West Bengal Election 2021: ಪಶ್ಚಿಮ ಬಂಗಾಳದಲ್ಲಿ ಆಡಿಯೋ ಸಮರ; ‘ಫೋನ್ ಟ್ಯಾಪ್​ ಮಾಡಿದ್ಯಾರು’ ಎಂದು ಪ್ರಶ್ನಿಸಿದ ಗೃಹ ಸಚಿವ ಅಮಿತ್ ಶಾ

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅಮಿತ್ ಶಾ, ಬಿಜೆಪಿಯ ಇಬ್ಬರು ಮುಖಂಡರು ಮಾತನಾಡಿದ್ದರಲ್ಲಿ ಗುಟ್ಟು ಏನೂ ಇಲ್ಲ. ಅವರೇನು ಮಾತನಾಡಿದ್ದಾರೋ, ಅದನ್ನು ಲಿಖಿತವಾಗಿ ಮನವಿ ರೂಪದಲ್ಲಿ ನಾವು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದೇವೆ ಎಂದಿದ್ದಾರೆ.

West Bengal Election 2021: ಪಶ್ಚಿಮ ಬಂಗಾಳದಲ್ಲಿ ಆಡಿಯೋ ಸಮರ; ‘ಫೋನ್ ಟ್ಯಾಪ್​ ಮಾಡಿದ್ಯಾರು’ ಎಂದು ಪ್ರಶ್ನಿಸಿದ ಗೃಹ ಸಚಿವ ಅಮಿತ್ ಶಾ
ಅಮಿತ್ ಶಾ
Follow us
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 28, 2021 | 6:14 PM

ಪಶ್ಚಿಮ ಬಂಗಾಳದಲ್ಲಿ ಕಳೆದೆರಡು ದಿನಗಳಿಂದ ಬಿಜೆಪಿ ಮತ್ತು ಟಿಎಂಸಿ ನಡುವೆ ಆಡಿಯೋ ಸಮರ ನಡೆಯುತ್ತಿದೆ. ಇತ್ತೀಚೆಗಷ್ಟೇ ಟಿಎಂಸಿ ತೊರೆದು ಬಿಜೆಪಿ ಸೇರಿ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿಯವರೇ ಸ್ಪರ್ಧೆಗೆ ಇಳಿದಿದ್ದು ಗೊತ್ತೇ ಇದೆ. ನಿನ್ನೆ ಮೊದಲ ಹಂತದ ಮತದಾನ ನಡೆಯುತ್ತಿರುವ ಹೊತ್ತಲ್ಲಿ ಸುವೇಂದು ಅಧಿಕಾರಿ ಆಪ್ತ, ನಂದಿಗ್ರಾಮದ ಬಿಜೆಪಿ ಮುಖಂಡ ಪ್ರಲಯ್​ ಪಾಲ್​ ಮಮತಾ ಬ್ಯಾನರ್ಜಿ ವಿರುದ್ಧ ಆರೋಪವೊಂದನ್ನು ಮಾಡಿದ್ದರು. ಸಿಎಂ ಮಮತಾ ನನಗೆ ಕರೆ ಮಾಡಿ ನಂದಿಗ್ರಾಮದಲ್ಲಿ ಟಿಎಂಸಿ ಗೆಲುವಿಗೆ ಸಹಕಾರ ನೀಡುವಂತೆ ಹೇಳಿದ್ದರು ಎಂದು ಹೇಳಿದ್ದರು. ಅಲ್ಲದೆ ಆ ಕಾಲ್​ ರೆಕಾರ್ಡ್​ನ ಆಡಿಯೋವನ್ನೂ ಬಿಡುಗಡೆ ಮಾಡಿದ್ದರು. ಆದರೆ ಟಿಎಂಸಿ, ಈ ಆಡಿಯೋದಲ್ಲಿ ಮಾತನಾಡಿರುವುದು ಮಮತಾ ಬ್ಯಾನರ್ಜಿ ಅಲ್ಲ ಎಂದು ಸಮರ್ಥನೆ ಮಾಡಿಕೊಂಡಿತ್ತು.

ಅದಾದ ಬಳಿಕ ಟಿಎಂಸಿ ಈ ಆಡಿಯೋಕ್ಕೆ ಒಂದು ಕೌಂಟರ್​ ಕೊಟ್ಟಿತ್ತು. ಪಶ್ಚಿಮ ಬಂಗಾಳ ಬಿಜೆಪಿ ನಾಯಕರಾದ ಮುಕುಲ್ ರಾಯ್ ಹಾಗೂ ಶಿಶಿರ್ ಬಾಜೋರಿಯಾ ನಡುವೆ ನಡೆದ ಫೋನ್​ ಸಂಭಾಷಣೆಯ ಆಡಿಯೋ ಇದು. ಇದರಲ್ಲಿ ಇಬ್ಬರೂ ನಾಯಕರು, ವಿಧಾನಸಭೆ ಚುನಾವಣೆ ಹೊತ್ತಲ್ಲಿ ಚುನಾವಣಾ ಆಯೋಗದ ಮೇಲೆ ಪ್ರಭಾವ ಬೀರುವುದು ಹೇಗೆ ಎಂಬುದನ್ನು ಚರ್ಚಿಸಿದ್ದನ್ನು ಕೇಳಬಹುದು. ಇದು ಚುನಾವಣೆ ನಡೆಯುವ ಕೆಲವೇ ದಿನ ನಡೆದ ಸಂಭಾಷಣೆ ಎಂದು ಟಿಎಂಸಿ ಹೇಳಿಕೊಂಡಿದೆ.

ಚುನಾವಣಾ ಆಯೋಗದ ಅಧಿಕಾರಿಗಳು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದಾಗ ಬಿಜೆಪಿ ನಿಯೋಗ ಅವರನ್ನು ಭೇಟಿ ನೀಡಿ, ಮತಗಟ್ಟೆ ಏಜೆಂಟ್​ ಅದೇ ವಿಧಾನಸಭಾ ಕ್ಷೇತ್ರಕ್ಕೆ ಸೇರಿದವರೇ ಆಗಿರಬೇಕು ಎಂಬ ನಿಯಮವನ್ನು ತೆಗೆಯಬೇಕು. ಅದರ ಬದಲಿಗೆ ಯಾರಾದರೂ ಮತಗಟ್ಟೆಯಲ್ಲಿ ಇರಬಹುದು ಎಂಬ ರೂಲ್ಸ್ ತರುವಂತೆ ಹೇಳಬೇಕು ಎಂದು ಮುಕುಲ್ ರಾಯ್​ ಅವರು ಶಿಶಿರ್​ ಬಾಜೋರಿಯಾಗೆ ಸೂಚನೆ ನೀಡಿದ್ದು ಈ ಆಡಿಯೋದಲ್ಲಿ ಕೇಳಿಸುತ್ತದೆ. ಇದನ್ನೇ ಇಟ್ಟುಕೊಂಡ ಟಿಎಂಸಿ, ಚುನಾವಣಾ ಆಯೋಗವನ್ನು ಬಿಜೆಪಿ ತನಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ. ಚುನಾವಣಾ ಆಯೋಗ ಬಿಜೆಪಿಯ ಮಾತನ್ನೇ ಕೇಳಿ, ಅದು ಹೇಳಿದಂತೆ ನಿಯಮ ರೂಪಿಸುತ್ತಿದೆ ಎಂದು ಆರೋಪ ಮಾಡಿತ್ತು.

ಅಮಿತ್​ ಶಾ ಪ್ರತಿಕ್ರಿಯೆ  ಈ ಆಡಿಯೋ ಸಮರಕ್ಕೆ ಗೃಹ ಸಚಿವ ಅಮಿತ್​ ಶಾ ಪ್ರತಿಕ್ರಿಯೆ ನೀಡಿದ್ದಾರೆ. ಇಬ್ಬರ ಬಿಜೆಪಿ ಮುಖಂಡರು ಫೋನ್​ನಲ್ಲಿ ಮಾತನಾಡಿದ್ದು ಹೀಗೆ ಲೀಕ್​ ಆಗುತ್ತದೆ ಎಂದರೆ ಫೋನ್​ ಟ್ಯಾಪ್ ಮಾಡಿದ್ದು ಯಾರು? ಯಾಕಾಗಿ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಅಷ್ಟಕ್ಕೂ ಇವರಿಬ್ಬರ ಮಾತುಕತೆಯಲ್ಲಿ ಗುಟ್ಟು ಎಂಬುದು ಏನಿದೆ ಎಂದು ಕೇಳಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅಮಿತ್ ಶಾ, ಬಿಜೆಪಿಯ ಇಬ್ಬರು ಮುಖಂಡರು ಮಾತನಾಡಿದ್ದರಲ್ಲಿ ಗುಟ್ಟು ಏನೂ ಇಲ್ಲ. ಅವರೇನು ಮಾತನಾಡಿದ್ದಾರೋ, ಅದನ್ನು ಲಿಖಿತವಾಗಿ ಮನವಿ ರೂಪದಲ್ಲಿ ನಾವು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದೇವೆ. ಇದನ್ನು ಟ್ಯಾಪ್​ ಮಾಡುವ ಅಗತ್ಯ ಇರಲಿಲ್ಲ. ಆದರೆ ಫೋನ್​ ಟ್ಯಾಪ್ ಮಾಡಿದ್ದು ಯಾರು? ಎಂಬ ಪ್ರಶ್ನೆ ಇಲ್ಲಿ ಹುಟ್ಟುತ್ತದೆ. ನೀವು ಮಾಧ್ಯಮದವರು ಯಾಕೆ ಈ ಪ್ರಶ್ನೆ ಎತ್ತಲಿಲ್ಲ ಎಂದೂ ಕೇಳಿದ್ದಾರೆ. ಅಂದರೆ ಸರ್ಕಾರ ಪ್ರತಿಪಕ್ಷಗಳ ನಾಯಕರ ಫೋನ್ ಟ್ಯಾಪ್​ ಮಾಡುತ್ತದೆ ಎಂದಾಯಿತಲ್ಲವೇ ಎಂದು ಅಮಿತ್​ ಶಾ ಹೇಳಿದ್ದಾರೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಬೆಂಬಲಿಗರನ್ನು ಚಂಬಲ್ ಕಣಿವೆಯ ಡಕಾಯಿತರಿಗೆ ಹೋಲಿಸಿದ ಕಾಂಗ್ರೆಸ್

ಪೈರಸಿ ಮಾಡುತ್ತಿದ್ದ ಅತಿ ದೊಡ್ಡ ಜಾಲ ಅರೆಸ್ಟ್; ಇವರ ತಂತ್ರಜ್ಞಾನ ನೋಡಿ ಪೊಲೀಸರೇ ಕಂಗಾಲು

Published On - 5:56 pm, Sun, 28 March 21

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ