ‘ಟಿಎಂಸಿಯ ಧನಾತ್ಮಕ ಪರಿಣಾಮಕಾರಿ ಕ್ಯಾಂಪೇನ್​ಗೆ ಹೆದರಿ ಬಿಜೆಪಿ ಇಂತಹ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಟಿಎಂಸಿ ವಿರುದ್ಧ ಆರೋಪಿಸಲು ಯಾವುದೇ ತಿರುಳು ಸಿಗದೇ ಬಿಜೆಪಿ ಇಂತಹ ಸುಳ್ಳು ಆರೋಪ ಮಾಡುತ್ತಿದೆ’ ಎಂದು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: West Bengal Assembly Elections 2021: ಬಿಜೆಪಿ ಕಾರ್ಯಕರ್ತನ ತಾಯಿ ಮೇಲೆ ಟಿಎಂಸಿ ಕಾರ್ಯಕರ್ತರಿಂದ ಹಲ್ಲೆ ಆರೋಪ

Fact Check: ಪಶ್ಚಿಮ ಬಂಗಾಳದ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಜನರನ್ನು ಆಕರ್ಷಿಸಲು ಖಾಲಿ ಕುರ್ಚಿಯಲ್ಲಿ ಊಟದ ಪೊಟ್ಟಣ, ವೈರಲ್ ಆಗಿದ್ದು ಹಳೇ ಫೋಟೊ

West Bengal Election 2021: ಪಶ್ಚಿಮ ಬಂಗಾಳದಲ್ಲಿ ಆಡಿಯೋ ಸಮರ; ‘ಫೋನ್ ಟ್ಯಾಪ್​ ಮಾಡಿದ್ಯಾರು’ ಎಂದು ಪ್ರಶ್ನಿಸಿದ ಗೃಹ ಸಚಿವ ಅಮಿತ್ ಶಾ