Tamil Nadu Elections 2021: ತಮಿಳುನಾಡು ಸಿಎಂ ಪಳನಿಸ್ವಾಮಿ ಅವರು ನರೇಂದ್ರ ಮೋದಿ ಪಾದಕ್ಕೆ ನಮಸ್ಕರಿಸುವುದನ್ನು ನೋಡಲಾಗುತ್ತಿಲ್ಲ: ರಾಹುಲ್ ಗಾಂಧಿ

ತಮಿಳುನಾಡಿನ ಮುಖ್ಯಮಂತ್ರಿ ಅವರನ್ನು ಪ್ರಧಾನಿ ನರೇೆಂದ್ರ ಮೋದಿ ನಿಯಂತ್ರಿಸುತ್ತಾ, ಮೌನವಾಗಿ ಅವರ ಪಾದಕ್ಕೆ ನಮಸ್ಕಾರ ಮಾಡುವಂತೆ ಹೇಳಿದ್ದನ್ನು  ಒಪ್ಪಿಕೊಳ್ಳಲು ನಾನು ಸಿದ್ಧನಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Tamil Nadu Elections 2021: ತಮಿಳುನಾಡು ಸಿಎಂ ಪಳನಿಸ್ವಾಮಿ ಅವರು ನರೇಂದ್ರ ಮೋದಿ ಪಾದಕ್ಕೆ ನಮಸ್ಕರಿಸುವುದನ್ನು ನೋಡಲಾಗುತ್ತಿಲ್ಲ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us
ರಶ್ಮಿ ಕಲ್ಲಕಟ್ಟ
|

Updated on:Mar 28, 2021 | 4:12 PM

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಇ. ಪಳನಿಸ್ವಾಮಿ ಅವರು ಮುಂದೆ ತಲೆ ಬಾಗಿ, ಪಾದಕ್ಕೆ ನಮಸ್ಕರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಮಾಡಿದ್ದಾರೆ. ಅವರ ಮುಂದೆ ತಮಿಳುನಾಡು ತಲೆ ಬಾಗುವುದನ್ನು  ನನ್ನಿಂದ ನೋಡಲಾಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಭಾನುವಾರ ಚೆನ್ನೈನಲ್ಲಿ ಚುನಾವಣಾ ಪ್ರಚಾರ ನಡೆಸಿದ ರಾಹುಲ್ ಗಾಂಧಿ, ಚುನಾಯಿತ ಪ್ರತಿನಿಧಿಯೊಬ್ಬರು ಅಮಿತ್ ಶಾ ಅವರ ಪಾದಕ್ಕೆ ನಮಸ್ಕರಿಸುತ್ತಿರುವ ಫೋಟೊವನ್ನು ನಾನು ನೋಡಿದ್ದೇನೆ. ಬಿಜೆಪಿ ನಾಯಕರ ಪಾದಕ್ಕೆ ನಮಸ್ಕರಿಸಿದರೆ, ನರೇಂದ್ರ ಮೋದಿ ಅಥವಾ ಅಮಿತ್ ಶಾ ಅವರ ಮುಂದೆ ತಲೆಬಾಗಿದರೆ ಮಾತ್ರ ಆ ರಾಜ್ಯದಲ್ಲಿ  ಬಿಜೆಪಿ ಮೈತ್ರಿ ಮಾಡುತ್ತದೆ ಎಂದಿದ್ದಾರೆ.

ತಮಿಳುನಾಡಿನ ಮುಖ್ಯಮಂತ್ರಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ನಿಯಂತ್ರಿಸುತ್ತಾ, ಮೌನವಾಗಿ ಅವರ ಪಾದಕ್ಕೆ ನಮಸ್ಕಾರ ಮಾಡುವಂತೆ ಹೇಳಿದ್ದನ್ನು ಒಪ್ಪಿಕೊಳ್ಳಲು ನಾನು ಸಿದ್ಧನಿಲ್ಲ. ತಮಿಳುನಾಡಿನ ಮುಖ್ಯಮಂತ್ರಿ ಅಮಿತ್ ಶಾ ಮುಂದೆ ತಲೆಬಾಗಬೇಕಾದ ಅಗತ್ಯವಿಲ್ಲ. ಆದರೆ ಅವರು ಮಾಡಿದ ಹಗರಣದಿಂದಾಗಿಯೇ ಬಲವಂತವಾಗಿ ತಲೆ ಬಾಗಬೇಕಾಯಿತು ಎಂದಿದ್ದಾರೆ ರಾಹುಲ್.

ಶ್ರೇಷ್ಠ ಸಂಪ್ರದಾಯ, ಸಮೃದ್ಧ ಭಾಷೆಯಿರುವ ತಮಿಳುನಾಡು ರಾಜ್ಯದ ಮುಖ್ಯಮಂತ್ರಿ ಅಮಿತ್ ಶಾ ಮತ್ತು ನರೇಂದ್ರ ಮೋದಿ ಅವರ ಮುಂದೆ ತಲೆಬಾಗುವುದನ್ನು ನನ್ನಿಂದ ನೋಡಲಾಗುತ್ತಿಲ್ಲ. ಈ ಜನರ ಮುಂದೆ ನಾಯಕರೊಬ್ಬರು ತಲೆಬಾಗುತ್ತಿರುವುದನ್ನು ನೋಡಿ ನನಗೆ ಸಿಟ್ಟು ಬಂತು. ಹಾಗಾಗಿಯೇ ನಾನು ಇಲ್ಲದ್ದೇನೆ. ತಮಿಳು ಜನರೊಂದಿಗೆ ನಾನು ಸಮಾನವಾದ ಸಂಬಂಧವನ್ನು ಬಯಸುತ್ತಿದ್ದೇನೆ. ಆದರೆ ಒಂದು ವ್ಯತ್ಯಾಸ ಇದೆ. ತಮಿಳುನಾಡು ಅಂದರೆ ಭಾರತ ಎಂದು ನಾನು ಹೇಳಿದರೆ, ಭಾರತ ಅಂದರೆ ತಮಿಳುನಾಡು ಎಂಬುದನ್ನು ಒಪ್ಪಿಕೊಳ್ಳಲೇ ಬೇಕು. ತಮಿಳುನಾಡು ಬಲವಂತವಾಗಿ ಭಾರತದ ಮುಂದೆ ಬಾಗುವುದಾದರೆ ಅದು ಭಾರತವಲ್ಲ, ಅದು ಬೇರೇನೋ ಎಂದು ರಾಹುಲ್ ಹೇಳಿದ್ದಾರೆ.

ನಮ್ಮ ಪಕ್ಷ ಮತ್ತು ಡಿಎಂಕೆ ಯಾವತ್ತೂ ತಮಿಳರು ಮತ್ತು ತಮಿಳುನಾಡಿನ ಆಸಕ್ತಿಯ ವಿರುದ್ಧವಾಗಿರುವ ವಿಚಾರಧಾರೆ ಜತೆ ರಾಜಿ ಮಾಡಿಕೊಳ್ಳುವುದಿಲ್ಲ. ಬಿಜೆಪಿ ಮತ್ತು ಆರ್​ಎಸ್ಎಸ್ ಈ ಚುನಾವಣೆಯಲ್ಲಿ ಪರಾಭವಗೊಳ್ಳಲಿದೆ. ಈ ಹಿಂದಿನ ಚುನಾವಣೆ ರಾಜಕೀಯ ಪಕ್ಷಗಳ ನಡುವೆ ನಡೆಯುತ್ತಿತ್ತು. ಆದರೆ ಈ ಬಾರಿ ಭಿನ್ನವಾಗಿರಲಿದೆ. ಇದು ತಮಿಳು ಚುನಾವಣೆ. ಎಐಎಡಿಎಂಕೆ, ಬಿಜೆಪಿ ಮತ್ತು ಆರ್​ಎಸ್​ಎಸ್ ಒಂದು ಕಡೆಯಾದರೆ ತಮಿಳುನಾಡು ಇನ್ನೊಂದು ಕಡೆ ಇದೆ. ಡಿಎಂಕೆ, ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಮೈತ್ರಿಕೂಟ ಅಧಿಕಾರಕ್ಕೇರಲಿದ್ದು, ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಮುಖ್ಯಮಂತ್ರಿಯಾಗಲಿದ್ದಾರೆ. ತಮಿಳುನಾಡಿನಲ್ಲಿ ವಿದ್ಯಾವಂತ ಯುವಜನರು ಇದ್ದಾರೆ. ಇದು ಮಾನವ ಸಂಪನ್ಮೂಲದ ರಾಜಧಾನಿ.  ಕಾರು ಚಲಾಯಿಸುವವರಿಗೆ ಗೊತ್ತಿರಬಹುದು,  ಶ್ರೀಪೆರುಂಬತ್ತೂರ್​ನಲ್ಲಿ ಆ ಕಾರುಗಳು ನಿರ್ಮಾಣವಾಗಿದ್ದು  ಎಂಬುದು ಎಂದು ಅಡಯಾರ್​ನಲ್ಲಿ ನಡೆದ ಸಭೆಯಲ್ಲಿ ರಾಹುಲ್ ಹೇಳಿದ್ದಾರೆ.

ಇದನ್ನೂ ಓದಿ: ಆರ್​ಎಸ್ಎಸ್​ನ್ನು ಸಂಘ ಪರಿವಾರ್ ಎಂದು ಹೇಳಬಾರದು, ಅವರಿಗೆ ಕುಟುಂಬದ ಮೌಲ್ಯಗಳು ಗೊತ್ತಿಲ್ಲ: ರಾಹುಲ್ ಗಾಂಧಿ Tamil Nadu Assembly Elections 2021: ಚುನಾವಣಾ ಪ್ರಚಾರದ ವೇಳೆ ದೋಸೆ ಮಾಡಿದ ನಟಿ, ಬಿಜೆಪಿ ಅಭ್ಯರ್ಥಿ ಖುಷ್ಬೂ

Published On - 4:07 pm, Sun, 28 March 21