AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tamil Nadu Assembly Elections 2021: ಚುನಾವಣಾ ಪ್ರಚಾರದ ವೇಳೆ ದೋಸೆ ಮಾಡಿದ ನಟಿ, ಬಿಜೆಪಿ ಅಭ್ಯರ್ಥಿ ಖುಷ್ಬೂ

ತಮಿಳುನಾಡಿನ ಥೌಸೆಂಡ್ ಲೈಟ್ಸ್ ಕ್ಷೇತ್ರದ ಪಶ್ಚಿಮ ಮಾಡ ಸ್ಟ್ರೀಟ್​ನಲ್ಲಿ ಖುಷ್ಬೂ ಚುನಾವಣಾ ಪ್ರಚಾರ ಕೈಗೊಂಡಿದ್ದರು. ಅಲ್ಲಿನ ರೆಸ್ಟೋರೆಂಟ್ ಒಂದರ ಬಳಿ ತೆರಳಿ, ತಮ್ಮ ಅಡುಗೆ ಕುಶಲತೆಯನ್ನು ಪ್ರದರ್ಶಿಸಿದ್ದಾರೆ.

Tamil Nadu Assembly Elections 2021: ಚುನಾವಣಾ ಪ್ರಚಾರದ ವೇಳೆ ದೋಸೆ ಮಾಡಿದ ನಟಿ, ಬಿಜೆಪಿ ಅಭ್ಯರ್ಥಿ ಖುಷ್ಬೂ
ದೋಸಾ ಮಾಡಿದ ಖುಷ್ಬೂ
TV9 Web
| Edited By: |

Updated on:Apr 05, 2022 | 1:09 PM

Share

ಚೆನ್ನೈ: ಖ್ಯಾತ ಚಲನಚಿತ್ರ ನಟಿ, ರಾಜಕಾರಣಿ ಹಾಗೂ ಭಾರತೀಯ ಜನತಾ ಪಾರ್ಟಿಯ ತಮಿಳುನಾಡು ಥೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಖುಷ್ಬೂ ಸುಂದರ್ ಇಂದು ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಈ ವೇಳೆ ಅವರು ದೋಸೆ ಮಾಡಿದ್ದಾರೆ. ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಖುಷ್ಬೂ ದೋಸೆ ಮಾಡಿರುವುದು ಜನರ ಗಮನ ಸೆಳೆದಿದೆ.

ತಮಿಳುನಾಡಿನ ಥೌಸೆಂಡ್ ಲೈಟ್ಸ್ ಕ್ಷೇತ್ರದ ಪಶ್ಚಿಮ ಮಾಡ ಸ್ಟ್ರೀಟ್​ನಲ್ಲಿ ಖುಷ್ಬೂ ಚುನಾವಣಾ ಪ್ರಚಾರ ಕೈಗೊಂಡಿದ್ದರು. ಅಲ್ಲಿನ ರೆಸ್ಟೋರೆಂಟ್ ಒಂದರ ಬಳಿ ತೆರಳಿ, ತಮ್ಮ ಅಡುಗೆ ಕುಶಲತೆಯನ್ನು ಪ್ರದರ್ಶಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿರುವಂತೆ ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷದ ಕಾರ್ಯಕರ್ತರು ವಿಧವಿಧದ ಪ್ರಚಾರ ಕ್ರಮಗಳನ್ನು ಪ್ರಯೋಗಿಸುತ್ತಾರೆ. ಇಂಥ ಕೆಲವಾರು ಘಟನೆಗಳು ತಮಿಳುನಾಡಿನಲ್ಲಿ ಈ ಬಾರಿ ನಡೆದಿದೆ.

ಎಐಡಿಎಂಕೆ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದ ಓರ್ವ ಯೋಗ ತರಬೇತುದಾರ ತಲೆಕೆಳಗಾಗಿ ನಿಂತು ಕಾರ್ ಎಳೆದಿದ್ದಾರೆ. ರಾಜ್ಯ ಸಚಿವ ಹಾಗೂ ಆರ್​ಎಸ್ ಪುರಂ ಅಭ್ಯರ್ಥಿ ಎಸ್.ಪಿ. ವೇಲುಮಣಿ ಪರವಾಗಿ ಮತಯಾಚನೆ ಮಾಡುವಾಗ ಈ ಘಟನೆಯೂ ನಡೆದಿದೆ. ಯೋಗದ ಬಗ್ಗೆ ಜಾಗೃತಿ ಮೂಡಿಸಲು, ಆರೋಗ್ಯ ಲಾಭದ ಬಗ್ಗೆ ತಿಳಿಸಲು ಹಾಗೂ ಅದರ ಜೊತೆಗೆ ಚುನಾವಣಾ ಪ್ರಚಾರ ಕೈಗೊಳ್ಳಲು ಈ ರೀತಿ ಮಾಡಿರುವುದಾಗಿ ಅವರು ಹೇಳಿದ್ದರು.

ಇದಕ್ಕೂ ಮೊದಲು ಸಂತೋಷ್ ಎಂಬ ಒಬ್ಬ ಪಕ್ಷೇತರ ಅಭ್ಯರ್ಥಿ, ತಂಜಾವೂರ್​ನಿಂದ ಕಲ್ಲಂಗಡಿ ಹಣ್ಣು ಹೊತ್ತುಕೊಂಡು ನಾಮಪತ್ರ ಸಲ್ಲಿಸಲು ತೆರಳಿದ್ದರು. ಚುನಾವಣೆಗೆ ಅವರಿಗೆ ‘ಹಣ್ಣು’ ಚಿಹ್ನೆ ನೀಡಲಾಗಿತ್ತು.. ಅದಕ್ಕಾಗಿ ಈ ಪ್ರಚಾರ ಕ್ರಮ ಕೈಗೊಂಡಿದ್ದರು. ಹರಿ ನಂದರ್ ಎಂಬ ಮತ್ತೋರ್ವ ಅಭ್ಯರ್ಥಿ ಅಲಂಗುಲಮ್ ಎಂಬಲ್ಲಿಂದ ನಾಮಪತ್ರ ಸಲ್ಲಿಸಲು 4.25 ಕೆ.ಜಿ. ಚಿನ್ನ ಧರಿಸಿ ತೆರಳಿದ್ದರು.

ತಂಗ ಷಣ್ಮುಗಸುಂದರಮ್ ಎಂಬ ರೈತ ಸಂಘಟನೆಯ ಅಭ್ಯರ್ಥಿ, ನಾಮಪತ್ರ ಸಲ್ಲಿಕೆ ವೇಳೆ ಹಳೆ ನೋಟು ಮತ್ತು ನಾಣ್ಯ ನೀಡಿ ಚುನಾವಣಾ ಠೇವಣಿ ಕೊಟ್ಟಿದ್ದರು.

ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಯು ಒಂದು ಹಂತದಲ್ಲಿ ನಡೆಯಲಿದೆ. ಏಪ್ರಿಲ್ 6ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಮತ ಎಣಿಕೆ ಮೇ 2ರಂದು ನಡೆಯಲಿದೆ. ಒಟ್ಟು 234 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್-ಡಿಎಂಕೆ ಹಾಗೂ ಬಿಜೆಪಿ-ಎಐಡಿಎಂಕೆ ಒಕ್ಕೂಟಗಳು ಪ್ರಬಲ ಪೈಪೋಟಿ ನಡೆಸಲಿವೆ.

ಇದನ್ನೂ ಓದಿ: ಮೋದಿ ವೀಸಾ ರದ್ದುಗೊಳಿಸಬೇಕು: ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶ ಪ್ರವಾಸ ಉದ್ದೇಶಿಸಿ ಮಮತಾ ಬ್ಯಾನರ್ಜಿ ವಾಗ್ದಾಳಿ

Tamil Nadu Election 2021: ಭರ್ಜರಿ ಡ್ಯಾನ್ಸ್​ ಮಾಡಿ, ಸ್ಕೂಟರ್​ ರೈಡ್ ಮಾಡಿ ಚುನಾವಣಾ ಪ್ರಚಾರ ನಡೆಸಿದ ಸಚಿವೆ ಸ್ಮೃತಿ ಇರಾನಿ

Published On - 11:17 pm, Sat, 27 March 21

ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ